ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀವ್ ಕುರಿತ ಮೋದಿ ಹೇಳಿಕೆ: ದೆಹಲಿ ವಿವಿಯ 200 ಅಧ್ಯಾಪಕರ ಖಂಡನೆ

|
Google Oneindia Kannada News

ನವದೆಹಲಿ, ಮೇ 7: ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕುರಿತು ನೀಡಿದ ಹೇಳಿಕೆ ಅವಮಾನಕಾರಿ ಮತ್ತು ಅಸತ್ಯವಾದುದು ಎಂದು ದೆಹಲಿ ವಿಶ್ವವಿದ್ಯಾಲಯದ 200ಕ್ಕೂ ಅಧಿಕ ಅಧ್ಯಾಪಕರು ಸಾರ್ವಜನಿಕ ಪ್ರಕಟಣೆ ನೀಡಿದ್ದಾರೆ.

ಭ್ರಷ್ಟಾಚಾರಿ ನಂಬರ್ 1 ಪಟ್ಟಿಯೊಂದಿಗೆ ರಾಜೀವ್ ಗಾಂಧಿ ಬದುಕು ಅಂತ್ಯ : ಮೋದಿ ಭ್ರಷ್ಟಾಚಾರಿ ನಂಬರ್ 1 ಪಟ್ಟಿಯೊಂದಿಗೆ ರಾಜೀವ್ ಗಾಂಧಿ ಬದುಕು ಅಂತ್ಯ : ಮೋದಿ

'ದೇಶದ ಸೇವೆಯ ವೇಳೆ ಮಹತ್ತರ ತ್ಯಾಗ ಮಾಡಿದ ದಿವಂಗತ ರಾಜೀವ್ ಗಾಂಧಿ ಅವರ ಕುರಿತು ಅವಹೇಳನಾಕಾರಿ ಮತ್ತು ಅಸತ್ಯದ ಮಾತುಗಳನ್ನು ಆಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಕಚೇರಿಯ ಘನತೆಯನ್ನು ಕುಗ್ಗಿಸಿದ್ದಾರೆ' ಎಂದು ಅಧ್ಯಾಪಕರ ಹೇಳಿಕೆ ಆರೋಪಿಸಿದೆ.

200 DU teachers statement condemning Narendra Modi remarks on Rajiv Gandhi

ಈ ಪತ್ರವನ್ನು ಬರಹಗಾರ್ತಿ ಸಾಧ್ವಿ ಖೋಸ್ಲಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. 'ಮಾಜಿ ಪ್ರಧಾನಿ, ಭಾರತ ರತ್ನ ರಾಜೀವ್ ಗಾಂಧಿ ಅವರನ್ನು ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಆಡಿದ ಸುಳ್ಳು ಮತ್ತು ಕಠೋರ ಮಾತುಗಳನ್ನು ದೆಹಲಿ ವಿಶ್ವವಿದ್ಯಾಲಯದ ನೂರಾರು ಶಿಕ್ಷಕರು ಖಂಡಿಸಿದ್ದಾರೆ. ಈ ಹೇಳಿಕೆಗೆ ದೆಹಲಿ ವಿಶ್ವಿದ್ಯಾಲಯ ಶಿಕ್ಷಕರ ಸಂಘದ (ಡಿಯುಟಿಎ) ಅಧ್ಯಕ್ಷ ಆದಿತ್ಯ ನಾರಾಯಣ್ ಮಿಶ್ರಾ ಮತ್ತು 200 ಶಿಕ್ಷಕರು ಸಹಿ ಹಾಕಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.

ಅಪ್ಪನ ಸಾವಿನ ಕುರಿತ ಮೋದಿ ಹೇಳಿಕೆಗೆ ರಾಹುಲ್ ಅಪ್ಪುಗೆಯ ಉತ್ತರ ಅಪ್ಪನ ಸಾವಿನ ಕುರಿತ ಮೋದಿ ಹೇಳಿಕೆಗೆ ರಾಹುಲ್ ಅಪ್ಪುಗೆಯ ಉತ್ತರ

'ಪ್ರಿಯ ಮೋದಿಜಿ, ನೀವು 1984ರ ಗಲಭೆಯನ್ನು ಪ್ರಸ್ತಾಪಿಸಿ ಬಾಕಿ ಉಳಿದ ಚುನಾವಣೆಯನ್ನು ಎದುರಿಸಬಹುದಾದರೆ ಇನ್ನೊಂದು ಬದಿಯವರೂ ಕೂಡ 2002ರ ಗಲಭೆಯ ಸಂಗತಿಯೊಂದಿಗೆ ಆರಂಭಿಸಬಹುದು. ನೀವು ಹತ್ಯೆಗೊಳಗಾದ ರಾಜೀವ್ ಗಾಂಧಿ ಅವರನ್ನು ನಿರಂತರವಾಗಿ ಅವಮಾನಿಸುತ್ತಿದ್ದೀರಿ. ಏಕೆ? ಗಾಂಧಿಗಳನ್ನು ಎದುರಿಸಲು ಹುತಾತ್ಮನನ್ನು ನಿಂದಿಸಬೇಡಿ' ಎಂದು ಅವರು ಹೇಳಿದ್ದಾರೆ.

ರಾಜೀವ್ ಗಾಂಧಿ ಬಗ್ಗೆ ಮೋದಿ ಹೇಳಿಕೆ : ಪಿ.ಚಿದಂಬರಂ ಆಕ್ರೋಶ ರಾಜೀವ್ ಗಾಂಧಿ ಬಗ್ಗೆ ಮೋದಿ ಹೇಳಿಕೆ : ಪಿ.ಚಿದಂಬರಂ ಆಕ್ರೋಶ


ದೇಶದ‌ ಪ್ರಧಾನಮಂತ್ರಿ 'ಚೋರ್' ಎಂದು ರಾಹುಲ್ ಪ್ರತಿ ಗಳಿಗೆಯೂ ಮೋದಿಯವರನ್ನು ಅವಹೇಳನ‌ ಮಾಡುತ್ತಲೇ ಬಂದಾಗ ದೆಹಲಿ ವಿಶ್ವವಿದ್ಯಾನಿಲಯದ ಆ '200 ಸಹಿ ಅಧ್ಯಾಪಕರು' ಏಕೆ ವಿರೋಧಿಸಿ ಸಹಿ ಮಾಡಲು ಮನಸ್ಸು ಮಾಡಲಿಲ್ಲ? ಋಣ ವಿವೇಚನೆಯನ್ನು ಕಸಿದುಕೊಳ್ಳುತ್ತದೆ ಎಂದು ಬಿಜೆಪಿ ಮುಖಂಡ ಸುರೇಶ್ ಕುಮಾರ್ ಅವರು ದೆಹಲಿ ಅಧ್ಯಾಪಕರ ದ್ವಿಮುಖ ನಡೆಯನ್ನು ಟೀಕಿಸಿದ್ದಾರೆ.

English summary
Lok Sabha elections 2019: Over 200 Delhi University teachers have condemned Prime Minister Narendra Modi's remarks on former PM Rajiv Gandhi, issued a public statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X