ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ-ಭಾರತ ಘರ್ಷಣೆ: ಸರ್ವಪಕ್ಷ ಸಭೆ ಕರೆದ ಮೋದಿ, 2 ಪ್ರಮುಖ ಪಕ್ಷಕ್ಕಿಲ್ಲ ಆಹ್ವಾನ

|
Google Oneindia Kannada News

ದೆಹಲಿ, ಜೂನ್ 19: ಭಾರತ ಮತ್ತು ಚೀನಾ ಸೇನೆಯ ನಡುವಿನ ಷರ್ಘಣೆಗೆ ಸಂಬಂಧಿಸಿದಂತೆ ಇಂದು ಪ್ರಧಾನಿ ನರೇಂದ್ರ ಮೋದಿ ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ.

Recommended Video

2011 ವಿಶ್ವಕಪ್ ನಲ್ಲಿ ಶ್ರೀಲಂಕಾ ತಂಡ ಭಾರತಕ್ಕೆ ತನ್ನನ್ನ ಮಾಡಿಕೊಂಡಿತ್ತು | 2011 world cup |Oneindia Kannada

ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆಯಲಿರುವ ಈ ಸಭೆಯಲ್ಲಿ ದೇಶದ ಪ್ರಮುಖ 20 ಪಕ್ಷದ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಇನ್ನೂ 4 ಗಡಿ ಪ್ರದೇಶಗಳನ್ನು ನುಂಗುತ್ತೇವೆ ಎಂದ ಚೀನಾಇನ್ನೂ 4 ಗಡಿ ಪ್ರದೇಶಗಳನ್ನು ನುಂಗುತ್ತೇವೆ ಎಂದ ಚೀನಾ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಡಿಎಂಕೆ ಪಕ್ಷದ ಅಧ್ಯಕ್ಷ ಸ್ಟಾಲಿನ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಲಿದ್ದಾರೆ. ಈ ನಡುವೆ ಎರಡು ಪ್ರಮುಖ ಪಕ್ಷಗಳಿಗೆ ರಾಜನಾಥ್ ಸಿಂಗ್ ಆಹ್ವಾನ ನೀಡಿಲ್ಲ ಎಂಬ ಟೀಕೆಯೂ ವ್ಯಕ್ತವಾಗಿದೆ. ಲೋಕಸಭೆಯಲ್ಲಿ 5ಕ್ಕೂ ಹೆಚ್ಚು ಸಂಸದರನ್ನು ಹೊಂದಿರುವ ಪ್ರಮುಖ ಪಕ್ಷಗಳಿಗೆ ಮಾತ್ರ ಈ ಸಭೆಗೆ ಆಹ್ವಾನ ನೀಡಲಾಗಿದೆ. ಮುಂದೆ ಓದಿ....

ಚೀನಾ-ಭಾರತ ಬೆಳವಣಿಗೆ ಕುರಿತು ಚರ್ಚೆ

ಚೀನಾ-ಭಾರತ ಬೆಳವಣಿಗೆ ಕುರಿತು ಚರ್ಚೆ

ಜೂನ್ 15 ರಂದು ಲಡಾಖ್‌ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಚೀನಾ ಮತ್ತು ಭಾರತ ಸೈನಿಕರ ನಡುವಿನ ಘರ್ಷಣೆ ಹಾಗೂ ಅದಾದ ಬಳಿಕ ಉಭಯ ರಾಷ್ಟ್ರಗಳ ನಡುವೆ ಆದ ಬೆಳವಣಿಗೆಗಳ ಕುರಿತು ಸರ್ವಪಕ್ಷ ಸಭೆಯಲ್ಲಿ ಚರ್ಚೆಯಾಗಲಿದೆ. ಚೀನಾ ವಿಚಾರದಲ್ಲಿ ಮೋದಿ ಮೌನವಾಗಿದ್ದಾರೆ, ಗಡಿಯಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ವಿಪಕ್ಷಗಳು ಆರೋಪಿಸಿದ್ದವು. ಇಂದಿನ ಸಭೆಯಲ್ಲಿ ಇದಕ್ಕೆ ಸ್ಪಷ್ಟ ಉತ್ತರ ಸಿಗುವ ನಿರೀಕ್ಷೆಯಲ್ಲಿದೆ ವಿಪಕ್ಷಗಳು.

