ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ 3,500 ಆರೋಗ್ಯ ಕಾರ್ಯಕರ್ತರಿಗೆ ತರಬೇತಿ

|
Google Oneindia Kannada News

ನವದೆಹಲಿ, ಡಿಸೆಂಬರ್ 15: ಕೊರೊನಾ ಲಸಿಕೆಗೆ ಅನುಮತಿ ದೊರೆಯುತ್ತಿದ್ದಂತೆ ಸಾಮೂಹಿಕ ಲಸಿಕಾ ಕಾರ್ಯಕ್ರಮ ಕೈಗೊಳ್ಳಲು ದೇಶದಾದ್ಯಂತ ಸಿದ್ಧತೆ ನಡೆಯುತ್ತಿದೆ. ಇದರ ಬೆನ್ನಲ್ಲೇ ದೆಹಲಿಯಲ್ಲಿ ಕೊರೊನಾ ಲಸಿಕೆ ನೀಡಲು ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ಕೂಡ ಆರಂಭವಾಗಿದೆ.

ದೆಹಲಿಯಲ್ಲಿ ಸುಮಾರು 3,500 ಆರೋಗ್ಯ ಕಾರ್ಯಕರ್ತರಿಗೆ ಲಸಿಕಾ ಪ್ರಕ್ರಿಯೆ ಕೈಗೊಳ್ಳಲು ತರಬೇತಿ ನೀಡಲಾಗುತ್ತಿದೆ. ದೆಹಲಿಯಲ್ಲಿ ಮೊದಲ ಹಂತದಲ್ಲಿ 1.8 ಲಕ್ಷದಿಂದ 2.25 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಕಾರ್ಯಕ್ರಮವಿದ್ದು, 609 ಕೋಲ್ಡ್ ಚೇನ್ ಪಾಯಿಂಟ್ ಗಳನ್ನು ಸಿದ್ಧಗೊಳಿಸಲಾಗಿದೆ.

ಕೋ ವಿನ್ ಆ್ಯಪ್‌ ಮೂಲಕ ಕೊರೊನಾ ಲಸಿಕೆ ನೋಂದಣಿ ಹೇಗೆ?ಕೋ ವಿನ್ ಆ್ಯಪ್‌ ಮೂಲಕ ಕೊರೊನಾ ಲಸಿಕೆ ನೋಂದಣಿ ಹೇಗೆ?

ಡಿ.14, ಸೋಮವಾರದಿಂದ ತರಬೇತಿ ಆರಂಭಗೊಂಡಿದ್ದು, ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನಿರ್ವಹಣೆ ಕುರಿತು ತರಬೇತಿ ನೀಡುತ್ತಿರುವುದಾಗಿ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜಿನ ಸುನೀಲ್ ಗರ್ಗ್ ಮಾಹಿತಿ ನೀಡಿದ್ದಾರೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಲಸಿಕಾ ಕಾರ್ಯಕ್ರಮದ ಅಧಿಕಾರಿಗಳು, ತಾಂತ್ರಿಕ ಬೆಂಬಲ ಘಟಕದ ಅಧಿಕಾರಿಗಳಿಗೆ ಈಗಾಗಲೇ ಕೇಂದ್ರದಿಂದ ತರಬೇತಿ ನೀಡಲಾಗಿದ್ದು, ರಾಜ್ಯ ಮಟ್ಟದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಇವರು ತರಬೇತಿ ನೀಡಲಿದ್ದಾರೆ.

3500 Health Care Workers Getting Training For Covid 19 Vaccine

ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಆರೋಗ್ಯ ಸೇವೆ ಸಿಬ್ಬಂದಿ, ವೈದ್ಯಕೀಯ ಅಧಿಕಾರಿಗಳು, ಲಸಿಕಾ ಅಧಿಕಾರಿಗಳು, ಶಿಕ್ಷಣ ಹಾಗೂ ಸಂವಹನ ಅಧಿಕಾರಿಗಳು, ಕೋಲ್ಡ್ ಚೇನ್ ನಿರ್ವಾಹಕರು, ಮೇಲ್ವಿಚಾರಕರು, ಆಶಾ ಕಾರ್ಯಕರ್ತರು, ಮಹಿಳಾ ಆರೋಗ್ಯ ಸಮಿತಿಗಳನ್ನು ಈ ಲಸಿಕಾ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುತ್ತಿದೆ. ಲಸಿಕೆಯ ಪ್ರಾಮುಖ್ಯ, ನಿರ್ವಹಣೆ, ಡಿಜಿಟಲ್ ಅಪ್ಲಿಕೇಷನ್ ಕೋ ವಿನ್ ಕುರಿತು ಇವರಿಗೆ ತರಬೇತಿ ನೀಡಲಾಗುತ್ತದೆ. ಕಾರ್ಯಕ್ರಮವು ಎಂಬಿಬಿಎಸ್, ಬಿಡಿಎಸ್, ಆಯುಷ್ ವೈದ್ಯರು, ಫಾರ್ಮಾಸಿಸ್ಟ್, ದಾದಿಯರನ್ನು ಒಳಗೊಂಡಿದೆ.

ವೈದ್ಯಕೀಯ ಅಧಿಕಾರಿಗಳು ಹಾಗೂ ದಾದಿಯರು ಲಸಿಕೆ ನೀಡುವ ಕೆಲಸ ಮಾಡಿದರೆ, ಉಳಿದ ಸಿಬ್ಬಂದಿ ಲಸಿಕೆಗೆ ಸಂಬಂಧಿಸಿದ ಹಲವು ಕಾರ್ಯಗಳನ್ನು ನಿರ್ವಹಿಸಲಿದ್ದಾರೆ.

English summary
Around 3,500 health workers have been identified in Delhi to carry out the vaccination process,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X