ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಮೆಟ್ರೋದ 20 ಸಿಬ್ಬಂದಿಗೆ ಕೋವಿಡ್ - 19 ಸೋಂಕು

|
Google Oneindia Kannada News

ನವದೆಹಲಿ, ಜೂನ್ 05 : ದೆಹಲಿ ಮೆಟ್ರೋ ರೈಲು ನಿಗಮದ 20 ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತವಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25,004ಕ್ಕೆ ಏರಿಕೆಯಾಗಿದೆ.

ಡಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಮಂಗು ಸಿಂಗ್ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದನ್ನು ಖಚಿತಪಡಿಸಿದ್ದಾರೆ. ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರು; ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಾರ್ಗಸೂಚಿ ಬೆಂಗಳೂರು; ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಾರ್ಗಸೂಚಿ

"ದೇಶದ ಇತರ ಜನರಂತೆಯೇ ಡಿಎಂಆರ್‌ಸಿ ಸಿಬ್ಬಂದಿಗಳು ಸಹ ಕೋವಿಡ್ - 19 ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಎಲ್ಲರೂ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಮೆಟ್ರೋ ರೈಲು ಸೇವೆಯನ್ನು ಪುನಃ ಆರಂಭಿಸಲು ತಯಾರಾಗಿದ್ದೇವೆ" ಎಂದು ಮಂಗು ಸಿಂಗ್ ತಿಳಿಸಿದ್ದಾರೆ.

ದೆಹಲಿ ಮೆಟ್ರೋ ರೈಲು ಸಂಚಾರ ಆರಂಭವಾಗುವ ನಿರೀಕ್ಷೆದೆಹಲಿ ಮೆಟ್ರೋ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ

20 Staff Members Of Delhi Metro Rail Corporation Tested Positive For COVID 19

ಎನ್‌ಸಿಆರ್‌ನಲ್ಲಿ ವಾಸ್ತವ್ಯ ಹೂಡಿದ್ದ 20 ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಡಿಎಂಆರ್‌ಸಿ ಸಿಬ್ಬಂದಿಗಳಲ್ಲಿ ಮೆಟ್ರೋ ಸೇವೆ ಆರಂಭಿಸುವ ಉತ್ಸಾಹ ಹೆಚ್ಚಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಲಾಕ್ ಡೌನ್ ಬಳಿಕ ನಮ್ಮ ಮೆಟ್ರೋ ಪ್ರಯಾಣಕ್ಕೆ ಸ್ಮಾರ್ಟ್‌ ಕಾರ್ಡ್ ಕಡ್ಡಾಯ ಲಾಕ್ ಡೌನ್ ಬಳಿಕ ನಮ್ಮ ಮೆಟ್ರೋ ಪ್ರಯಾಣಕ್ಕೆ ಸ್ಮಾರ್ಟ್‌ ಕಾರ್ಡ್ ಕಡ್ಡಾಯ

ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಪಾಡಿ ಎಂದು ಮಂಗು ಸಿಂಗ್ ಉದ್ಯೋಗಿಗಳಿಗೆ ಶುಕ್ರವಾರ ಸಂದೇಶ ಕಳಿಸಿದ್ದಾರೆ. ವೈರಸ್ ಸೋಂಕಿಗೆ ತುತ್ತಾದವರು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ನಮ್ಮಲ್ಲಿನ ಉತ್ಸಾಹ ಹೀಗಿಯೆ ಇರಲಿ. ಕೆಲವೇ ದಿನಗಳಲ್ಲಿ ನಾವು ಮೆಟ್ರೋ ರೈಲು ಸಂಚಾರವನ್ನು ಪುನಃ ಆರಂಭಿಸಲಿದ್ದೇವೆ ಎಂದು ಮಂಗು ಸಿಂಗ್ ಹೇಳಿದ್ದಾರೆ.

English summary
Delhi Metro Rail Corporation (DMRC) 20 staff have tested positive for Coronavirus. All of them scattered across the NCR.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X