ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂದೇ ಭಾರತ್ ಮಿಷನ್ 2: ಈ ಸಲ ಎಷ್ಟು ಮಂದಿ ಭಾರತಕ್ಕೆ ಬರಲಿದ್ದಾರೆ?

|
Google Oneindia Kannada News

ದೆಹಲಿ, ಮೇ 13: ಕೊರೊನಾ ವೈರಸ್‌ ಲಾಕ್‌ಡೌನ್‌ ಹಿನ್ನೆಲೆ ಸಾವಿರಾರು ಭಾರತೀಯರು ವಿದೇಶದಲ್ಲಿ ಸಿಲುಕೊಂಡಿದ್ದಾರೆ. ವಿದ್ಯಾರ್ಥಿಗಳು, ಯಾತ್ರಿಕರು, ಉದ್ಯಮಿಗಳು ಸೇರಿದಂತೆ ಅನೇಕರು ತಾಯ್ನಾಡಿಗೆ ವಾಪಸ್ ಆಗಲು ಕಷ್ಟು ಪಡುತ್ತಿದ್ದಾರೆ.

ಇಂತವರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ವಂದೇ ಭಾರತ್ ಮಿಷನ್ ಅಡಿಯಲ್ಲಿ ಬಹುದೊಡ್ಡ ಕಾರ್ಯಾಚರಣೆ ಮಾಡುತ್ತಿದೆ. ಈಗಾಗಲೇ ಮೊದಲ ಹಂತದಲ್ಲಿ 14 ಸಾವಿರಕ್ಕೂ ಹೆಚ್ಚು ಜನರನ್ನು ಸ್ವದೇಶಕ್ಕೆ ಕರೆತಂದಿದೆ.

ವಿದೇಶದಲ್ಲಿರುವ ಭಾರತೀಯರು ವಾಪಸ್; ವಿಮಾನದ ದರ ಎಷ್ಟು?ವಿದೇಶದಲ್ಲಿರುವ ಭಾರತೀಯರು ವಾಪಸ್; ವಿಮಾನದ ದರ ಎಷ್ಟು?

ಈಗ ಎರಡನೇ ಹಂತದ ಆಪರೇಷನ್‌ಗೆ ಕೇಂದ್ರ ಸರ್ಕಾರ ಸಜ್ಜಾಗಿದ್ದು, ಈ ಕುರಿತು ನಾಗರಿಕ ವಿಮಾನಯಾನ ಸಚಿವ ಹರ್ದಿಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ. ಮುಂದೆ ಓದಿ....

ಮೇ 16 ರಿಂದ ಎರಡನೇ ಆಪರೇಷನ್

ಮೇ 16 ರಿಂದ ಎರಡನೇ ಆಪರೇಷನ್

ಮೇ 14ಕ್ಕೆ ಮೊದಲ ಹಂತದ ಏರ್‌ಲಿಫ್ಟ್ ಆಪರೇಷನ್ ಅಂತ್ಯವಾಗುತ್ತಿದೆ. ಈಗ ಎರಡನೇ ಹಂತದ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಸಜ್ಜಾಗಿದ್ದು, ಮೇ 16 ರಿಂದ ವಂದೇ ಭಾರತ್ ಮಿಷನ್ 2ಗೆ ಚಾಲನೆ ಸಿಗಲಿದೆ. ಒಂದು ವಾರಗಳ ಸಮಯ ಈ ಕಾರ್ಯಾಚರಣೆ ನಡೆಯಲಿದೆ.

30 ಸಾವಿರ ಭಾರತೀಯರು ವಾಪಸ್!

30 ಸಾವಿರ ಭಾರತೀಯರು ವಾಪಸ್!

ಎರಡನೇ ಹಂತದ ಆಪರೇಷನ್‌ನಲ್ಲಿ ಭಾರತಕ್ಕೆ ಸುಮಾರು 30 ಸಾವಿರ ಮಂದಿ ಬರಲಿದ್ದಾರೆ ಎಂದು ಸಚಿವ ಹರ್ದಿಪ್ ಸಿಂಗ್ ಪುರಿ ಹೇಳಿದ್ದಾರೆ. ವಿವಿಧ 31 ದೇಶಗಳಿಂದ ಮೂವತ್ತು ಸಾವಿರ ಜನರನ್ನು ಕರೆತರಲಿದೆ. ಇದಕ್ಕಾಗಿ 149 ವಿಮಾನಗಳು ಕೆಲಸ ಮಾಡಲಿದೆ ಎಂದು ಮಾಹಿತಿ ಲಭ್ಯವಾಗಿದೆ.

