ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಗಾ, ಮತ್ತದರ ಉಪನದಿಗಳ ಸ್ವಚ್ಛತೆಗೆ 30,000 ಕೋಟಿ ರೂ.ಮಂಜೂರು

|
Google Oneindia Kannada News

ನವದೆಹಲಿ ಆಗಸ್ಟ್ 17: ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವ ಕೇಂದ್ರ ಸರ್ಕಾರವು ಗಂಗಾ ಮತ್ತು ಅದರ ಉಪನದಿಗಳನ್ನು ಸ್ವಚ್ಛಗೊಳಿಸುವ ಯೋಜನೆಗಳಿಗೆ ಒಟ್ಟು 30,000 ಕೋಟಿ ರೂ. ಹೆಚ್ಚು ಹಣ ಮಂಜೂರು ಮಾಡಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಾಹಿತಿ ನೀಡಿದರು.

ಸೀಮಿತ ಜಲಸಂಪನ್ಮೂಲಗಳ ಪ್ರಾಮುಖ್ಯತೆಗೆ ಒತ್ತು ನೀಡಿದ್ದರ ಬಗ್ಗೆ ಪ್ರಿಕ್ರಿಯಿಸಿದ ಸಚಿವ ಶೇಖಾವತ್, ಆರ್ಥಿಕ ಅಭಿವೃದ್ಧಿಯ ಆರಂಭವು 'ನಮ್ಮ ನೀರಿನ ಸಂಪನ್ಮೂಲ ಮತ್ತು ಶಕ್ತಿ'ಯಿಂದಲೇ ಪ್ರಾರಂಭವಾಗುತ್ತದೆ. ನೈಸರ್ಗಿಕ ಸಂಪನ್ಮೂಲಗಳು ಹಾಗೂ ಆರ್ಥಿಕ ವೃದ್ಧಿ ಅಗತ್ಯತೆಯ ಗ್ರಾಫ್ ಒಂದೇ ರೀತಿಯಲ್ಲಿರುತ್ತದೆ ಎಂದರು.

ನವದೆಹಲಿ: ಜೋರ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನವದೆಹಲಿ: ಜೋರ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ

ಹೆಚ್ಚುತ್ತಿರುವ ಭಾರತದ ಜನಸಂಖ್ಯೆ, ಭೌಗೋಳಿಕ ವೈಶಾಲ್ಯತೆ, ಸೀಮಿತ ಜಲಸಂಪನ್ಮೂಲಗಳು ಹಾಗೂ ಮುಂದಿರುವ ಪರಿಸರ ಸವಾಲುಗಳನ್ನು ಎದುರಿಸುವ ಇಚ್ಛೆ ಇದೆ. ನೀರು ಹಾಗೂ ಇನ್ನಿತರ ಲಭ್ಯ ನೈಸರ್ಗಿಕ ಸಂಪನ್ಮೂಲಗಳನ್ನು ಸುಸ್ಥಿರವಾಗಿ ಮತ್ತು ಸಮರ್ಥಿನಿಯ ಬಳಕೆಯನ್ನು ಖಚಿತಪಡಿಸಿಳ್ಳಬೇಕಾದ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

30,000 crore sanctioned for cleanliness of Ganga and its tributaries

ಗಂಗಾ ಮತ್ತು ಅದರ ಉಪನದಿಗಳನ್ನು ಸ್ವಚ್ಛಗೊಳಿಸಲು ಸಾಕಷ್ಟು ಮೂಲಸೌಕರ್ಯಗಳನ್ನು ರಚಿಸಲಾಗಿದೆ. ಆ ನಿಟ್ಟಿನಲ್ಲಿ ರೂಪಿಸಲಾಗಿರುವ ವಿವಿಧ ಯೋಜನೆಗಳ ಸಾಕಾರಕ್ಕೆ ಬೇಕಾದಷ್ಟು ಹಣವನ್ನು ಮಂಜೂರು ಮಾಡಲಾಗಿದೆ ಎಂದು ಶೇಖಾವತ್ ಪುನರುಚ್ಚರಿಸಿದರು.

ಸರ್ಕಾರದೊಂದಿಗೆ ವಿವಿಧ ಸಂಘಟನೆಗಳ ಸಹಕಾರ

ಕೇಂದ್ರ ಸರ್ಕಾರದ ಜಲ ಅಭಿವೃದ್ಧಿ ಸೇರಿದಂತೆ ನೈಸರ್ಗಿಕ ವೃದ್ಧಿಗೆ ಒತ್ತು ನೀಡಿರುವುದನ್ನು ಸಾಕಷ್ಟ ಸಂಘಟನೆಗಳು ಬೆಂಬಲಿಸುತ್ತಿವೆ. ಜತೆಗೆ ಹಲವು ಸಂಘಟನೆಗಳು ಸರ್ಕಾರಕ್ಕೆ ಸಹಕಾರ ನೀಡಿವೆ. ಈಗಾಗಲೇ ವಿವಿಧ ಸಂಘಟನೆಗಳ ಬೆಂಬಲದ ಮೇರೆಗೆ 'ನಮಾಮಿ ಗಂಗೆ' ಕಾರ್ಯಕ್ರಮ ಒಂದು 'ಜನಾಂದೋಲನ' ವಾಗಿ ಪರಿವರ್ತನೆಗೊಂಡಿದ್ದು, ಆ ಬಗ್ಗೆ ನನ್ನಲ್ಲಿ ತೀವ್ರ ಸಂತಸವಿದೆ ಎಂದರು.

30,000 crore sanctioned for cleanliness of Ganga and its tributaries

ಗಂಗಾ ನದಿಯ 100ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನದಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹರಿಸುವ ಬಗ್ಗೆ ಈಗಾಗಲೇ ಉತ್ತಮ ರೀತಿಯಲ್ಲಿ, ಸರಿಯಾದ ದಿಕ್ಕಿನತ್ತ ಚರ್ಚೆಗಳು ಸಾಗಿವೆ. ಆದಷ್ಟು ಬೇಗ ಈ ಸಮಸ್ಯೆಗಳು ಪರಿಹಾರಗೊಳ್ಳಲಿವೆ ಎಂದು ಅವರು ಭರವಸೆ ನೀಡಿದರು.

English summary
30,000 crore sanctioned for cleanliness of Ganga and its tributaries said central Jal Shakti Minister Shekhawat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X