ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

21 ಔಷಧಗಳ ಬೆಲೆ ಏರಿಕೆ: ಎನ್ ಪಿಪಿಎ ಸಮ್ಮತಿ

|
Google Oneindia Kannada News

ನವದೆಹಲಿ, ಡಿಸೆಂಬರ್ 15: ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಬಳಿಕ ಜನಸಾಮಾನ್ಯರಿಗೆ ಶೀಘ್ರದಲ್ಲೇ ಔಷಧಗಳ ಬೆಲೆಯಲ್ಲೂ ಏರಿಕೆ ಕಂಡು ಬರಲಿದೆ.

ದಿನನಿತ್ಯ ಬಳಸುವಂತಹ 21 ಔಷಧಗಳ ದರದಲ್ಲಿ ಶೇ,50 ರಷ್ಟು ಹೆಚ್ಚಿಸಲು ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ(ಎನ್ ಪಿಪಿಎ) ಸಮ್ಮತಿ ನೀಡಿದೆ.

ಜನ ಸಂಜೀವಿನಿಯಲ್ಲಿ ಶೇ.50ರಷ್ಟು ರಿಯಾಯಿತಿಯಲ್ಲಿ ಔಷಧಿಗಳು ಲಭ್ಯಜನ ಸಂಜೀವಿನಿಯಲ್ಲಿ ಶೇ.50ರಷ್ಟು ರಿಯಾಯಿತಿಯಲ್ಲಿ ಔಷಧಿಗಳು ಲಭ್ಯ

ಎನ್ ಪಿಪಿಎ ಬೆಲೆ ಏರಿಸುವ ತೀರ್ಮಾನದಿಂದಾಗಿ ರೋಗ ನಿರೋಧಕ, ಅಲರ್ಜಿ ತಡೆಯುವ, ಮಲೇರಿಯಾ ತಡೆಗಟ್ಟುವ, ಬಿಸಿಜಿ ಲಸಿಕೆ, ಸಿ- ಜೀವಸತ್ವದ ಔಷಧಿಗಳ ಬೆಲೆಗಳಲ್ಲಿ ಏರಿಕೆ ಕಂಡುಬರಲಿದೆ.

21 Medicines In Price Increases: NPPA Approval

ಔಷಧ ದರ ನಿಯಂತ್ರಣ ಆದೇಶ 2013 ರ ಅನ್ವಯ ಈ ಪರಿಷ್ಕರಣೆ ಮಾಡಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಬೆಲೆ ಏರಿಕೆ ಕ್ರಮ ಅನಿವಾರ್ಯ ಎಂದು ಎನ್ ಪಿಪಿಎ ಸಮರ್ಥಿಸಿಕೊಂಡಿದೆ. ಈ ನಿಯಮದ ಪ್ರಕಾರ ಇಲ್ಲಿಯವರೆಗೂ ಔಷಧಿಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿತ್ತು, ಆದರೆ ಬೆಲೆ ಹೆಚ್ಚಳವಾಗಿರಲಿಲ್ಲ. ಹೃದಯಕ್ಕೆ ಅಳವಡಿಸುವ ಸ್ಟೆಂಟ್ಸ್, ಮೂಳೆ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಕೃತಕ ಸಾದನಗಳ ಬೆಲೆ ಇಳಿಕೆ ಕಂಡಿತ್ತು.

ಕಳೆದ ವರ್ಷದ ಏಪ್ರಿಲ್ ನಲ್ಲಿ ಔಷಧಗಳ ಸಗಟು ದರ ಸೂಚ್ಯಂಕ ಏರಿಕೆ ಕಂಡುಬಂದಿತ್ತು, ಅವಾಗಲೇ ದರ ಪರಿಷ್ಕರಣೆ ಮಾಡುವ ಪ್ರಸ್ತಾಪ ಇದ್ದರೂ, ಎನ್ ಪಿಪಿಎ ಮುಂದಾಗಿರಲಿಲ್ಲ. ಡಿಸೆಂಬರ್ ಎರಡನೇ ವಾರದಲ್ಲಿ ನಡೆದ ಸಭೆಯಲ್ಲಿ ಅನುಸೂಚಿತ ಪಟ್ಟಿಯಲ್ಲಿ ಉಲ್ಲೇಖವಾಗಿರುವ ೨೧ ಔಷಧಿಗಳ ಬೆಲೆ ಹೆಚ್ಚಿಸಲು ಶಿಫಾರಸು ಮಾಡಿದ್ದಾರೆ.

ಔಷಧಿ ನಿಷೇಧಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ದೆಹಲಿ ಹೈಕೋರ್ಟ್ ತಡೆಔಷಧಿ ನಿಷೇಧಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ದೆಹಲಿ ಹೈಕೋರ್ಟ್ ತಡೆ

ಔಷಧಗಳ ಬೆಲೆ ಏರಿಕೆಗೆ ಕಾರಣಗಳು:

ಔಷಧ ತಯಾರಿಕೆಗೆ ಬಳಕೆ ಮಾಡುವ ವಸ್ತುಗಳ ಬೆಲೆ ಹೆಚ್ಚಾಗಿದ್ದು, ಔಷಧಗಳ ಉತ್ಪಾದನೆಯ ವೆಚ್ಚ ಕೂಡಾ ಹೆಚ್ಚಳವಾಗಿದೆ. ಅದಕ್ಕಾಗಿ ಔಷಧ ದರ ಪರಿಷ್ಕರಣೆ ಮಾಡುವಂತೆ ತಯಾರಿಕಾ ಕಂಪನಿಗಳು ಎರಡು ವರ್ಷಗಳಿಂದ ಒತ್ತಾಯ ಮಾಡಿದ್ದವು.

ಆರಂಭಿಕ ಹಂತದ ಚಿಕಿತ್ಸೆಗೆ ಬಳಸಲಾಗುವ 21 ಔಷಧಗಳ ಬೆಲೆ ಬಹಳ ಕಡಿಮೆ ಇದೆ, ದರ ಏರಿಸದಿದ್ದಲ್ಲಿ ಇವುಗಳ ಉತ್ಪಾದನೆ ನಿಲ್ಲಿಸುವುದಾಗಿ ಔಷಧಿ ತಯಾರಿಕಾ ಕಂಪನಿಗಳು ಹೇಳಿದ್ದರಿಂದ ದರ ವೆಚ್ಚಳಕ್ಕೆ ಕಾರಣವಾಗಿದೆ.

English summary
After the rise in day to day commodity prices, the common people will soon see a rise in the prices of medicines. The National Drug Regulatory Authority (NPPA) has approved a 50 percent increase in the daily use of 21 Medicines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X