ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು-ಕಾಶ್ಮೀರದ ಐಎಸ್ ಐಎಸ್ ಸಹವರ್ತಿ ಸಂಘಟನೆಯ ಮೂವರು ಉಗ್ರರ ಬಂಧನ

|
Google Oneindia Kannada News

ನವದೆಹಲಿ, ನವೆಂಬರ್ 25 : ಐಎಸ್ ಐಎಸ್ ಸಿದ್ಧಾಂತದಿಂದ ಪ್ರೇರಿತರಾದ ಇಸ್ಲಾಮಿಕ್ ಸ್ಟೇಟ್ ಜಮ್ಮು ಮತ್ತು ಕಾಶ್ಮೀರದ ಮೂವರು ಭಯೋತ್ಪಾದಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ಮೂವರು ದೆಹಲಿಯಲ್ಲಿ ದೊಡ್ಡ ದಾಳಿ ಸಂಘಟಿಸಲು ಯೋಜನೆ ರೂಪಿಸಿದ್ದರು ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಬಂಧಿತ ಉಗ್ರರನ್ನು ತಾಹೀರ್ ಅಲಿ ಖಾನ್, ಹಾರೀಸ್ ಮುಷ್ತಾಕ್ ಖಾನ್ ಹಾಗೂ ಅಸೀಫ್ ಸುಹೇಲ್ ನದಾಫ್ ಎಂದು ಗುರುತಿಸಲಾಗಿದೆ. ಈ ಮೂವರು ಕಾಶ್ಮೀರದವರು. ಅವರ ಬಳಿ 2 ಪಿಸ್ಟಲ್ ಹಾಗೂ ಮೂರು ಹ್ಯಾಂಡ್ ಗ್ರೆನೇಡ್ ಇತ್ತು ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ದಾಳಿ ನಡೆಸಲು ಸಂಚು; ಇಬ್ಬರು ಶಂಕಿತ ಉಗ್ರರ ಫೋಟೋ ಬಿಡುಗಡೆದೆಹಲಿಯಲ್ಲಿ ದಾಳಿ ನಡೆಸಲು ಸಂಚು; ಇಬ್ಬರು ಶಂಕಿತ ಉಗ್ರರ ಫೋಟೋ ಬಿಡುಗಡೆ

ದೆಹಲಿ ನಗರದಲ್ಲಿ ಇಬ್ಬರು ಶಂಕಿತ ಉಗ್ರರು ಇದ್ದಾರೆ ಎಂಬ ಬಗ್ಗೆ ಪೊಲೀಸರು ಫೋಟೋ ಬಿಡುಗಡೆ ಮಾಡಿದ ಕೆಲ ದಿನದಲ್ಲೇ ಮೂವರು ಭಯೋತ್ಪಾದಕರನ್ನು ಬಂಧಿಸಲಾಗಿದೆ. ಅಮೃತ್ ಸರ್ ನಲ್ಲಿ ಪ್ರಾರ್ಥನಾ ಮಂದಿರದ ಮೇಲೆ ದಾಳಿ ನಡೆದು, ಮೂವರು ಮೃತಪಟ್ಟು, ಇಪ್ಪತ್ತು ಮಂದಿ ಗಾಯಗೊಂಡ ನಂತರ ಈ ಎಚ್ಚರಿಕೆ ನೀಡಲಾಗಿತ್ತು.

Delhi police officer

ಜೈಷ್ ಇ ಮೊಹ್ಮದ್ ಉಗ್ರ ಸಂಘಟನೆಯ ಆರರಿಂದ ಏಳು ಮಂದಿ ಉಗ್ರಗಾಮಿಗಳು ದೆಹಲಿ ನಗರದತ್ತ ತೆರಳಿರಬಹುದು ಎಂಬ ಮುನ್ಸೂಚನೆಯನ್ನು ಪಂಜಾಬ್ ಪೊಲೀಸರು ನೀಡಿದ್ದರು.

ಅಮೃತ್ ಸರ್ ದಾಳಿ ಪ್ರಕರಣದಲ್ಲಿ ಒಬ್ಬನ ಬಂಧನ, ಇನ್ನೊಬ್ಬನಿಗೆ ತಲಾಶ್ಅಮೃತ್ ಸರ್ ದಾಳಿ ಪ್ರಕರಣದಲ್ಲಿ ಒಬ್ಬನ ಬಂಧನ, ಇನ್ನೊಬ್ಬನಿಗೆ ತಲಾಶ್

ಇಸ್ಲಾಮಿಕ್ ಸ್ಟೇಟ್ ಜಮ್ಮು-ಕಾಶ್ಮೀರದ ಸಾಮಾಜಿಕ ಜಾಲತಾಣದ ಮುಖ್ಯಸ್ಥ ದಾವೂದ್ ಸೋಫಿಯನ್ನು ಕಳೆದ ಜೂನ್ ನಲ್ಲಿ ಕೊಂದ ನಂತರ ಆ ಉಗ್ರ ಸಂಘಟನೆಗೆ ಅಥವಾ ಅಂಥ ಉಗ್ರ ಸಂಘಟನೆಗಳಿಗೆ ಜನರು ಆಕರ್ಷಿತರಾಗುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

English summary
Delhi Police Special Cell was working on J&K terror module. It conducted a joint operation with Srinagar SOG Saturday.3 terrorists nabbed,3 grenades, 2 loaded pistol seized.Terrorists tried to lob greande at police party in Kothi Bagh’s Tourism Reception Center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X