ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

14 ತಿಂಗಳ ಪಾಕಿಸ್ತಾನಿ ಮಗುವಿಗೆ ದಿಲ್ಲಿಯಲ್ಲಿ ಅಪರೂಪದ ಹೃದಯ ಶಸ್ತ್ರಚಿಕಿತ್ಸೆ

|
Google Oneindia Kannada News

ನವದೆಹಲಿ, ನವೆಂಬರ್ 22: ಪಾಕಿಸ್ತಾನದ ಹದಿನಾಲ್ಕು ತಿಂಗಳ ಮಗುವಿನ ಹೃದಯ ಶಸ್ತ್ರಚಿಕಿತ್ಸೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮಾಡಲಾಗಿದೆ. ಪಾಕಿಸ್ತಾನಿ ಗಂಡು ಮಗುವೊಂದರ ಹೃದಯದ ಚೇಂಬರ್ ಮಾಮೂಲಿಗಿಂತ ನಾಲ್ಕು ಪಟ್ಟು ದೊಡ್ಡದಿತ್ತು. ಅದರ ಶಸ್ತ್ರಚಿಕಿತ್ಸೆ ಮಾಡಿ, ಸರಿಪಡಿಸಲಾಗಿದೆ.

ಮಗುವಿಗೆ ಎಡ ಆಟ್ರಿಯಮ್ ಹಾಗೂ ಅದರ ಮೇಲ್ಭಾಗದಲ್ಲಿ ಶ್ವಾಸಕೋಶದಿಂದ ಆಮ್ಲಜನಕ ಒಳಗೊಂಡ ರಕ್ತ ಸಂಚರಿಸುವ ಮೇಲ್ಭಾಗದ ಚೇಂಬರ್ ಪ್ರಮಾಣ 87 ಮಿ.ಲೀ. ಆಗಿತ್ತು. ಸಾಮಾನ್ಯವಾಗಿ ಮಕ್ಕಳಿಗೆ ಈ ಪ್ರಮಾಣ 12ರಿಂದ 20 ಮಿ.ಲೀ. ಇರುತ್ತದೆ. ಈ ಪ್ರಾಯದ ಮಕ್ಕಳಲ್ಲಿ ಕಂಡುಬಂದು, ಶಸ್ತ್ರಚಿಕಿತ್ಸೆ ಮಾಡಿರುವ ಅತಿ ದೊಡ್ಡ ಎಡ ಆಟ್ರಿಯಮ್ ಇದು.

ದೇಶಿಯ ಸ್ಟೆಂಟ್‌ಗಳು ಉತ್ತಮ ಗುಣಮಟ್ಟ ಹೊಂದಿವೆ : ವರದಿದೇಶಿಯ ಸ್ಟೆಂಟ್‌ಗಳು ಉತ್ತಮ ಗುಣಮಟ್ಟ ಹೊಂದಿವೆ : ವರದಿ

ಈ ಮಗುವನ್ನು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ಕರೆತಂದಾಗ ಸರಿಯಾಗಿ ಆಹಾರ ಸೇವಿಸಲು ಆಗುತ್ತಿರಲಿಲ್ಲ. ಎದೆ ಸೋಂಕು ಹಾಗೂ ಉಸಿರಾಟದ ಸಮಸ್ಯೆ ಕಾಡುತ್ತಿತ್ತು. ಇದರಿಂದ ಮಗುವಿನ ತೂಕ ಕಡಿಮೆ ಆಗಿತ್ತು. ಹದಿನಾಲ್ಕು ತಿಂಗಳಿಗೆ ಮಕ್ಕಳು ಸಾಮಾನ್ಯವಾಗಿ ಹತ್ತು ಕೇಜಿ ಇರುತ್ತಾರೆ. ಆದರೆ ಈ ಮಗು ಆರೂವರೆ ಕೇಜಿ ಇತ್ತು.

2 year old Pakistani boy with heart 4 times its size, operated upon in Delhi

ದೊಡ್ಡದಾದ ಎಡ ಆಟ್ರಿಯಮ್ ತೀರಾ ಅಪರೂಪವಾಗಿ ಕಾಣಿಸಿಕೊಳ್ಳುವ ಸಮಸ್ಯೆ. ಇದರಿಂದ ಸಾವು ಕೂಡ ಸಂಭವಿಸಬಹುದು. ಎಡ ಆಟ್ರಿಯಮ್ ನ ಗಾತ್ರ ಹೆಚ್ಚಾಗುತ್ತಾ ಹೋದಂತೆ ಅದರ ಬದಿಯಲ್ಲಿನ ಅನ್ನ ನಾಳ, ಶ್ವಾಸಕೋಶ ನಾಳ ಹೀಗೆ ಪ್ರಮುಖವಾದ ಅಗಗಳು ಕುಗ್ಗುತ್ತಾ ಹೋಗುತ್ತವೆ ಎಂದು ವೈದ್ಯರು ಹೇಳಿದ್ದಾರೆ.

72ನೇ ವಯಸ್ಸಿನಲ್ಲಿ ಮಗನಿಗೆ ಕಿಡ್ನಿಕೊಟ್ಟು ಪುನರ್ಜನ್ಮ ನೀಡಿದ ಮಹಾತಾಯಿ 72ನೇ ವಯಸ್ಸಿನಲ್ಲಿ ಮಗನಿಗೆ ಕಿಡ್ನಿಕೊಟ್ಟು ಪುನರ್ಜನ್ಮ ನೀಡಿದ ಮಹಾತಾಯಿ

ಇನ್ನು ಈ ಮಗುವಿಗೆ ಹೃದಯದ ಕೆಳ ಭಾಗದ ಚೇಂಬರ್ ನಲ್ಲಿ ದೊಡ್ಡ ರಂಧ್ರವಿತ್ತು. ಈ ಕಾರಣಕ್ಕೆ ಆಮ್ಲಜನಕ ಒಳಗೊಂಡ ಹಾಗೂ ಒಳಗೊಳ್ಳದ ರಕ್ತ ಬೆರೆತು ಹೋಗುತ್ತಿತ್ತು. ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ರೀತಿಯ ಪ್ರಕರಣಗಳು ವಿರಳ. ಒಂದೇ ಹಂತದಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ರಂಧ್ರವನ್ನು ಮುಚ್ಚಲಾಗಿದೆ. ಕವಾಟವನ್ನು ಸರಿ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

English summary
A 14-month-old Pakistani boy with a heart chamber four-times larger than normal underwent a surgery to correct it, in a private hospital in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X