ವಂದೇ ಭಾರತ್ ಮಿಷನ್: ಲಂಡನ್ To ಬೆಂಗಳೂರು ಯಶಸ್ವಿವಂದೇ ಭಾರತ್ ಮಿಷನ್: ಲಂಡನ್ To ಬೆಂಗಳೂರು ಯಶಸ್ವಿ

ಮೊದಲನೇ ಹಂತದ ವಿವರ

ಮೊದಲನೇ ಹಂತದ ವಿವರ

ಮೇ 7ರಿಂದ ಮೇ 14ರವರೆಗೂ ವಿಮಾನ ವಂದೇ ಭಾರತ್ ಮಿಷನ್‌ನ ಮೊದಲ ಹಂತದ ಕಾರ್ಯಾಚರಣೆ ಸಕ್ರಿಯವಾಗಿದೆ. ಈ ಹಂತದಲ್ಲಿ 12 ರಾಷ್ಟ್ರಗಳಿಂದ 14,800 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗುತ್ತಿದೆ. ಈ ಮೆಗಾ ಏರ್‌ಲಿಫ್ಟ್ ಆಪರೇಷನ್‌ನಲ್ಲಿ 64 ವಿಮಾನಗಳು ಕಾರ್ಯ ನಿರ್ವಹಿಸಿದೆ.

2ನೇ ಹಂತದಲ್ಲಿ ಯಾವ ದೇಶದಿಂದ ಎಷ್ಟು ವಿಮಾನ?

2ನೇ ಹಂತದಲ್ಲಿ ಯಾವ ದೇಶದಿಂದ ಎಷ್ಟು ವಿಮಾನ?

ಎರಡನೇ ಹಂತದಲ್ಲಿ ಯುಎಸ್‌ (13), ಯುಎಇ (11), ಕೆನಡಾ (10), ಸೌದಿ ಅರೇಬಿಯಾ ಮತ್ತು ಯುಕೆ (ತಲಾ 9) ಮತ್ತು ಮಲೇಷ್ಯಾ ಮತ್ತು ಒಮಾನ್ (ತಲಾ 8) ವಿಮಾನಗಳು ಹೋಗಿ ಬರಲಿವೆ ಎಂಬ ಮಾಹಿತಿ ಇದೆ. ಕಜಿಕಿಸ್ತಾನ್ ಮತ್ತು ಆಸ್ಟ್ರೇಲಿಯಾದಿಂದ (ತಲಾ 7), ಉಕ್ರೇನ್, ಕತಾರ್, ಇಂಡೋನೇಷ್ಯಾ ಮತ್ತು ರಷ್ಯಾ (ತಲಾ 6), ಫಿಲಿಪೈನ್ಸ್ (5), ಫ್ರಾನ್ಸ್, ಸಿಂಗಾಪುರ್, ಐರ್ಲೆಂಡ್ ಮತ್ತು ಕಿರ್ಗಿಸ್ತಾನ್ (ತಲಾ 4), ಕುವೈತ್ ಮತ್ತು ಜಪಾನ್ (ತಲಾ 3), ಜಾರ್ಜಿಯಾ, ಜರ್ಮನಿ, ತಜಿಕಿಸ್ತಾನ್, ಬಹ್ರೇನ್ ಮತ್ತು ಅರ್ಮೇನಿಯಾ (ತಲಾ 2), ಮತ್ತು ಥೈಲ್ಯಾಂಡ್, ಇಟಲಿ, ನೇಪಾಳ, ಬೆಲಾರಸ್, ನೈಜೀರಿಯಾ ಮತ್ತು ಬಾಂಗ್ಲಾದೇಶ (ತಲಾ 1) ವಿಮಾನ ಬರಲಿದೆ ಎಂಬ ವಿವರ ಸಿಕ್ಕಿದೆ.

English summary
30,000 Indians will return from 31 countries on 149 flights in phase 2 of Vande Bharat Mission: Civil Aviation Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X