ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡೇ ತಿಂಗಳಲ್ಲಿ 21 ಸಾವಿರ ವಾಹನಗಳಿಗೆ ದಂಡ

|
Google Oneindia Kannada News

ನವದೆಹಲಿ, ಮೇ 28: ದೆಹಲಿಯಲ್ಲಿ ಅಪಘಾತಗಳನ್ನು ನಿಯಂತ್ರಿಸಲು ಜಾರಿಗೆ ತಂದ ಬಸ್‌ ಲೇನ್‌ಗಳ ನಿಯಮ ಉಲ್ಲಂಘಿಸಿದ್ದಕ್ಕಾಗಿ 21 ಸಾವಿರಕ್ಕೂ ಹೆಚ್ಚು ಖಾಸಗಿ ವಾಹನಗಳಿಗೆ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಲ್ಲಿ ಅಪಘಾತ ತಡೆಗಟ್ಟಲು ಮತ್ತು ಸಂಚಾರ ದಟ್ಟಣೆ ನಿಯಂತ್ರಿಸಲು ದೆಹಲಿ ಸರ್ಕಾರದ ಸಾರಿಗೆ ಇಲಾಖೆ ಬಸ್ ಮತ್ತು ಸರಕು ವಾಹನ ಓಡಾಟಕ್ಕೆ ಬಸ್ ಲೇನ್ ನಿಗದಿಪಡಿಸಿತ್ತು. ಏಪ್ರಿಲ್ 1 ರಿಂದ ಆರಂಭವಾದ ಈ ಅಭಿಯಾನ ಎರಡು ತಿಂಗಳು ಕಳೆಯುವ ಮುನ್ನವೇ 21,820 ವಾಹನಗಳು ನಿಯಮ ಉಲ್ಲಂಘನೆ ಮಾಡಿವೆ.

ಕಸದ ಲಾರಿಗಳ ಅವಘಡ: ಬೆಂಗಳೂರು ಸಂಚಾರಿ ಪೊಲೀಸ್ ಸ್ಪೆಷಲ್ ಡ್ರೈವ್ಕಸದ ಲಾರಿಗಳ ಅವಘಡ: ಬೆಂಗಳೂರು ಸಂಚಾರಿ ಪೊಲೀಸ್ ಸ್ಪೆಷಲ್ ಡ್ರೈವ್

ಏಪ್ರಿಲ್‌ 1ರಿಂದ ಮೇ 26ರ ನಡುವೆ 21,820 ವಾಹನಗಳಿಗೆ ದಂಡ ವಿಧಿಸಲಾಗಿದ್ದು. 391 ಡಿಟಿಸಿ ಬಸ್‌ಗಳು, 328 ಕ್ಲಸ್ಟರ್ ಬಸ್‌ಗಳೂ ಕೂಡ ಸೇರಿವೆ. ನಿಯಮ ಉಲ್ಲಂಘಿಸಿದ 819 ಬಸ್‌ ಚಾಲಕರಿಗೂ ದಂಡ ವಿಧಿಸಲಾಗಿದೆ.

21,820 Private Vehicles Fined For Violating Designated Bus Lanes in Delhi

ನಿಯಮ ಉಲ್ಲಂಘಿಸಿದ ಖಾಸಗಿ ವಾಹನಗಳಿಗೆ ದಂಡ ವಿಧಿಸಲಾಗಿದ್ದು, ಬಸ್‌ ಲೇನ್‌ನಲ್ಲಿ ನಿಯಮ ಉಲ್ಲಂಘಿಸಿ ಪಾರ್ಕಿಂಗ್ ಮಾಡಿದ್ದ 359 ವಾಹನಗಳನ್ನು ಟೋಯಿಂಗ್ ಮಾಡಲಾಗಿದೆ. ಗೊತ್ತುಪಡಿಸಿದ ಬಸ್‌ಲೇನ್‌ಗಳಲ್ಲಿ ಬಸ್ ಚಾಲನೆ ಮಾಡದ ಖಾಸಗಿ ಬಸ್ ನಿರ್ವಾಹಕರು ಮತ್ತು ಚಾಲಕರಿಗೆ ಮೇ 9 ರಿಂದ ದಂಡ ವಿಧಿಸಲು ಆರಂಭಿಸಲಾಗಿದೆ.

