ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೋಟಿಗಾಗಿ ನೋಟು: ಅಮರ್, ಸುಧೀರ್ ಗೆ ಖುಲಾಸೆ

By Mahesh
|
Google Oneindia Kannada News

ನವದೆಹಲಿ, ನ.22: 2008ರಲ್ಲಿ ನಡೆದ ವೋಟಿಗಾಗಿ ನೋಟು ಹಗರಣದಲ್ಲಿ ಸಮಾಜವಾದಿ ಮುಖಂಡ ಅಮರ್ ಸಿಂಗ್, ಕರ್ನಾಟಕ ಅಥಣಿ ಮೂಲದ ಬಿಜೆಪಿ ನಾಯಕ ಸುಧೀಂದ್ರ ಕುಲಕರ್ಣಿ ಅವರನ್ನು ದೆಹಲಿ ಕೋರ್ಟ್ ಖುಲಾಸೆಗೊಳಿಸಿದೆ. ಈ ಇಬ್ಬರು ನಾಯಕರ ಜತೆಗೆ ಇನ್ನೂ ಕೆಲವು ಬಿಜೆಪಿ ನಾಯಕರಿಗೆ ರಿಲೀಫ್ ಸಿಕ್ಕಿದೆ.

ಲೋಕಸಭೆ ಕಲಾಪ ನಡೆಯುತ್ತಿದ್ದಾಗಲೇ ನೋಟುಗಳ ಕಂತೆಗಳನ್ನು ಪ್ರದರ್ಶಿಸುತ್ತಾ, ಕಾಂಗ್ರೆಸ್ ಸರ್ಕಾರವನ್ನು ಪಾರು ಮಾಡಲು ವೋಟುಗಳನ್ನು ಖರೀದಿಸಲು ಲಂಚ ನೀಡಲಾಗಿದೆ ಎಂದು ಆರೋಪಿಸುವ ಮೂಲಕ ಬಿಜೆಪಿಯ ಮೂವರು ಶಾಸಕರು ಕೋಲಾಹಲ ಎಬ್ಬಿಸಿದ್ದರು.

ದೆಹಲಿ ಕೋರ್ಟ್ ಈ ಮೂವರು ಬಿಜೆಪಿ ಸಂಸತ್ ಸದಸ್ಯರಾದ ಫಗ್ಗಾನ್ ಸಿಂಗ್ ಕುಲಾಸ್ತೆ, ಅಶೋಖ್ ಅರ್ಗಾಲ್ ಮತ್ತು ಮಹಾವೀರ್ ಸಿಂಗ್ ಭಾಗೋರಾ, ಬಿಜೆಪಿ ಕಾರ್ಯಕರ್ತ ಸೊಹೈಲ್ ಹಿಂದೂಸ್ತಾನಿ ಅವರನ್ನು ಮತ್ತು ಸಮಾಜವಾದಿ ಮುಖಂಡ ಅಮರ್ ಸಿಂಗ್ ಅವರನ್ನು ಖುಲಾಸೆಗೊಳಿಸಿದೆ. ಸಂಸದರಿಗೆ ಲಂಚ ನೀಡಲು ಒಂದು ಕೋಟಿ ರೂ. ರವಾನಿಸುವುದಕ್ಕಾಗಿ ತಮ್ಮ ಕಾರ್ಯದರ್ಶಿ ಜತೆ ಅಮರ್ ಸಿಂಗ್ ಪಿತೂರಿ ನಡೆಸಿದ್ದರೆಂದು ಆರೋಪಿಸಲಾಗಿತ್ತು.

2008 cash-for-vote scam: Amar Singh, Sudheendra Kulkarni, 2 others discharged

2008 ರಲ್ಲಿ ಲೋಕಸಭೆಯಲ್ಲಿ ನಡೆದ ವಿಶ್ವಾಸ ಮತಯಾಚನೆ ವೇಳೆ ಪ್ರಧಾನಿ ಮನಮೋಹನ್ ಸಿಂಗ್ ಪರ ಮತ ಹಾಕುವಂತೆ ಬಿಜೆಪಿಯ ಮೂವರು ಸಂಸದರಿಗೆ ಲಂಚ ನೀಡಲಾಗಿತ್ತು ಎಂದು ಹೇಳಲಾದ ಹಗರಣ ದೇಶದಲ್ಲಿ ಭಾರಿ ಕೋಲಾಹಲ ಎಬ್ಬಿಸಿತ್ತು.

ಅಮರ್ ಸಿಂಗ್ ಅವರು ಬಿಜೆಪಿ ಸಂಸದರಿಗೆ ತಮ್ಮ ಕಾರ್ಯದರ್ಶಿ ಸಂಜೀವ ಸಕ್ಸೇನಾ ಮೂಲಕ ಒಂದು ಕೋಟಿ ರೂಪಾಯಿ ಲಂಚ ನೀಡಿರುವ ಕುರಿತು ಸಾಕಷ್ಟು ಪುರಾವೆಗಳಿವೆ ಎಂದು ತನಿಖೆಯ ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿತ್ತು.

'ಮತ ಲಂಚ ನೀಡಿದ್ದು, ಅಮರ್ ಸಿಂಗ್ ನಿವಾಸದಲ್ಲಲ್ಲ, ಬದಲಿಗೆ ಲೀ ಮೆರಿಡಿಯನ್ ಹೊಟೇಲ್‌ನಲ್ಲಿ. ಹಣ ನೀಡಿದ್ದು ಅಮರ್ ಸಿಂಗ್ ಅಲ್ಲ, ಸರಕಾರವನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷದ ಸಂಸದ ಮತ್ತು ಪಕ್ಷದಲ್ಲಿನ ಪ್ರಭಾವಿ ನಾಯಕ ಅಹ್ಮದ್ ಪಟೇಲ್' ಎಂದು ಅಮರ್ ಸಿಂಗ್ ಪರ ವಕೀಲ ಜೇಠ್ಮಲಾನಿ ವಾದಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

2008ರಲ್ಲಿ ನಡೆದ ಓಟಿಗಾಗಿ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ವಿಶ್ವಾಸಮತಕ್ಕೆ ಪ್ರತಿಯಾಗಿ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಸಂಬಂಧ 2005ರಲ್ಲಿ ಪ್ರಕರಣ ದಾಖಲಿಸಿ ಸಿಬಿಐ ಆರಂಭಿಸಿದ್ದ ತನಿಖೆಯನ್ನು ಸ್ಥಗಿತಗೊಳಿಸಲು ಭಾರದ್ವಾಜ್ ನೆರವಾಗಿದ್ದರು ಎನ್ನಲಾಗಿತ್ತು. ಅದರೆ, ಸಾಕ್ಷಿ ಆಧಾರ ಇಲ್ಲದೆ ಪ್ರಕರಣ ಮುಂದುವರೆಯಲಿಲ್ಲ.

English summary
Former Samajwadi Party general secretary Amar Singh, L K Advani's ex-aide Sudheendra Kulkarni and two BJP MPs along with two others on Friday got huge relief with a Delhi court discharging them in the 2008 cash-for-vote case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X