ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಕ್ತಿ ಸಾವು: ದೆಹಲಿಯಲ್ಲಿರುವ ಏಷ್ಯಾದ ಅತಿ ದೊಡ್ಡ ಮಾರುಕಟ್ಟೆಗೆ ಬೀಗ

|
Google Oneindia Kannada News

ನವ ದೆಹಲಿ, ಏಪ್ರಿಲ್ 24: ದೆಹಲಿಯಲ್ಲಿರುವ ಏಷ್ಯಾದ ಅತಿ ದೊಡ್ಡ ಮಾರುಕಟ್ಟೆ ಎಂದೇ ಕರೆಯಲ್ಪಡುವ ಅಜಾದ್ ಪುರ್ ಮಂಡಿಯಲ್ಲಿ ಕೊರೊನಾ ಭೀತಿ ಹೆಚ್ಚಾಗಿದ್ದು, ಸಂಪೂರ್ಣ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ.

ಈ ಮಾರುಕಟ್ಟೆಯಲ್ಲಿ ಇದ್ದ ಹಣ್ಣು ಮತ್ತು ತರಕಾರಿ ವ್ಯಾಪಾರಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಇರುವ ಉಳಿದ ವ್ಯಾಪಾರಿಗಳಿಗೆ, ಕೂಲಿ ಕಾರ್ಮಿಕರಿಗೆ ಈಗ ಆತಂಕ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯ ವ್ಯಾಪಾರಕ್ಕೆ ನಿರ್ಬಂಧ ಏರಲಾಗಿದೆ.

ದೆಹಲಿ ಆಸ್ಪತ್ರೆಯಲ್ಲಿ 14 ಜನ ವೈದ್ಯಕೀಯ ಸಿಬ್ಬಂದಿಗೆ ಕೊರೊನಾದೆಹಲಿ ಆಸ್ಪತ್ರೆಯಲ್ಲಿ 14 ಜನ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ

ಅಜಾದ್ ಪುರ್ ಸುಮಾರು 100 ಎಕರೆಯಲ್ಲಿರುವ ಮಾರುಕಟ್ಟೆಯಾಗಿದೆ. 300ಕ್ಕೂ ಹೆಚ್ಚು ಅಂಗಡಿಗಳು ಇಲ್ಲಿವೆ. ಈ ಎಲ್ಲ ಅಂಗಡಿಗಳಿಗೆ ಈಗ ಬೀಗ ಹಾಕಲಾಗಿದೆ. ಇಲ್ಲಿ 2800ಕ್ಕೂ ಅಧಿಕ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರ ಕೆಲಸಕ್ಕೂ ಕುತ್ತು ಬಂದಿದೆ.

300 Shops Are Shut In Azadpur Mandi In Delhi

ಅಜಾದ್ ಪುರ ಮಾರುಕಟ್ಟೆಯಲ್ಲಿ ಒಬ್ಬ ಕೊರೋನಾ ಸೋಂಕಿತ ಸಾವನ್ನಪ್ಪಿದ್ದು, ಆ ಬಳಿಕ ಆತನ ಸಂಪರ್ಕದಲ್ಲಿ ಇದ್ದ 17 ಜನರಿಗೆ ತಪಾಸಣೆ ನಡೆಸಲಾಗಿದೆ. ಬುಧವಾರ ಇಬ್ಬರು ವ್ಯಕ್ತಿಗಳಿಗೆ ಪಾಸಿಟಿವ್ ವರದಿ ಬಂದಿದೆ.

ಲಾಕ್‌ಡೌನ್‌ನಿಂದ ರೈತರಿಗೆ ತೊಂದರೆ ಆಗಬಾರದು ಎಂದು ದೆಹಲಿ ಸರ್ಕಾರ ತರಕಾರಿ ಹಾಗೂ ಹಣ್ಣುಗಳನ್ನು ಮಾರಾಟ ಮಾಡಲು ಅಜಾದ್ ಪುರ ಮಂಡಿಯಲ್ಲಿ ಬೆಳಗ್ಗೆ 6 ರಿಂದ ರಾತ್ರಿ 10 ಅವಕಾಶ ನೀಡಿತ್ತು.

ದೆಹಲಿಯಲ್ಲಿ ಸದ್ಯ 2376 ಮಂದಿ ಕೊರೊನಾ ಸೋಂಕಿತರು ಇದ್ದಾರೆ. 50 ಜನರು ವೈರಸ್‌ಗೆ ಬಲಿಯಾಗಿದ್ದಾರೆ.

English summary
Asia's biggest wholesale market for fruits and vegetables Azadpur Mandi's 300 shops are shut in Delhi. after a trader died of coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X