ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರಾನ್ಸ್‌ನಿಂದ ಭಾರತದತ್ತ ಪ್ರಯಾಣಿಸಿದ ರಫೇಲ್ ಯುದ್ಧ ವಿಮಾನಗಳು: ಸೇನೆಗೆ ಮತ್ತಷ್ಟು ಬಲ

|
Google Oneindia Kannada News

ನವದೆಹಲಿ, ಜನವರಿ 27: ವಿಶ್ವದ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನಗಳಲ್ಲಿ ಒಂದಾದ ರಫೇಲ್ ಯುದ್ಧ ವಿಮಾನಗಳು ಬುಧವಾರ ಫ್ರಾನ್ಸ್‌ನಿಂದ ಭಾರತದ ಕಡೆಗೆ ಹಾರಿವೆ. ಈ ಬಾರಿ ಮೂರು ರಫೇಲ್ ಯುದ್ಧ ವಿಮಾನಗಳು ಭಾರತದತ್ತ ಹೊರಟಿವೆ ಎಂದು ಫ್ರಾನ್ಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.

ಫ್ರಾನ್ಸ್‌ನಿಂದ ಹೊರಟಿರುವ ಯುದ್ಧ ವಿಮಾನಗಳು ಎಲ್ಲೂ ಇಳಿಯದೇ ಸತತ ಪ್ರಯಾಣ ಬೆಳಸಲಿದ್ದು, ಯುಎಇ ಎಂಆರ್‌ಟಿಟಿಯಿಂದ ಮಧ್ಯ-ವಾಯು ಇಂಧನ ತುಂಬಿಸಿಕೊಳ್ಳಲಿದ್ದು, ಭಾರತಕ್ಕೆ ತಡೆರಹಿತ ಹಾರಾಟ ನಡೆಸಲಿದೆ.

ಜನವರಿಯಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿವೆ 3 ರಫೇಲ್ ಯುದ್ಧ ವಿಮಾನಗಳು ಜನವರಿಯಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿವೆ 3 ರಫೇಲ್ ಯುದ್ಧ ವಿಮಾನಗಳು

ಈಗಾಗಲೇ ಎಂಟು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಿದ್ದು, ತಿಂಗಳ ಅಂತ್ಯದಲ್ಲಿ ಮೂರು ಯುದ್ಧ ವಿಮಾನಗಳು ಭಾರತಕ್ಕೆ ಬರಲಿದೆ ಎಂದು ಈ ಹಿಂದೆ ಭಾರತೀಯ ವಾಯುಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಹೇಳಿದ್ದರು.

3 More Rafale Jets Take Off From France: Non Stop Flight To India

ಭಾರತವು ಸೆಪ್ಟೆಂಬರ್ 2016 ರಲ್ಲಿ ಫ್ರಾನ್ಸ್‌ನೊಂದಿಗೆ 36 ರಫೇಲ್ ಫೈಟರ್ ಜೆಟ್‌ಗಳಿಗೆ ಸಹಿ ಹಾಕಿತ್ತು. ಈ ಒಪ್ಪಂದದ ಮೌಲ್ಯ ಸುಮಾರು 59,000 ಕೋಟಿಗಳು ಆಗಿದ್ದು, ಒಪ್ಪಂದದ ಪ್ರಕಾರ ಪ್ರತಿ ವರ್ಷ 12 ವಿಮಾನಗಳನ್ನು ಭಾರತಕ್ಕೆ ತಲುಪಿಸಬೇಕಿದೆ. ಇಲ್ಲಿಯವರೆಗೆ ಎಂಟು ವಿಮಾನಗಳು ಭಾರತದ ವಾಯಸೇನೆಯನ್ನು ಸೇರಿಕೊಂಡಿವೆ.

English summary
Three more Rafale jets take off from France for a non-stop flight to India with mid-air refuelling by UAE MRTT, adding more strength to India's air power: Indian Embassy in France
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X