• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

2024 ರ ಲೋಕಸಭಾ ಚುನಾವಣೆ: ಬಿಜೆಪಿ ವಿರುದ್ಧ ಪಕ್ಷಗಳನ್ನು ಒಟ್ಟುಗೂಡಿಸುತ್ತಾರಾ ಮಮತಾ?

|
Google Oneindia Kannada News

ನವದೆಹಲಿ, ಜು.29: ರಾಷ್ಟ್ರ ರಾಜಧಾನಿ ನವದೆಹಲಿಗೆ ಆಗಮಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ವಿರೋಧಿ ಒಕ್ಕೂಟಕ್ಕಾಗಿ ವಿಪಕ್ಷಗಳನ್ನು ಒಟ್ಟುಗೂಡಿಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ತಿಳಿದು ಬರುತ್ತಿದೆ. ಇನ್ನು ನರೇಂದ್ರ ಮೋದಿ ಸರ್ಕಾರದ ವಿರುದ್ದದ ಹೋರಾಟಕ್ಕಾಗಿ ಮಮತಾ ಬ್ಯಾನರ್ಜಿ ಬುಧವಾರ ಬಿಜೆಡಿ ಮತ್ತು ವೈಎಸ್ಆರ್‌ಸಿಪಿಯಂತಹ ಪಕ್ಷಗಳಿಗೆ ಬಾಗಿಲು ತೆರೆಯಲಾಗಿದೆ ಎಂದು ಸೂಚಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿಗೆ ಸೋಲನ್ನು ಉಣಬಡಿಸಿದ ಮಮತಾ ಬ್ಯಾನರ್ಜಿ ಪ್ರತಿಪಕ್ಷವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆಯನ್ನು ಹುಟ್ಟಿಸಿದ್ದಾರೆ. ಹಾಗೆಯೇ ಮಮತಾ ಬ್ಯಾನರ್ಜಿ ಹಳೆಯ ಪಕ್ಷವಾದ ಕಾಂಗ್ರೆಸ್ ಪ್ರಾಮುಖ್ಯತೆಯನ್ನು ಒಪ್ಪಿಕೊಂಡಿದ್ದಾರೆ.

'ಚಾಯ್ ಪೆ ಚರ್ಚಾ': ಸೋನಿಯಾರನ್ನು ಭೇಟಿಯಾದ ಮಮತಾ, ರಾಹುಲ್‌ ಉಪಸ್ಥಿತಿ'ಚಾಯ್ ಪೆ ಚರ್ಚಾ': ಸೋನಿಯಾರನ್ನು ಭೇಟಿಯಾದ ಮಮತಾ, ರಾಹುಲ್‌ ಉಪಸ್ಥಿತಿ

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಮಮತಾ ಬ್ಯಾನರ್ಜಿ, ''ಚುನಾವಣೆಗಳು ಹತ್ತಿರ ಬಂದಾಗ, ವಿರೋಧ ಪಕ್ಷಗಳು ಒಂದಾಗಲು ನಿರ್ಧರಿಸುತ್ತದೆ. ದೇಶವು ನರೇಂದ್ರ ಮೋದಿ ವಿರುದ್ಧ ಹೋರಾಡಲಿದೆ. ಪ್ರಧಾನಿ ಮೋದಿ ವಿರುದ್ಧ ಹೋರಾಡಲು ಹಲವು ಮುಖಗಳು ಇರುತ್ತವೆ. ಬಿಜೆಪಿ ಗಾತ್ರದಲ್ಲಿ ದೊಡ್ಡದಾಗಿರಬಹುದು, ಆದರೆ ರಾಜಕೀಯ ಕೋನದಿಂದ ಪ್ರತಿಪಕ್ಷಗಳು ಬಲವಾಗಿರುತ್ತವೆ. ಪ್ರತಿ ಪಕ್ಷಗಳು ಇತಿಹಾಸವನ್ನು ನಿರ್ಮಿಸುತ್ತಾರೆ,'' ಎಂದು ಹೇಳಿದ್ದಾರೆ.

