ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಸಂಸತ್ ಕಟ್ಟಡ ನಿರ್ಮಾಣದ ರೇಸ್ ನಲ್ಲಿ 3 ಕಂಪನಿಗಳು

|
Google Oneindia Kannada News

ನವದೆಹಲಿ, ಆಗಸ್ಟ್.12: ಹೊಸ ಸಂಸತ್ ಭವನದ ನಿರ್ಮಾಣಕ್ಕೆ ಹರಾಜು ಪ್ರಕ್ರಿಯೆಯನ್ನು ಕರೆಯಲಾಗಿದೆ. ದೇಶದ ಮೂರು ಪ್ರತಿಷ್ಠಿತ ನಿರ್ಮಾಣ ಕಂಪನಿಗಳು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದುಕೊಂಡಿವೆ ಎಂದು ಸಿಪಿಡಬ್ಲ್ಯೂಡಿ ತಿಳಿಸಿದೆ.

ಎಲ್ ಆಂಡ್ ಟಿ ಲಿಮಿಟೆಡ್, ಟಾಟಾ ಪ್ರಾಜೆಕ್ಟ್ ಲಿಮಿಟೆಡ್ ಹಾಗೂ ಶಪೂರ್ಜಿ ಪಲ್ಲೊಂಜಿ ಆಂಡ್ ಕೋ-ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಹರಾಜು ಪ್ರಕ್ರಿಯೆಯಲ್ಲಿ ಬಿಡ್ ಸಲ್ಲಿಸಲು ಅರ್ಹತೆಯನ್ನು ಪಡೆದುಕೊಂಡಿವೆ. ಉತ್ತರ ಪ್ರದೇಶದ ರಾಜಕೀಯ ನಿರ್ಮಾಣ ನಿಗಮ ಲಿಮಿಟೆಡ್ ಕಂಪನಿ ಸೇರಿದಂತೆ ಏಳು ನಿರ್ಮಾಣ ಕಂಪನಿಗಳು ಬಿಡ್ ಸಲ್ಲಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದವು.

ಭಾರತೀಯರೆನಿಸಿಕೊಳ್ಳಲು ಇನ್ಮುಂದೆ ಹಿಂದಿ ಕಡ್ಡಾಯ?ಭಾರತೀಯರೆನಿಸಿಕೊಳ್ಳಲು ಇನ್ಮುಂದೆ ಹಿಂದಿ ಕಡ್ಡಾಯ?

ಕೇಂದ್ರದ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಅಂಗವಾಗಿ ಪ್ರಸ್ತುತ ಇರುವ ಸಂಸತ್ ಕಟ್ಟಡದ ಹತ್ತಿರವೇ ನಿರ್ಮಿಸುತ್ತಿರುವ ಹೊಸ ಸಂಸತ್ತಿನ ಕಟ್ಟಡದ ನಿರ್ಮಾಣವು 21 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈ ಯೋಜನೆಗೆ ಸುಮಾರು 889 ಕೋಟಿ ರೂಪಾಯಿ ವೆಚ್ಚವಾಗುವ ಬಗ್ಗೆ ಅಂದಾಜಿಸಲಾಗಿದೆ ಎಂದು ಸಿಪಿಡಬ್ಲ್ಯುಡಿ ನೋಟಿಸ್ ನಲ್ಲಿ ಉಲ್ಲೇಖಿಸಿತ್ತು.

3 Construction Companies Qualify For Submission Of Financial Bid For New Parliament Building

ಪಾರ್ಲಿಮೆಂಟ್ ಹೌಸ್ ಎಸ್ಟೇಟ್ ನಲ್ಲಿರುವ 118ನೇ ಪ್ಲಾಟ್ ನಲ್ಲಿಯೇ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ಸರ್ಕಾರದ ಪ್ರಧಾನ ನಿರ್ಮಾಣ ಸಂಸ್ಥೆಯಾಗಿರುವ ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ಸ್ಪಷ್ಟಪಡಿಸಿದೆ. ಪ್ರಸ್ತಾವಿತ ಹೊಸ ಸಂಸತ್ ಕಟ್ಟಡವನ್ನು ಸಿಮೆಂಟ್ ಮತ್ತು ಕಾಂಕ್ರೀಟ್ ಚೌಕಟ್ಟಿನಲ್ಲಿ ನಿರ್ಮಿಸಬೇಕು ಎಂದು ಸಿಪಿಡಬ್ಲ್ಯುಡಿ ತಿಳಿಸಿದೆ.

ಪ್ರಸ್ತುತ ಸಂಸತ್ ಕಟ್ಟಡದ ಪಾಯವು ನೆಲಮಟ್ಟದಿಂದ 1.8 ಮೀಟರ್ ಎತ್ತರದಲ್ಲಿದೆ. ಹೊಸ ಕಟ್ಟಡದ ಪಾಯ ಕೂಡಾ ಹಳೆಯ ಕಟ್ಟಡಕ್ಕೆ ಹೋಲಿಕೆಯಾಗುವಂತೆ ಸಮತಟ್ಟಾಗಿ ನಿರ್ಮಾಣ ಮಾಡಬೇಕು ಎಂದು ಸಂಸ್ಥೆಯು ಹೇಳಿದೆ.

"ಪ್ರಸ್ತಾವಿತ ಕಟ್ಟಡದ ಒಟ್ಟು ಪಾಯದ ವಿಸ್ತೀರ್ಣವು ಸುಮಾರು 65,000 ಚದರ ಮೀಟರ್ ಆಗಿದೆ. ಇದರಲ್ಲಿ ಸುಮಾರು 16,921 ಚದರ ಮೀಟರ್ ನೆಲಮಾಳಿಗೆಯ ಪ್ರದೇಶವಿದೆ. ಕಟ್ಟಡವು ನೆಲ ಮತ್ತು ಎರಡು ಅಂತಸ್ತಿನ ಒಂದು ನೆಲಮಾಳಿಗೆಯು ಇರುತ್ತದೆ" ಎಂದು ಸಂಸ್ಥೆಯು ತಿಳಿಸಿದೆ. ಈ ಯೋಜನೆ ಚಾಲ್ತಿಯಲ್ಲಿ ಇರುವಾಗಲೂ ಪ್ರಸ್ತುತ ಸಂಸತ್ ಭವನದಲ್ಲಿ ಎಂದಿನಂತೆ ಸರ್ಕಾರಿ ಕಾರ್ಯಗಳು ಮುಂದುವರಿಯಲಿವೆ ಎಂದು ಸಿಪಿಡಬ್ಲ್ಯೂಡಿ ಸ್ಪಷ್ಟಪಡಿಸಿದೆ.

English summary
3 Construction Companies Qualify For Submission Of Financial Bid For New Parliament Building.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X