ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಟಲಿಯಿಂದ ಏರ್‌ಲಿಫ್ಟ್‌ ಮಾಡಿದ್ದ ಭಾರತೀಯರಿಗೆ ಕೊರೊನಾ ಸೋಂಕಿಲ್ಲ

|
Google Oneindia Kannada News

ನವದೆಹಲಿ, ಏಪ್ರಿಲ್ 4: ದಿನಕ್ಕೆ ಕೊರೊನಾ ವೈರಸ್‌ನಿಂದ ಸಾವಿರಾರು ಮಂದಿ ಪ್ರಾಣಕಳೆದುಕೊಳ್ಳುತ್ತಿರುವ ಇಟಲಿಯಿಂದ 217 ಮಂದಿ ಭಾರತೀಯರನ್ನು ಏರ್‌ಲಿಫ್ಟ್ ಮಾಡಿದ್ದು ಯಾರಿಗೂ ಕೊರೊನಾ ಸೋಂಕಿಲ್ಲ ಎಂದು ದೃಢಪಟ್ಟಿದೆ.

ಕೊರೋನಾ ವೈರಸ್ ಪೀಡಿತ ಇಟಲಿಯಿಂದ ಏರ್ ಲಿಫ್ಟ್ ಮೂಲಕ ಭಾರತಕ್ಕೆ ಕರೆತರಲಾಗಿದ್ದ 218 ಭಾರತೀಯರ ಪೈಕಿ 217 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

corona

ಕಳೆದ ಮಾರ್ಚ್ 15ರಂದು ಇಟಲಿಯ ಮಿಲಾನ್ ನಿಂದ್ ಏರ್ ಇಂಡಿಯಾ ವಿಮಾನದ ಮೂಲಕ 218 ಮಂದಿ ಭಾರತೀಯರನ್ನು ಭಾರತಕ್ಕೆ ಕರೆತರಲಾಗಿತ್ತು. ಭಾರತಕ್ಕೆ ಬಂದ ಬಳಿಕ ಇವರೆಲ್ಲರನ್ನೂ ಕ್ವಾರಂಟೈನ್ ನಲ್ಲಿಡಲಾಗಿತ್ತು. ಇದೀಗ ಇವರನ್ನು ಕೋವಿಡ್ 19 ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರ ವರದಿ ಈಗ ಬಂದಿದೆ.

ಬ್ರಿಟನ್‌ನ ಪ್ರಿನ್ಸ್ ಚಾರ್ಲ್ಸ್ ಗೆ ಕೊರೊನಾ: ಬೆಂಗಳೂರಿನ ವೈದ್ಯರಿಂದ ಚಿಕಿತ್ಸೆಬ್ರಿಟನ್‌ನ ಪ್ರಿನ್ಸ್ ಚಾರ್ಲ್ಸ್ ಗೆ ಕೊರೊನಾ: ಬೆಂಗಳೂರಿನ ವೈದ್ಯರಿಂದ ಚಿಕಿತ್ಸೆ

ವರದಿಯಲ್ಲಿರುವ 217 ಮಂದಿಯಲ್ಲಿ ಯಾರಲ್ಲೂ ಕೊರೋನಾ ಸೋಂಕು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಪ್ರಸ್ತುತ ಐಟಿಬಿಪಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ಎಲ್ಲ 217 ಮಂದಿಯನ್ನು ಬಿಡುಗಡೆ ಮಾಡಲಾಗಿದ್ದು, ಮನೆಯಲ್ಲಿ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ.

ಇನ್ನು ಮತ್ತೋರ್ವ ಭಾರತೀಯ ತನ್ನ ತಂದೆ ತೀರಿಹೋದ ಹಿನ್ನಲೆಯಲ್ಲಿ ವಿಶೇಷ ಅನುಮತಿಯೊಂದಿಗೆ ಅವರು ಮನೆಯಲ್ಲೇ ಕ್ವಾರಂಟೈನ್ ಗೆ ಒಳಗಾಗಿದ್ದಾರೆ ಎನ್ನಲಾಗಿದೆ.

English summary
A group of 217 Indians evacuated from Italy have been found negative for the coronavirus after spending over a fortnight at an ITBP quarantine facility, officials said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X