 ಬಿಜೆಡಿ, ವೈಎಸ್ಆರ್‌ಸಿಪಿ ಪ್ರಾಮುಖ್ಯತೆ ಒತ್ತಿ ಹೇಳಿದ ದೀದಿ

ಬಿಜೆಡಿ, ವೈಎಸ್ಆರ್‌ಸಿಪಿ ಪ್ರಾಮುಖ್ಯತೆ ಒತ್ತಿ ಹೇಳಿದ ದೀದಿ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರನ್ನು ಹಗಲಿನಲ್ಲಿ ಭೇಟಿಯಾದ ಬ್ಯಾನರ್ಜಿಗೆ ಸಂಸತ್ತಿನಲ್ಲಿ ಆಗಾಗ್ಗೆ ಕೇಂದ್ರ ಸರ್ಕಾರದ ಪರವಾಗಿ ನಿಂತ ಬಿಜೆಡಿ ಮತ್ತು ವೈಎಸ್ಆರ್‌ಸಿಪಿ ಬಗ್ಗೆ ನಿರ್ದಿಷ್ಟವಾಗಿ ಮಾಧ್ಯಮಗಳು ಪ್ರಶ್ನಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, "ನಾನು ನವೀನ್‌ ಜಿ (ಪಟ್ನಾಯಕ್) ಮತ್ತು ಜಗನ್ (ಮೋಹನ್ ರೆಡ್ಡಿ) ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ," ಎಂದರು. ಹಾಗೆಯೇ ಭವಿಷ್ಯದ ಪ್ರತಿಪಕ್ಷದಲ್ಲಿ ಬಿಜೆಡಿ ಮತ್ತು ವೈಎಸ್ಆರ್‌ಸಿಪಿ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಗ್ಗೆ ಕೇಳಿದಾಗ, "ಅವರು ಇದೀಗ ಬಿಜೆಪಿಯೊಂದಿಗಿದ್ದಾರೆ. ಬಿಜೆಪಿಯನ್ನು ಬಿಜೆಪಿಯನ್ನು ತೊರೆದರೆ, ನೋಡೋಣ," ಎಂದು ಹೇಳಿದರು.

ಐಕ್ಯ ವಿಪಕ್ಷದ ನಾಯಕರು ಯಾರು?: 'ನಾನು ಜ್ಯೋತಿಷಿಯಲ್ಲ' ಎಂದ ಮಮತಾಐಕ್ಯ ವಿಪಕ್ಷದ ನಾಯಕರು ಯಾರು?: 'ನಾನು ಜ್ಯೋತಿಷಿಯಲ್ಲ' ಎಂದ ಮಮತಾ

 ಅಧಿವೇಶನದ ಬಳಿಕ ಮತ್ತೆ ಚರ್ಚೆ

ಅಧಿವೇಶನದ ಬಳಿಕ ಮತ್ತೆ ಚರ್ಚೆ

ಇನ್ನು ಈ ವಿಪಕ್ಷಗಳ ಒಕ್ಕೂಟದಲ್ಲಿ ಯಾವ ಪಾತ್ರವನ್ನು ವಹಿಸಲು ಬಯಸುತ್ತಾರೆ ಎಂದು ಪ್ರಶ್ನಿಸಿದಾಗ, "ನಾನು ಇಂದು ಸೋನಿಯಾ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್‌ರನ್ನು ಭೇಟಿಯಾದೆ. ನಾನು ನಿನ್ನೆ ಲಾಲು ಪ್ರಸಾದ್ ಯಾದವ್ ಜೊತೆ ಮಾತನಾಡಿದೆ. ಮಾತುಕತೆಯಿಂದ ವಿಷಯಗಳು ಹೊರಹೊಮ್ಮುತ್ತವೆ. ಕೆಲವು ಚರ್ಚೆಗಳು ನಡೆದಿವೆ. ಸಂಸತ್ತಿನ ಮಾನ್ಸೂನ್ ಅಧಿವೇಶನ ಮುಗಿದ ನಂತರ ಹೆಚ್ಚು ದೃಢವಾದ ಚರ್ಚೆಗಳು ನಡೆಯಲಿವೆ. ವಿಷಯಗಳು ಹೇಗೆ ಬದಲಾಗುತ್ತವೆ ಎಂಬುದನ್ನು ನೋಡೋಣ," ಎಂದು ಹೇಳಿದರು.

