• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೀ ಸುದ್ದಿ ವಾಹಿನಿಯ 28 ಸಿಬ್ಬಂದಿಗೆ ಕೊರೊನಾ ದೃಢ

|

ನವದೆಹಲಿ, ಮೇ 18: ಜೀ ಸುದ್ದಿ ವಾಹಿನಿಯ 28 ಸಿಬ್ಬಂದಿಗೆ ಮಾರಕ ಕೊರೊನಾ ವೈರಸ್ ಸೋಂಕು ತಗುಲಿದೆ.

ಈ ಕುರಿತು ಟ್ವೀಟ್ ಮಾಡಿರುವ ಜೀ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕ ಸುಧೀರ್ ಚೌದರಿ ಅವರು, ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ''ಇದು ಅತ್ಯಂತ ಕಷ್ಟದ ಸಮಯ ನಮ್ಮ 28 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಕೋವಿಡ್ ಗೆ ಅಂಜದೇ ಕಾರ್ಯನಿರ್ವಹಿಸುತ್ತಿದ್ದ ಇವರ ವೃತ್ತಿಪರತೆಯನ್ನು ಮೆಚ್ಚಲೇಬೇಕು. ಅವರೆಲ್ಲ ಆದಷ್ಟು ಬೇಗ ಗುಣಮುಖರಾಗುತ್ತಾರೆ ಎನ್ನುವ ವಿಶ್ವಾಸ ನನಗಿದೆ'' ಎಂದು ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ಒಂದೇ ದಿನ 99 ಕೊರೊನಾ: ಸೋಂಕಿತರಲ್ಲಿ 21 ಮಕ್ಕಳು

ಜೀ ಮಾಧ್ಯಮ ಸಂಸ್ಥೆಯಲ್ಲಿ 2500 ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರ ತಪಾಸಣೆ ಹಾಗೂ ಮುನ್ನೆಚ್ಚರಿಕೆಯನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ. ಜೀ ಮಿಡಿಯಾ ಕೋವಿಡ್‌ಗೆ ಹೆದರುವುದಿಲ್ಲ. ಇನ್ನೂ ಹೆಚ್ಚು ದಕ್ಷವಾಗಿ ಕೆಲಸ ಮಾಡುತ್ತದೆ ಎಂದು ಚೌದರಿ ಹೇಳಿದ್ದಾರೆ.

ನೊಯ್ಡಾದಲ್ಲಿರುವ ಜೀ ಸುದ್ದಿವಾಹಿನಿಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 28 ಸಿಬ್ಬಂದಿಗೆ ಸೋಂಕು ತಗುಲಿದೆ.

English summary
28 Covid19 Case Positive In Z News . Z News Editor In Cheif Sudhir Choudary Confirms It.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X