• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ದೆಹಲಿಯಲ್ಲಿ ಒಂದೇ ದಿನ ಕೊರೊನಾದಿಂದ 10 ಮಂದಿ ಸಾವು!

|
Google Oneindia Kannada News

ದೆಹಲಿ, ಆಗಸ್ಟ್ 12: ಕೊರೊನಾ ವೈರಸ್ ಸೋಂಕಿನಿಂದ ಸಾವಿನ ಅಪಾಯ ತಗ್ಗುತ್ತಿದೆ ಎಂಬ ನಂಬಿಕೆ ಹುಸಿಯಾಗುವಂತೆ ತೋರುತ್ತಿದೆ. ರಾಷ್ಟ್ರ ರಾಜಧಾನಿಯಲ್ಲಿ ಒಂದೇ ದಿನ ಕೋವಿಡ್19 ಸೋಂಕಿಗೆ 10 ಮಂದಿ ಪ್ರಾಣ ಬಿಟ್ಟಿರುವುದು ವರದಿಯಾಗಿದೆ.

ಕಳೆದ 24 ಗಂಟೆಗಳಲ್ಲಿ 2136 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ದೆಹಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ದೆಹಲಿಯಲ್ಲಿ ಕೊರೊನಾ ವೈರಸ್ ಅಪಾಯದ ಹಿನ್ನೆಲೆ ಅತಿಹೆಚ್ಚು ಮಾದರಿಯನ್ನು ಸಂಗ್ರಹಿಸಿ ಸೋಂಕಿನ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಕೋವಿಡ್-19 ಸೋಂಕಿನ ಪಾಸಿಟಿವಿಟಿ ದರವು ಶೇ.15.02ರಷ್ಟಾಗಿದೆ.

ನಿರಂತರ 10 ದಿನ 2,000ಕ್ಕಿಂತ ಹೆಚ್ಚು ಪ್ರಕರಣ: ದೆಹಲಿಯಲ್ಲಿ ಕಳೆದ 10 ದಿನಗಳಿಂದ ನಿರಂತರವಾಗಿ 2000ಕ್ಕಿಂತ ಹೆಚ್ಚು ಕೋವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ದೆಹಲಿಯಲ್ಲಿ ಗುರುವಾರ 2,726 ಹೊಸ COVID-19 ಪ್ರಕರಣಗಳು ವರದಿಯಾಗಿದ್ದು, ಆರು ಮಂದಿ ಸಾವಿನ ಮನೆ ಸೇರಿದ್ದರು.

ಆದರೆ ಪಾಸಿಟಿವಿಟಿ ದರವು ಶೇಕಡಾ 14.38ರಷ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿತ್ತು.

ಕೊರೊನಾ ವೈರಸ್ ಸಕ್ರಿಯ ಪ್ರಕರಣಗಳ ಸಂಖ್ಯೆಯು ಆರು ತಿಂಗಳಿನಲ್ಲಿ ಗರಿಷ್ಠ ಮಟ್ಟಕ್ಕೆ ಈಗಾಗಲೇ ತಲುಪಿದೆ. ದೆಹಲಿಯಲ್ಲಿ ಗುರುವಾರದ ಅಂಕಿ-ಅಂಶಗಳ ಪ್ರಕಾರ, 8840 ಕೋವಿಡ್-19 ಸಕ್ರಿಯ ಪ್ರಕರಣಗಳಿವೆ.

English summary
2136 New Corona virus Cases, 10 death reported In Delhi in last 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X