 ರಾಜಕೀಯ ಚಂಡಮಾರುತ ಎದ್ದರೆ...

ರಾಜಕೀಯ ಚಂಡಮಾರುತ ಎದ್ದರೆ...

ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಾದೇಶಿಕ ಪಕ್ಷಗಳು ನಿಲುವು ತಳೆಯುತ್ತವೆ ಎಂದು ಟಿಎಂಸಿ ನಾಯಕ ಆಶಾವಾದ ವ್ಯಕ್ತಪಡಿಸಿದರು. ಬಿಜೆಪಿಗೆ ಸ್ನೇಹಪರವೆಂದು ಪರಿಗಣಿಸುವ ಪಕ್ಷಗಳನ್ನೂ ದೀದಿ ತಲುಪುತ್ತಾರೆಯೇ ಎಂದು ಕೇಳಿದಾಗ, "ನಾನು ನವೀನ್ ಪಟ್ನಾಯಕ್, ಜಗನ್ ಮೋಹನ್ ರೆಡ್ಡಿ, ಎಂ.ಕೆ. ಸ್ಟಾಲಿನ್ (ಡಿಎಂಕೆ) ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ಇಂದು ಆಗುವುದಿಲ್ಲ, ನಾಳೆ ಆಗಬಹುದು. ರಾಜಕೀಯ ಚಂಡಮಾರುತ ಎದ್ದರೆ, ತಡೆಯಲಾದೀತೆ?. ನೀವು ಅದನ್ನು ತಡೆಯಲು ಸಾಧ್ಯವಿಲ್ಲ," ಎಂದು ಅಭಿಪ್ರಾಯಿಸಿದರು.

'ಪೆಗಾಸಸ್‌ ಬಗ್ಗೆ ನ್ಯಾಯಾಂಗ ತನಿಖೆ ಅಗತ್ಯ': ಪ್ರಧಾನಿಯನ್ನು ಭೇಟಿಯಾದ ಮಮತಾ'ಪೆಗಾಸಸ್‌ ಬಗ್ಗೆ ನ್ಯಾಯಾಂಗ ತನಿಖೆ ಅಗತ್ಯ': ಪ್ರಧಾನಿಯನ್ನು ಭೇಟಿಯಾದ ಮಮತಾ

"ಒಂದು ಸಾಮಾನ್ಯ ವೇದಿಕೆ ಜಾರಿಗೆ ಬರಲು ಸಾಕಷ್ಟು ಸಮಯ ಬೇಕಾಗುತ್ತದೆ. ಪ್ರತಿ ಪ್ರಾದೇಶಿಕ ಪಕ್ಷವು ಪ್ರಬಲವಾಗಿದೆ. ಪ್ರಾದೇಶಿಕ ಪಕ್ಷಗಳು ಒಟ್ಟಿಗೆ ಇದ್ದರೆ, ಅವು ಒಂದು ಶಕ್ತಿಯಾಗಿರುತ್ತವೆ. ಏಕಪಕ್ಷೀಯ ವ್ಯವಸ್ಥೆಗಿಂತ ಬಲಶಾಲಿಯಾಗಿರುತ್ತವೆ. ಪ್ರಾಮಾಣಿಕತೆ ಇದ್ದರೆ, ಒಗ್ಗಟ್ಟು ಇರುತ್ತದೆ ಮತ್ತು ಯಾವುದೇ ಮತಗಳ ವಿಭಜನೆ ಇರುವುದಿಲ್ಲ," ಎಂದರು.

