ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 29 ಮಂದಿಗೆ ಕೊರೊನಾ: ವಿಶ್ವದಲ್ಲಿ 3,285ಕ್ಕೂ ಹೆಚ್ಚು ಮಂದಿ ಬಲಿ

|
Google Oneindia Kannada News

ನವದೆಹಲಿ, ಮಾರ್ಚ್.05: ಜಾಗತಿಕ ಮಟ್ಟದಲ್ಲಿ ಭೀತಿ ಹುಟ್ಟಿಸಿರುವ ಕೊರೊನಾ ಸೋಂಕು ಭಾರತಕ್ಕೂ ಲಗ್ಗೆಯಿಟ್ಟಿದೆ. ಇದುವರೆಗೂ ದೇಶದಲ್ಲಿ 29 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ವಿದೇಶಿ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿ, ಆಗ್ರಾ, ಜೈಪುರ್ ನಲ್ಲಿ 23 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು 29ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲೇ ಸೋಂಕಿತರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.

ಭಾರತಕ್ಕೆ ಬಂದ 15 ಇಟಲಿ ಪ್ರವಾಸಿಗರಿಗೆ ಕೊರೊನಾ: ಖಚಿತ ಪಡಿಸಿದ ಏಮ್ಸ್!ಭಾರತಕ್ಕೆ ಬಂದ 15 ಇಟಲಿ ಪ್ರವಾಸಿಗರಿಗೆ ಕೊರೊನಾ: ಖಚಿತ ಪಡಿಸಿದ ಏಮ್ಸ್!

ನವದೆಹಲಿ ಜನಕ್ ಪುರ್ ದ ಪಂಕಾ ರಸ್ತೆ ಬಳಿಯ ನಿವಾಸಿ 26 ವರ್ಷದ ಪೇಟಿಯಂ ಉದ್ಯೋಗಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇತ್ತೀಚಿಗಷ್ಟೇ ಈ ವ್ಯಕ್ತಿಯು ಸೋಂಕು ಪತ್ತೆಯಾಗಿದ್ದ ಇಟಲಿಯ ನಗರವೊಂದಕ್ಕೆ ಭೇಟಿ ನೀಡಿದ್ದರು ಎಂದು ತಿಳಿದು ಬಂದಿದೆ.

15 ವಿದೇಶಿ ಪ್ರಯಾಣಿಕರಲ್ಲಿ ಕಾಣಿಸಿಕೊಂಡ ಕೊರೊನಾ

15 ವಿದೇಶಿ ಪ್ರಯಾಣಿಕರಲ್ಲಿ ಕಾಣಿಸಿಕೊಂಡ ಕೊರೊನಾ

ಇಟಲಿಯಿಂದ ಭಾರತಕ್ಕೆ ಆಗಮಿಸಿದ 21 ಪ್ರವಾಸಿಗರನ್ನು ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆಗೆ (13 ಮಹಿಳೆಯರು, 8 ಪುರುಷರು) ಒಳಪಡಿಸಿದಾಗ 15 ಮಂದಿಯ ರಕ್ತದ ಮಾದರಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಹೀಗಾಗಿ, ಆ 15 ಇಟಲಿ ಪ್ರವಾಸಿಗರನ್ನು ನವದೆಹಲಿಯ ಚಾವ್ಲಾದಲ್ಲಿ ಇರುವ ITBP ಕ್ಯಾಂಪ್ ನಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಇಟಲಿಯ ದಂಪತಿಯಲ್ಲಿ ಪತ್ತೆಯಾದ ಕೊರೊನಾ

ಇಟಲಿಯ ದಂಪತಿಯಲ್ಲಿ ಪತ್ತೆಯಾದ ಕೊರೊನಾ

ಇನ್ನು, 15 ಮಂದಿ ಕೊರೊನಾ ವೈರಸ್ ಸೋಂಕಿತರ ಪೈಕಿ 69 ವರ್ಷದ ವೃದ್ಧ ಮತ್ತು ಅವರ ಪತ್ನಿಯಲ್ಲಿ ಮಾರಕ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಜೈಪುರ್ ನಲ್ಲಿ ಚಿಕಿತ್ಸೆ ನೀಡಿದ ಬಳಿಕ ಗುರಗಾವ್ ನ ಮೇದಾಂತದಲ್ಲಿ ವಿಶ್ರಾಂತಿ ನೀಡಲಾಗುತ್ತಿದೆ.

ಇಟಲಿಯ ಟೂರ್ ಗೈಡ್ ನಲ್ಲೂ ಸೋಂಕು ಪತ್ತೆ

ಇಟಲಿಯ ಟೂರ್ ಗೈಡ್ ನಲ್ಲೂ ಸೋಂಕು ಪತ್ತೆ

ನವದೆಹಲಿಗೆ ಬಂದಿಳಿದ ಇಟಲಿಯ ಪ್ರವಾಸಿಗರ ತಂಡದ ಗೈಡ್ ಗೂ ಕೂಡಾ ಕೊರೊನಾ ವೈರಸ್ ತಗಲಿರುವ ಬಗ್ಗೆ ವೈದ್ಯಕೀಯ ತಪಾಸಣೆ ವೇಳೆ ತಿಳಿದು ಬಂದಿದೆ. ಸೋಂಕಿತನನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತದೆ. ಉತ್ತರ ಪ್ರದೇಶದ ಆಗ್ರಾದಲ್ಲಿ 6 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದೆ. ಸೋಂಕಿತರನ್ನೆಲ್ಲ ನವದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾಗೆ ಇದುವರೆಗೂ 3,285 ಮಂದಿ ಬಲಿ

ಕೊರೊನಾಗೆ ಇದುವರೆಗೂ 3,285 ಮಂದಿ ಬಲಿ

ವಿಶ್ವವನ್ನೇ ನಡುಗಿಸಿದ ಕೊರೊನಾ ವೈರಸ್ ಗೆ 3,285 ಮಂದಿ ಪ್ರಾಣ ಬಿಟ್ಟಿದ್ದು, 95,411 ಜನರಲ್ಲಿ ಮಾರಕ ಸೋಂಕು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಚೀನಾ ಒಂದರಲ್ಲೇ 2,902 ಮಂದಿ ಕೊರೊನಾಗೆ ಬಲಿಯಾಗಿದ್ದು, 80,409 ಜನರಲ್ಲಿ ಸೋಂಕು ಪತ್ತೆಯಾಗಿದೆ.

English summary
29 Coronavirus Infected Cases In India. Worldwide 3,285 People Death, Total 95,411 Infected Case. Now More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X