ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ್ರೋಹದ ಅಪವಾದ ಹೊತ್ತುಕೊಂಡಿದ್ದ 200 ತಬ್ಲಿಘಿಗಳು ಈಗ ಕೊರೊನಾ ವಾರಿಯರ್ಸ್

|
Google Oneindia Kannada News

ನವದೆಹಲಿ, ಏಪ್ರಿಲ್ 27: ಕೋವಿಡ್ -19 ಸೋಂಕಿನಿಂದ ಚೇತರಿಸಿಕೊಂಡಿರುವ ತಬ್ಲಿಘಿ ಜಮಾತ್‌ ನ 200ಕ್ಕೂ ಹೆಚ್ಚು ಸದಸ್ಯರು ತೀವ್ರ ಸೋಂಕಿನಿಂದ ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾದವರಿಗೆ ಸಹಾಯ ಮಾಡಲು 'ಪ್ಲಾಸ್ಮಾ ದಾನ' ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

Recommended Video

ಒಂದೇ ಕುಟುಂಬದ 31 ಮಂದಿಗೆ ಕೊರೊನ ಸೋಂಕು , ಆಸ್ಪತ್ರೆ ನೋಡಿ ಸಂಭ್ರಮಿಸಿದ ಕುಟುಂಬ | Oneindia Kannada

"ಪ್ರತಿಯೊಬ್ಬರೂ ಧಾರ್ಮಿಕ ದೃಷ್ಟಿಕೋನದಿಂದ ಯೋಚಿಸದೆ ಪ್ಲಾಸ್ಮಾ ದಾನ ಮಾಡಬೇಕೆಂದು" ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಮಾಡಿದ ಮನವಿಗೆ ಜಮಾತ್ ಸದಸ್ಯರಿಂದ ಈ ಪ್ರತಿಕ್ರಿಯೆ ಬಂದಿದೆ.

ಇದೇ ರೀತಿ ಮುಂದುವರಿದರೆ, ಭಾರತದ ಈ ನಗರ ಚೀನಾದ ವುಹಾನ್ ಆಗಲಿದೆಇದೇ ರೀತಿ ಮುಂದುವರಿದರೆ, ಭಾರತದ ಈ ನಗರ ಚೀನಾದ ವುಹಾನ್ ಆಗಲಿದೆ

"ತಬ್ಲಿಘಿ ಸದಸ್ಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಿಂದ ಪ್ಲಾಸ್ಮಾ ಸಂಗ್ರಹಣೆ ಪ್ರಾರಂಭವಾಗಲಿದೆ"ಎಂದು ದೆಹಲಿಯ ಆರೋಗ್ಯ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ. ರಾಜಧಾನಿಯಲ್ಲಿ ಕೋವಿಡ್ ರೋಗಿಗಳನ್ನು ಪ್ಲಾಸ್ಮಾ ಚಿಕಿತ್ಸೆಗೆ ಒಳಪಡಿಸುವುದಕ್ಕೆ ಕೇಂದ್ರ ಸರಕಾರ ಈಗಾಗಲೇ ಅನುಮತಿಯನ್ನು ನೀಡಿದೆ.

200 Tablighi Jamaat members, Who Have Recovered From Covid 19, Pledge To Donate Plasma

ಮಾರ್ಚ್ ಅಂತ್ಯದಲ್ಲಿ ನಿಜಾಮುದ್ದೀನ್ ಮರ್ಕಾಜ್ ನಿಂದ ಸ್ಥಳಾಂತರಿಸಲ್ಪಟ್ಟ 2,300ಕ್ಕೂ ಹೆಚ್ಚು ಜನರಲ್ಲಿ, 1,080 ಜನರದ್ದು ಪಾಸಿಟೀವ್ ವರದಿ ಬಂದಿತ್ತು. ಇದರಲ್ಲಿ ಈಗ, ಅನೇಕರು ಚೇತರಿಸಿಕೊಂಡಿದ್ದಾರೆ.

ಮುಸ್ಲಿಮರ ಪವಿತ್ರ ರಂಜಾನ್ ಮಾಸ ಆರಂಭವಾಗಿರುವ ಹಿನ್ನಲೆಯಲ್ಲಿ ದೆಹಲಿಯ ಸುಲ್ತಾನ್ ಪುರಿ ಕ್ವಾರಂಟೈನ್ ವಲಯದಲ್ಲಿ ನಾಲ್ವರು ಈಗಾಗಲೇ ಪ್ಲಾಸ್ಮಾ ದಾನ ಮಾಡಿದ್ದಾರೆ.

ಶಾಕಿಂಗ್: ನೀರಿನಲ್ಲಾಯಿತು, ಈಗ ಗಾಳಿಯಲ್ಲೂ ಕೊರೊನಾ ವೈರಸ್ ಪತ್ತೆಶಾಕಿಂಗ್: ನೀರಿನಲ್ಲಾಯಿತು, ಈಗ ಗಾಳಿಯಲ್ಲೂ ಕೊರೊನಾ ವೈರಸ್ ಪತ್ತೆ

"ಒಬ್ಬ ಹಿಂದೂ ರೋಗಿ ಗಂಭೀರ ಪರಿಸ್ಥಿತಿಯಲ್ಲಿದ್ದು, ಮುಸ್ಲಿಂ ವ್ಯಕ್ತಿಯ ದೇಹದಿಂದ ತೆಗೆದ ಪ್ಲಾಸ್ಮಾದಿಂದ ಬದುಕಿ ಉಳಿದರೆ, ಅದೇ ರೀತಿ, ಹಿಂದೂ ವ್ಯಕ್ತಿಯ ರಕ್ತದಿಂದ ತೆಗೆದ ಪ್ಲಾಸ್ಮಾ ಮುಸ್ಲಿಂ ವ್ಯಕ್ತಿಯ ಜೀವವನ್ನು ಉಳಿಸಿದರೆ, ಅದರಲ್ಲಿ ತಪ್ಪೇನಿದೆ" ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

English summary
200 Tablighi Jamaat members, Who Have Recovered From Covid 19, Pledge To Donate Plasma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X