 ರಾಹುಲ್‌ ಗಾಂಧಿ ಬಗ್ಗೆ ಪ್ರಶ್ನೆ ಬದಿಗೊತ್ತಿದ ದೀದಿ

ರಾಹುಲ್‌ ಗಾಂಧಿ ಬಗ್ಗೆ ಪ್ರಶ್ನೆ ಬದಿಗೊತ್ತಿದ ದೀದಿ

ಸೋನಿಯಾ ಗಾಂಧಿ ವಿರೋಧ ಪಕ್ಷದ ಐಕ್ಯತೆಯ ಬಗ್ಗೆ "ಉತ್ಸುಕರಾಗಿದ್ದಾರೆ" ಎಂದು ಹೇಳಿದ ಮಮತಾ ಇದೇ ವೇಳೆ ರಾಹುಲ್‌ ಗಾಂಧಿ ಬಗ್ಗೆ ಮಾಧ್ಯಮ ಕೇಳಿದ ಪ್ರಶ್ನೆಗೆ ಉತ್ತರಿಸಿಲ್ಲ. "ನಾನು ಯಾವಾಗಲೂ ಸೋನಿಯಾಜಿಯೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದೆ. ರಾಜೀವ್‌ ಜಿ ಯ ಕಾಲದಿಂದಲೂ ನಾನು ಅದನ್ನು ಉಳಿಸಿಕೊಂಡು ಬಂದಿದ್ದೇನೆ," ಎಂದು ರಾಹುಲ್ ಗಾಂಧಿಯವರ ಬಗ್ಗೆ ಪ್ರಶ್ನೆಯನ್ನು ಬದಿಗೊತ್ತಿ ಬ್ಯಾನರ್ಜಿ ಹೇಳಿದರು. ಈ ವೇಳೆ ಪ್ರಧಾನ ಮಂತ್ರಿ ಆಕಾಂಕ್ಷಿಯಾಗುತ್ತಾರೆಯೇ ಎಂದು ಕೇಳಿದಾಗ, "ನಾನು ಸಾರ್ವಜನಿಕ ಕೆಲಸಗಾರ್ತಿ, ನಾನು ಹಾಗೆಯೇ ಇರುತ್ತೇನೆ. ನಾನು ನಾಯಕಿಯಾಗಿ ಅಲ್ಲ, ಕಾರ್ಯಕರ್ತೆಯಾಗಿ ಕೆಲಸ ಮಾಡಲು ಬಯಸುತ್ತೇನೆ," ಎಂದು ಪ್ರತಿಕ್ರಿಯಿಸಿದರು. ಇದೇ ವೇಳೆ ತಮ್ಮನ್ನು ಹೊರಗಿನವಳು ಎಂಬಂತೆ ನೋಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಬ್ಯಾನರ್ಜಿ ಉತ್ತರಿಸಿ, ನರೇಂದ್ರ ಮೋದಿ ಗುಜರಾತ್‌ನಿಂದ ಬಂದವರು. ಇಲ್ಲಿ ಒಳಗಿನವರಾಗಬಹುದು. ಮಮತಾ ಬ್ಯಾನರ್ಜಿ ಬಂಗಾಳದಿಂದ ಬಂದಿದ್ದಾಳೆ. ಅವಳನ್ನು ಹೊರಗಿನವನೆಂದು ಪರಿಗಣಿಸಲಾಗಿದೆಯೇ?. ನಾನು ಒಬ್ಬ ಸಾಮಾನ್ಯ ವ್ಯಕ್ತಿ, ಹಾಗಾಗಿ ನಾನು ಎಲ್ಲರೊಂದಿಗೆ ಮಾತನಾಡಬಲ್ಲೆ ಎಂದರು.

ದೆಹಲಿ ಭೇಟಿಗೂ ಮುನ್ನ ತೃಣಮೂಲ ಸಂಸದೀಯ ಪಕ್ಷದ ಅಧ್ಯಕ್ಷೆಯಾಗಿ ಮಮತಾ ನೇಮಕದೆಹಲಿ ಭೇಟಿಗೂ ಮುನ್ನ ತೃಣಮೂಲ ಸಂಸದೀಯ ಪಕ್ಷದ ಅಧ್ಯಕ್ಷೆಯಾಗಿ ಮಮತಾ ನೇಮಕ