ಆರ್‌ಜೆಡಿ ಪಕ್ಷಕ್ಕಿಲ್ಲ ಆಹ್ವಾನ

ಆರ್‌ಜೆಡಿ ಪಕ್ಷಕ್ಕಿಲ್ಲ ಆಹ್ವಾನ

ಚೀನಾ ಮತ್ತು ಭಾರತ ಘರ್ಷಣೆ ಹಿನ್ನೆಲೆ ಮೋದಿ ಆಹ್ವಾನಿಸಿರುವ ಸರ್ವ ಪಕ್ಷ ಸಭೆಗೆ ಆರ್‌ಜೆಡಿ ಪಕ್ಷಕ್ಕೆ ಆಹ್ವಾನ ನೀಡಿಲ್ಲ ಎಂದು ಬಿಹಾರ ವಿರೋಧ ಪಕ್ಷದ ನಾಯಕ ತೇಜಸ್ವಿನಿ ಯಾದವ್ ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮ ಪಕ್ಷವೂ ಲೋಕಸಭೆಯಲ್ಲಿ ಐದು ಸಂಸದರನ್ನು ಹೊಂದಿದೆ. ಬಿಹಾರದ ದೊಡ್ಡ ಪಕ್ಷ. ಆದರೂ ನಮ್ಮನ್ನು ನಿರ್ಲಕ್ಷ್ಯ ಮಾಡಲಾಗಿದೆ. ಈ ಬಗ್ಗೆ ರಾಜನಾಥ್ ಸಿಂಗ್ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

10 ಭಾರತೀಯ ಯೋಧರನ್ನು ಬಿಡುಗಡೆಗೊಳಿಸಿದ ಚೀನಾ ಆರ್ಮಿ10 ಭಾರತೀಯ ಯೋಧರನ್ನು ಬಿಡುಗಡೆಗೊಳಿಸಿದ ಚೀನಾ ಆರ್ಮಿ

ಅಮ್ ಆದ್ಮಿ ಪಕ್ಷಕ್ಕೂ ಇಲ್ಲ ಆಹ್ವಾನ

ಅಮ್ ಆದ್ಮಿ ಪಕ್ಷಕ್ಕೂ ಇಲ್ಲ ಆಹ್ವಾನ

ಸಭೆ ನಿಗದಿಪಡಿಸಿರುವ ಮಾನದಂಡಗಳಿಂದ ದೂರಯಿರುವ ಅಮ್ ಆದ್ಮಿ ಪಕ್ಷವೂ ಕೇಂದ್ರ ಸರ್ಕಾರದ ನಡೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಆಪ್ ಮುಖಂಡ ಸಂಜಯ್ ಸಿಂಗ್ ಟ್ವೀಟ್ ಮಾಡಿದ್ದು ''ದೆಹಲಿಯಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದೆ, ಪಂಜಾಬ್‌ನಲ್ಲಿ ಮುಖ್ಯ ವಿರೋಧ ಪಕ್ಷವಾಗಿದೆ. ಆದರೂ ದೇಶದ ಪ್ರಮುಖ ವಿಷಯ ಬಗ್ಗೆ ಅಮ್ ಆದ್ಮಿ ಪಕ್ಷದ ಅಭಿಪ್ರಾಯವೂ ಬೇಡವಾ? ಸಭೆಯಲ್ಲಿ ಪ್ರಧಾನಿ ಏನು ಹೇಳುತ್ತಾರೋ ನೋಡೋಣ'' ಎಂದಿದ್ದಾರೆ.

ಸಭೆಗೆ ಮೋದಿಯ ಮಾನದಂಡವೇನು?

ಸಭೆಗೆ ಮೋದಿಯ ಮಾನದಂಡವೇನು?

ಮೋದಿ ಆಹ್ವಾನಿಸಿರುವ ಸರ್ವಪಕ್ಷ ಸಭೆಗೆ ಮಾನದಂಡಗಳನ್ನು ಬಳಸಲಾಗಿದೆ. ಲೋಕಸಭೆಯಲ್ಲಿ ಐದು ಸಂಸದರನ್ನು ಹೊಂದಿರಬೇಕು. ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷವಾಗಿರಬೇಕು. ಈಶಾನ್ಯ ರಾಜ್ಯಗಳ ಪ್ರಮುಖ ಪಕ್ಷಗಳಿಗೆ ಆಹ್ವಾನ. ಈ ನಿಟ್ಟಿನಲ್ಲಿ ಕರ್ನಾಟಕದ ಜೆಡಿಎಸ್ ಪಕ್ಷಕ್ಕೂ ಆಹ್ವಾನ ಇಲ್ಲ

English summary
All party meet called by Prime Minister Modi - 20 parties to attend the meet today, Home Minister, Defence Minister and BJP president JP Nadda to also be present in the virtual meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X