ಬೆಂಗಳೂರು: ಸೈಕ್ಲಿಂಗ್ ಉತ್ತೇಜಿಸಲು ಸೈಕಲ್ ಎಣಿಸುವ ಸಾಧನ ಅಳವಡಿಕೆಬೆಂಗಳೂರು: ಸೈಕ್ಲಿಂಗ್ ಉತ್ತೇಜಿಸಲು ಸೈಕಲ್ ಎಣಿಸುವ ಸಾಧನ ಅಳವಡಿಕೆ

ನಿಯಮ ಉಲ್ಲಂಘಿಸಿದರೆ 10,000 ರೂ. ದಂಡ

ಏಪ್ರಿಲ್ 1ರಿಂದ ಬಸ್ ಮತ್ತು ಸರಕು ಸಾಗಾಣೆ ವಾಹನಗಳಿಗೆ ಮಾರ್ಗಗಳನ್ನು ಗುರುತಿಸಿ ಆ ಮಾರ್ಗದಲ್ಲೇ ಚಲಿಸುವಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಿದೆ. ನಿಯಮ ಉಲ್ಲಂಘನೆ ಮಾಡಿದರೆ 10 ಸಾವಿರ ರೂ. ದಂಡ ವಿಧಿಸಲಾಗುವುದು, ದಂಡ ಪಾವತಿಸದಿದ್ದರೆ ಆರು ತಿಂಗಳ ಜೈಲು ಶಿಕ್ಷೆಗೆ ಒಳಪಡಿಸುವ ಅವಕಾಶ ಇದೆ. ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆಯವರೆಗೆ ಮೀಸಲಾದ ಲೇನ್‌ಗಳಲ್ಲೇ ಬಸ್ ಮತ್ತು ಸರಕು ವಾಹನಗಳು ಚಲಿಸಬೇಕು. ಈ ಅಭಿಯಾನಕ್ಕೆ ಟ್ರಾಫಿಕ್ ಪೊಲೀಸರು ಕೂಡ ಕೈ ಜೋಡಿಸಿದ್ದಾರೆ.

ಪದೇ ಪದೇ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ

ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಅನುಸರಿಸಿ, ಲೇನ್ ಶಿಸ್ತಿನ ಮೊದಲ ಉಲ್ಲಂಘನೆ ಮಾಡಿದವರಿಗೆ 10,000 ರೂ. ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧ ಮೋಟಾರು ವಾಹನಗಳ (MV) ಕಾಯಿದೆಯಡಿ ಕಾನೂನು ಕ್ರಮ ಜರುಗಿಸಲಾಗುತ್ತದೆ. ಮೂರನೇ ಬಾರಿಯೂ ನಿಯಮ ಉಲ್ಲಂಘನೆ ಮಾಡಿದ ವಾಹನಗಳ ಚಾಲಕರ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವುದು ಮತ್ತು ನಾಲ್ಕನೆ ಬಾರಿ ನಿಯಮ ಉಲ್ಲಂಘಿಸಿದರೆ ವಾಹನದ ಪರವಾನಗಿಯನ್ನು ರದ್ದುಗೊಳಿಸಲು ಅವಕಾಶವಿದೆ.

ಸದ್ಯಕ್ಕೆ ಸಾರಿಗೆ ಇಲಾಖೆ ದಂಡವನ್ನು ಮಾತ್ರ ವಿಧಿಸುತ್ತಿದ್ದ ಲೋಕೋಪಯೋಗಿ ಇಲಾಖೆ ರಸ್ತೆಗಳ ಮಾರ್ಕಿಂಗ್ ಮಾಡುತ್ತಿದ್ದು, ಕಾಮಗಾರಿ ಪೂರ್ಣವಾದ ನಂತರ ಎಲ್ಲಾ ಕಾನೂನುಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

English summary
Over 21,000 private vehicles have been fined for violating designated bus lanes within two months of the launch of an enforcement drive by Delhi government's Transport department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X