 ಪೆಗಾಸಸ್‌ ತುರ್ತು ಪರಿಸ್ಥಿತಿಗಿಂತ ಗಂಭೀರ

ಪೆಗಾಸಸ್‌ ತುರ್ತು ಪರಿಸ್ಥಿತಿಗಿಂತ ಗಂಭೀರ

ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಮತ್ತು ಇತರರೊಂದಿಗೆ ಪೆಗಾಸಸ್ ಸ್ಪೈವೇರ್ ಬಳಸುವ ಫೋನ್‌ಗಳ ಕಣ್ಗಾವಲು ಕುರಿತು ತನಿಖಾ ಆಯೋಗದ ಬಗ್ಗೆ ಘೋಷಿಸಿರುವ ಟಿಎಂಸಿ ನಾಯಕಿ, ಬಿಜೆಪಿ ಸರ್ಕಾರ ಈ ಪೆಗಾಸಸ್‌ ಸುಮೋಟೊ ಕ್ರಮ ಕೈಗೊಂಡಿಲ್ಲ ಎಂದು ಮತ್ತೊಮ್ಮೆ ವಾಗ್ದಾಳಿ ನಡೆಸಿದರು. "ಪ್ರಜಾಪ್ರಭುತ್ವದಲ್ಲಿ, ಗಂಭೀರ ಸಮಸ್ಯೆ ಇದ್ದಾಗ ನೀವು ಪ್ರತಿಕ್ರಿಯಿಸಬೇಕಾಗಿದೆ. ಈ ಪೆಗಾಸಸ್‌ ಪ್ರಕರಣ ತುರ್ತು ಪರಿಸ್ಥಿತಿಗಿಂತ ಕೆಟ್ಟದಾಗಿದೆ," ಎಂದು ಆತಂಕ ವ್ಯಕ್ತಪಡಿಸಿದರು.

ರಾಹುಲ್ ಸಹ ಹಾಜರಿದ್ದ ಸೋನಿಯಾ ಜೊತೆಗಿನ ಸಭೆಯಿಂದ ಹೊರ ಬಂದಾಗ ಸಂಸತ್ತಿನಲ್ಲಿ ಪೆಗಾಸಸ್ ಕುರಿತು ಚರ್ಚೆಗೆ ಅವಕಾಶ ನೀಡದಿರುವ ಬಗ್ಗೆ ಮೋದಿ ಸರ್ಕಾರದ ಮೇಲೆ ಮಮತಾ ಬ್ಯಾನರ್ಜಿ ಹಲ್ಲೆ ನಡೆಸಿದರು. ಇನ್ನು ಸೋನಿಯಾ ಜೊತೆಗಿನ ಸಭೆಯನ್ನು ''ಉತ್ತಮ, ಸಕಾರಾತ್ಮಕ'' ಎಂದು ವಿವರಿಸಿದ ಮಮತಾ, "ಸೋನಿಯಾ ಜಿ ನನ್ನನ್ನು ಒಂದು ಕಪ್ ಚಹಾಕ್ಕಾಗಿ ಆಹ್ವಾನಿಸಿದರು. ರಾಹುಲ್ ಜಿ ಕೂಡ ಇದ್ದರು. ನಾವು ಸಾಮಾನ್ಯವಾಗಿ ರಾಜಕೀಯ ಪರಿಸ್ಥಿತಿಯನ್ನು ಚರ್ಚಿಸಿದ್ದೇವೆ. ನಾವು ಪೆಗಾಸಸ್ ಮತ್ತು ಕೋವಿಡ್ ಪರಿಸ್ಥಿತಿಯ ಬಗ್ಗೆಯೂ ಚರ್ಚಿಸಿದ್ದೇವೆ. ನಾವು ವಿರೋಧ ಪಕ್ಷದ ಐಕ್ಯತೆಯನ್ನು ಚರ್ಚಿಸಿದ್ದೇವೆ. ಸಕಾರಾತ್ಮಕ ಫಲಿತಾಂಶ ಹೊರಬರಬೇಕು," ಎಂದು ಹೇಳಿದರು.

(ಒನ್‌ಇಂಡಿಯಾ ಸುದ್ದಿ)

English summary
2024 Lok Sabha elections: Mamata Banerjee rallies parties against BJP?. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X