ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಚೀನಾ ಘರ್ಷಣೆ: ಚೈನೀಸ್ ಸೈನಿಕರ ಸಾವಿನ ಲೆಕ್ಕ ನೀಡಿದ ಯುಎಸ್

|
Google Oneindia Kannada News

ದೆಹಲಿ, ಜೂನ್ 17: ಲಡಾಖ್‌ನ ‌ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಭಾರತ ಮತ್ತು ಚೀನಾ ಯೋಧರ ನಡುವಿನ ಘರ್ಷಣೆಯಲ್ಲಿ ಎರಡೂ ದೇಶಗಳ ಸೈನಿಕರ ಪ್ರಾಣ ಹಾನಿಯಾಗಿದೆ ಎಂದು ಹೇಳಲಾಗಿದೆ. ಆದರೆ, ಚೀನಾದಲ್ಲಿ ಎಷ್ಟು ಸಾವು ಸಂಭವಿಸಿದೆ ಎಂದು ಅಧಿಕೃತ ಲೆಕ್ಕ ಸಿಕ್ಕಿಲ್ಲ.

Recommended Video

History of India China border dispute | Oneindia Kannada

ಈ ಕುರಿತು ಯುಎಸ್ ಗುಪ್ತಚರ ಮಾಹಿತಿ ಕಲೆ ಹಾಕಿದ್ದು, 35 ಮಂದಿ ಚೈನೀಸ್ ಯೋಧರು ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದ್ದಾರೆ.

ಚೀನಾ-ಭಾರತ ಘರ್ಷಣೆ: ಇನ್ನೂ ನಾಲ್ಕು ಭಾರತೀಯ ಯೋಧರ ಸ್ಥಿತಿ ಗಂಭೀರಚೀನಾ-ಭಾರತ ಘರ್ಷಣೆ: ಇನ್ನೂ ನಾಲ್ಕು ಭಾರತೀಯ ಯೋಧರ ಸ್ಥಿತಿ ಗಂಭೀರ

ಸೋಮವಾರ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಘಟನೆಯಲ್ಲಿ ಓರ್ವ ಅಧಿಕಾರಿ ಸೇರಿ 35 ಜನರ ಚೀನಾ ಸೈನಿಕರು ಹತ್ಯೆಯಾಗಿದ್ದಾರೆ ಎಂದು ಯುಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

35 Chinese troops died in violent with India reports US Intelligence

ಭಾರತದೊಂದಿಗೆ ಘರ್ಷಣೆಯಲ್ಲಿ ಚೀನಾ ಸೈನ್ಯದಲ್ಲೂ ಸಾವು ನೋವು ಸಂಭವಿಸಿದೆ ಎಂದು ದೃಢಪಡಿಸಿದ್ದರೂ, ನಿಖರವಾದ ಸಂಖ್ಯೆ ಹೇಳಿಲ್ಲ. ಆದರೆ ಭಾರತಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, 45 ಚೀನಾ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿವೆ.

India-China standoff LIVE: ಚೀನಾ ವಿರುದ್ಧ ಹಲವೆಡೆ ಪ್ರತಿಭಟನೆIndia-China standoff LIVE: ಚೀನಾ ವಿರುದ್ಧ ಹಲವೆಡೆ ಪ್ರತಿಭಟನೆ

ಇನ್ನು ಜೂನ್ 15ರ ರಾತ್ರಿ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನೆ ಖಚಿತಪಡಿಸಿದೆ. ಓರ್ವ ಅಧಿಕಾರಿ ಸೇರಿ ಸೈನಿಕರು ಸಾವನ್ನಪ್ಪಿದ್ದಾರೆ. ಹಾಗೂ ಇನ್ನು ಅನೇಕರ ಸ್ಥಿತಿ ಗಂಭೀರವಾಗಿದೆ ಎಂದು ವಿವರಣೆ ನೀಡಿದೆ.

English summary
35 Chinese soldier's died in violent with India at Galwan Valley on Monday night reports US Intelligence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X