ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ಜಿ ಹಗರಣ: ಎ ರಾಜಾ ವಿರುದ್ಧ ಮತ್ತೆ ಸಿಬಿಐ ಪ್ರಹಾರ

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 20: ಬಹುಕೋಟಿ 2ಜಿ ತರಂಗಾಂತರ ಹಂಚಿಕೆ ಪ್ರಕರಣದ ಆರೋಪಿ ಕೇಂದ್ರದ ಮಾಜಿ ಸಚಿವ ಎ ರಾಜಾ ವಿರುದ್ಧ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಕೇಷನ್ (ಸಿಬಿಐ) ಮತ್ತೆ ಪ್ರಕರಣ ದಾಖಲಿಸಿಕೊಂಡಿದೆ. ಇದರ ಬೆನ್ನಲ್ಲೆ ರಾಜಾಗೆ ಸೇರಿದ ಕಚೇರಿ, ಮನೆ ಮೇಲೆ ದಾಳಿ ನಡೆಸಲಾಗಿದೆ.

ಸುಮಾರು 200 ಕೋಟಿ ರು ಹವಾಲಾ ಹಣವನ್ನು ಲಂಚ ರೂಪದಲ್ಲಿ ಬಳಸಲಾಗಿದೆ ಎಂದು ಮಾಜಿ ಟೆಲಿಕಾಂ ಸಚಿವ ಎ.ರಾಜಾ ಮತ್ತು ಕನ್ನಿಮೋಳಿ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.[ಬೇಲು ಸಿಕ್ತು, ಟೆಲಿಕಾಂ ರಾಜಾ ಇನ್ನು ಮಹಾರಾಜ!]

2G scam: CBI raids 15 properties

1.76 ಲಕ್ಷ ಕೋಟಿ ರೂಪಾಯಿ 2ಜಿ ಸ್ಪೆಕ್ಟ್ರಂ ವಿತರಣೆ ಹಗರಣದಲ್ಲಿ ಬಂಧನಕ್ಕೊಳಗಾದ ನಾಲ್ಕು ವರ್ಷಗಳಿಗೂ ಹೆಚ್ಚಿನ ಅವಧಿಯ ಬಳಿಕ ಬುಧವಾರ ಮಾಜಿ ಟೆಲಿಕಾಂ ಸಚಿವ ಎ. ರಾಜಾ ವಿರುದ್ಧ ಸಿಬಿಐ ಆದಾಯ ಮೀರಿದ ಆಸ್ತಿ ಹೊಂದಿದ ಪ್ರಕರಣವನ್ನು ದಾಖಲಿಸಿದೆ.

ದೆಹಲಿ ಮತ್ತು ಇತರ ನಗರಗಳ 15 ಸ್ಥಳಗಳಲ್ಲಿರುವ ಅವರದೆಂದು ಹೇಳಲಾದ ಅಕ್ರಮ ಆಸ್ತಿಗಳ ಮೇಲೆ ಸಿಬಿಐ ತಂಡಗಳು ಬುಧವಾರ ದಾಳಿ ನಡೆಸಿದ್ದವು. ದೆಹಲಿಯ ಗುಲ್ ಮೋಹರ್ ಪಾರ್ಕ್ ನಿವಾಸದಲ್ಲಿ ಸುಮಾರು 1,7726 ಗ್ರಾಂನಷ್ಟು ಚಿನ್ನ, 4.6 ಲಕ್ಷ ರುನಷ್ಟು ನಗದು, 125ಕ್ಕೂ ಅಧಿಕ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

1996ರಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ಎ ರಾಜಾ ಅವರು ಕೇಂದ್ರದಲ್ಲಿ ಗ್ರಾಮೀಣಾಭಿವೃದ್ಧಿ, ಆರೋಗ್ಯ ಇಲಾಖೆ, ಟೆಲಿಕಾಂ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಸರ್ಕಾರಗಳಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅದರೆ, 2ಜಿ ಹಗರಣ ಆರೋಪದ ನಂತರ ಅಕ್ರಮ ಆಸ್ತಿ ಗಳಿಕೆ ಪ್ರಕರಣ ರಾಜಾ ಕೊರಳನ್ನು ಸುತ್ತಿಕೊಂಡಿದೆ. ಈಗ ಜಾರಿ ನಿರ್ದೇಶನಾಲಯ ಕೂಡಾ ಹೊಸದಾಗಿ ಮನಿಲಾಂಡ್ರಿಂಗ್ ಕೇಸಿನಲ್ಲಿ ರಾಜಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆಯಿದೆ.

English summary
The Central Bureau of Investigation is carrying out raids in several places in connection with the 2G spectrum allocation scam. The properties in question are said to be connected to former telecom minister A Raja against whom a case of disproportionate assets has been registered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X