ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಏಮ್ಸ್ ಆಸ್ಪತ್ರೆಯ 35 ವೈದ್ಯರು, ಸಿಬ್ಬಂದಿಗೆ ಕೋವಿಡ್ ದೃಢ

|
Google Oneindia Kannada News

ನವದೆಹಲಿ, ಏಪ್ರಿಲ್ 9: ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಲ್ಲಿ ವೈದ್ಯರು ಸೇರಿದಂತೆ 35 ಆರೋಗ್ಯ ಕಾರ್ಯಕರ್ತರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪತ್ತೆಯಾಗಿದೆ. ವೈರಸ್ ತಗುಲಿರುವ ಕೆಲವು ಸಿಬ್ಬಂದಿ ಈವರೆಗೂ ಲಸಿಕೆ ತೆಗೆದುಕೊಂಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ದೆಹಲಿ ನಗರದ ಆಸ್ಪತ್ರೆಗಳ ಪೈಕಿ ಇತ್ತೀಚೆಗೆ 30ಕ್ಕೂ ಹೆಚ್ಚು ವೈದ್ಯರು ಮತ್ತು ಇತರೆ ವೈದ್ಯಕೀಯ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿರುವುದು ಇದು ಎರಡನೆಯ ಪ್ರಕರಣ. ಗುರುವಾರ ಸರ್ ಗಂಗಾ ರಾಮ್ ಆಸ್ಪತ್ರೆಯ 37 ವೈದ್ಯರಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿತ್ತು.

ಕೊರೊನಾ ಏರಿಕೆ; ರೈಲು ಸಂಚಾರದ ಕುರಿತು ರೈಲ್ವೆ ಇಲಾಖೆ ಸ್ಪಷ್ಟನೆಕೊರೊನಾ ಏರಿಕೆ; ರೈಲು ಸಂಚಾರದ ಕುರಿತು ರೈಲ್ವೆ ಇಲಾಖೆ ಸ್ಪಷ್ಟನೆ

ಗಂಗಾರಾಮ್ ಆಸ್ಪತ್ರೆಯಲ್ಲಿ ಕೋವಿಡ್ ದೃಢಪಟ್ಟ ಹೆಚ್ಚಿನವರು ಯುವ ವಯಸ್ಸಿನವರಾಗಿದ್ದು, ಅವರು ಕೋವಿಡ್ ಲಸಿಕೆಗಳನ್ನು ಕೂಡ ಪಡೆದುಕೊಂಡಿದ್ದರು. ಅವರಲ್ಲಿ ಬಹುತೇಕ ಮಂದಿಯಲ್ಲಿ ಲಘು ಲಕ್ಷಣಗಳು ಕಂಡುಬಂದಿವೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

35 Healthcare Workers Including Doctors Tests Positive In Delhis AIIMS

ಸರ್ ಗಂಗಾ ರಾಮ್ ಆಸ್ಪತ್ರೆಯ ಅಧ್ಯಕ್ಷ ಡಾ. ಡಿಎಸ್ ರಾಣಾ ಅವರನ್ನು ತಮ್ಮ ನಿವಾಸಕ್ಕೆ ಬರುವಂತೆ ಕರೆ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಶುಕ್ರವಾರ ಸಂಜೆ ಮಾತುಕತೆ ನಡೆಸಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಕಳೆದ ಒಂದು ವರ್ಷದಿಂದ ದೆಹಲಿಯಲ್ಲಿ ಕೋವಿಡ್ ಚಿಕಿತ್ಸೆ ಮತ್ತು ನಿಯಂತ್ರಣ ಕಾರ್ಯಗಳಲ್ಲಿ ಏಮ್ಸ್ ಮತ್ತು ಸರ್ ಗಂಗಾ ರಾಮ್ ಆಸ್ಪತ್ರೆಗಳು ಮುಂಚೂಣಿಯಲ್ಲಿವೆ.

ದೇಶದ ಇತರರೆ ಪ್ರಮುಖ ನಗರಗಳಲ್ಲಿ ದೆಹಲಿಯಲ್ಲಿ ಕೂಡ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ವರ್ಷದಲ್ಲಿ ಒಂದು ದಿನದಲ್ಲಿ ಅತ್ಯಧಿಕ ಪ್ರಕರಣ ಶುಕ್ರವಾರ ವರದಿಯಾಗಿದ್ದು, ಒಂದೇ ದಿನ 7,437 ಪ್ರಕರಣ ದಾಖಲಾಗಿವೆ.

English summary
35healthcare workers including doctors tested positive in Delhi's AIIMS hospital in a week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X