ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂನಲ್ಲಿ 289 ವಿದೇಶಿಗರ ಬಂಧನ, 227 ಮಂದಿ ಗಡಿಪಾರು

|
Google Oneindia Kannada News

ನವದೆಹಲಿ, ಡಿಸೆಂಬರ್ 11: ಅಸ್ಸಾಂನಲ್ಲಿ 2019ರಲ್ಲಿ ಇದುವರೆಗೂ 289 ಮಂದಿ ಘೋಷಿತ ವಿದೇಶಿಯರನ್ನು ಬಂಧಿಸಲಾಗಿದ್ದು, ಡಿ.5ರಂದು ಇತರೆ 227 ಮಂದಿಯನ್ನು ಅವರ ಮೂಲ ದೇಶಕ್ಕೆ ಗಡಿಪಾರು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಲೋಕಸಭೆಯಲ್ಲಿ ಮಂಗಳವಾರ ಲಿಖಿತ ರೂಪದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಸಚಿವ ನಿತ್ಯಾನಂದ ರೈ, ಅಸ್ಸಾಂ ಸರ್ಕಾರದಿಂದ ದೊರಕಿರುವ ಮಾಹಿತಿ ಪ್ರಕಾರ 181 ಮಂದಿಯನ್ನು ವಿದೇಶಿಗರೆಂದು ಘೋಷಿಸಲಾಗಿದ್ದು, ಶಿಕ್ಷೆಗೆ ಒಳಗಾದ 44 ಮಂದಿ ವಿದೇಶಿಗರು ಮೂರು ವರ್ಷದ ಬಂಧನ ಪೂರೈಸಿದ್ದಾರೆ ಎಂದು ತಿಳಿಸಿದರು.

ಅಸ್ಸಾಂನಲ್ಲಿ ವಿದೇಶೀಯ ಎಂದು ಘೋಷಣೆಯಾಗಿದ್ದ ವ್ಯಕ್ತಿ ಸಾವು; ಶವ ಪಡೆಯದ ಕುಟುಂಬ ಅಸ್ಸಾಂನಲ್ಲಿ ವಿದೇಶೀಯ ಎಂದು ಘೋಷಣೆಯಾಗಿದ್ದ ವ್ಯಕ್ತಿ ಸಾವು; ಶವ ಪಡೆಯದ ಕುಟುಂಬ

ವಿದೇಶಿಗರ ಕಾಯ್ದೆಯಡಿ ಬಂಧನಕ್ಕೊಳಗಾಗಿ ಮೂರು ವರ್ಷಕ್ಕೂ ಅಧಿಕ ಕಾಲ ಶಿಕ್ಷೆ ಅನುಭವಿಸಿದ್ದ 128 ಮಂದಿಯನ್ನು ಮೇ 10ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದಂತೆ ಬಿಡುಗಡೆ ಮಾಡಲಾಗಿದೆ. 2019ರ ಅಕ್ಟೋಬರ್‌ನಲ್ಲಿ ಅಸ್ಸಾಂನಲ್ಲಿನ ವಿವಿಧ ನ್ಯಾಯಮಂಡಳಿಗಳು 1.14 ಲಕ್ಷ ಜನರು ಭಾರತೀಯ ಪೌರರೆಂದು ಮತ್ತು 1.29 ಲಕ್ಷ ಮಂದಿ ವಿದೇಶಿಗರೆಂದು ಘೋಷಿಸಿತ್ತು ಎಂದು ಹೇಳಿದರು.

289 Declared Foreigners Detained In Assam And 227 Were Deported

ಯಾವುದೇ ಮಗುವನ್ನು ವಿದೇಶಿಗ ಎಂದು ಘೋಷಿಸಿಲ್ಲ. ಅಕ್ಟೋಬರ್‌ನಲ್ಲಿ 4,68,905 ಮಂದಿಯನ್ನು ವಿದೇಶಿ ನ್ಯಾಯಮಂಡಳಿಗಳ ಪರಿಶೀಲನೆಗೆ ಒಳಪಡಿಸಲಾಗಿತ್ತು. ಇವರಲ್ಲಿ 1,29,009 ಮಂದಿಯನ್ನು ವಿದೇಶಿಗರೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ 290 ಮಹಿಳೆಯರನ್ನು ವಿದೇಶಿಗರೆಂದು ಗುರುತಿಸಲಾಗಿದೆ. ಕಳೆದ ಆರು ತಿಂಗಳಿನಲ್ಲಿ ಅಸ್ಸಾಂನ ವಿದೇಶಿ ಬಂಧನ ಕೇಂದ್ರಗಳಲ್ಲಿ ಯಾವುದೇ ಆತ್ಮಹತ್ಯೆಯ ಪ್ರಕರಣಗಳು ನಡೆದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

English summary
The government said in Lok Sabha said, 289 declared foreingers were detained in Assam in 2019 and 227 others were deported to their country of origin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X