ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರಿ ತಪ್ಪಿಯೇ ಇಲ್ಲ, ಬಾಲಕೋಟ್ ದಾಳಿಯ ರೋಚಕ ಕ್ಷಣಗಳನ್ನು ಬಿಚ್ಚಿಟ್ಟ ಪೈಲಟ್

|
Google Oneindia Kannada News

ನವದೆಹಲಿ, ಜೂನ್ 25: "ಆ ದಾಳಿಗೂ ಮುನ್ನ ನಾವು ಆದೆಷ್ಟು ಸಿಗರೇಟ್ ಸೇದಿದ್ದದೆವೋ ಲೆಕ್ಕವಿಲ್ಲ. ಪಾಕಿಸ್ತಾನಕ್ಕೆ ಸುಳಿವೂ ನೀಡದಂತೆ ಅಂಥದೊಂದು ಮಹತ್ವದ ದಾಳಿ ನಡೆಸುವದು ನಮ್ಮ ಗುರಿಯಾಗಿತ್ತು. ನಮ್ಮ ಗುರಿ ತಪ್ಪಿರುವುದಕ್ಕೆ ಸಾಧ್ಯವೇ ಇಲ್ಲ" ಎಂದು ಭಾರತೀಯ ವಾಯುಸೇನೆಯ ಸ್ಕ್ವಾಡ್ರನ್ ಲೀಡರ್ ವೊಬ್ಬರು ಬಾಲಕೋಟ್ ಏರ್ ಸ್ಟ್ರೈಕ್ ನ ಅನುಭವ ಹಂಚಿಕೊಂಡರು.

ಬಾಲಕೋಟ್ ಏರ್ ಸ್ಟ್ರೈಕ್ ನಲ್ಲಿ ಭಾಗಿಯಾಗಿದ್ದ ಮಿರಾಜ್ 2000 ಯುದ್ಧ ವಿಮಾನದ ಇಬ್ಬರು ಪೈಲಟ್ ಗಳು ಎನ್ ಡಿಟಿವಿ ಗೆ ನೀಡಿದ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಆ ಅನುಭವಗಳನ್ನು ಹಂಚಿಕೊಂಡರು. ಪೈಲಟ್ ಗಳ ಮನವಿ ಮೇರೆಗೆ ಅವರ ಹೆಸರುಗಳನ್ನು ಎನ್ ಡಿಟಿವಿ ಉಲ್ಲೇಖಿಸಿಲ್ಲ.

ಏರ್ ಸ್ಟ್ರೈಕ್ ದಿನ ಬೆಳಿಗ್ಗೆ ಏನಾಯ್ತು? ರಕ್ಷಣಾ ಸಚಿವರೇ ಬಿಚ್ಚಿಟ್ಟ ಸತ್ಯ!ಏರ್ ಸ್ಟ್ರೈಕ್ ದಿನ ಬೆಳಿಗ್ಗೆ ಏನಾಯ್ತು? ರಕ್ಷಣಾ ಸಚಿವರೇ ಬಿಚ್ಚಿಟ್ಟ ಸತ್ಯ!

ಬಾಲಕೋಟ್ ನಲ್ಲಿ ಏರ್ ಸ್ಟ್ರೈಕ್ ನಡೆದಿದ್ದೇ ಸುಳ್ಳು, ಏರ್ ಸ್ಟ್ರೈಕ್ ನಡೆದಿದ್ದರೂ ಭಾರತೀಯ ವಾಯುಸೇನೆ ಉಗ್ರ ನೆಲೆಯನ್ನು ಗುರಿಯಾಗಿಸಿ ಮಾಡಿದ್ದ ದಾಳಿ ಗುರಿತಪ್ಪಿತ್ತು ಎಂಬಿತ್ಯಾದಿ ಹೇಳಿಕೆಗಳಿಗೆ ಪೈಲಟ್ ಗಳು ಕೊಟ್ಟ ವಿವರಣೆ ಉತ್ತರ ನೀಡಿದೆ.

ಎರಡೂವರೆ ತಾಸಿನ ಕಾರ್ಯಾಚರಣೆ

ಎರಡೂವರೆ ತಾಸಿನ ಕಾರ್ಯಾಚರಣೆ

'ಅದು ಎರಡೂವರೆ ತಾಸಿನ ಕಾರ್ಯಾಚರಣೆ. ಅದಕ್ಕೂ ಮುನ್ನ ನಾವು ಸಾಕಷ್ಟು ಸಿಗರೇಟ್ ಸೇದಿದ್ದೆವು. ಪಾಕಿಸ್ತಾನಕ್ಕೆ ಸುಳಿವೂ ಸಿಗದಂತೆ ಕಾರ್ಯಾಚರಣೆ ಮಾಡಿ ಮುಗಿಸೋದು ನಮ್ಮ ಗುರಿಯಾಗಿತ್ತು. ಆದ್ದರಿಂದ ಸಹಜವಾಗಿಯೇ ತಲೆಬಿಸಿಯಾಗಿತ್ತು. ಜೊತೆಗೆ ಪುಲ್ವಾಮಾನದಲ್ಲಿ ನಮ್ಮ ಸಹೋದ್ಯೋಗಿಗಳ ಬಲಿದಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಕಿಚ್ಚು ನಮ್ಮೊಳಗಿತ್ತು' ಎಂದು ಪೈಲಟ್ ಹೇಳಿದರು.

ಬಾಲಕೋಟ್ ನಿಂದ ಪಾಕ್ ಸರ್ಕಾರವೇ ಉಗ್ರರನ್ನು ಸಾಗಿಸಿತ್ತು: ಭುಟ್ಟೋ ಸ್ಫೋಟಕ ಹೇಳಿಕೆ ಬಾಲಕೋಟ್ ನಿಂದ ಪಾಕ್ ಸರ್ಕಾರವೇ ಉಗ್ರರನ್ನು ಸಾಗಿಸಿತ್ತು: ಭುಟ್ಟೋ ಸ್ಫೋಟಕ ಹೇಳಿಕೆ

ಇಸ್ರೇಲಿನ ಎರಡು ವಿಭಿನ್ನ ಯುದ್ಧ ಸಾಮಗ್ರಿಗಳು

ಇಸ್ರೇಲಿನ ಎರಡು ವಿಭಿನ್ನ ಯುದ್ಧ ಸಾಮಗ್ರಿಗಳು

ಅಂದು ನಾವು ಕಾರ್ಯಾಚರಣೆಗೆ ಬಳಸಿದ್ದು ಇಸ್ರೇಲಿನ ಎರಡು ವಿಭಿನ್ನ ಯುದ್ಧ ಸಾಮಗ್ರಿಗಳನ್ನು. ಸ್ಪೈಸ್ 2000 ಮತ್ತು ಕ್ರಿಸ್ಟಲ್ ಮೇಜ್ ಎಂಬೆರಡು ಯುದ್ಧ ಸಾಮಗ್ರಿಗಳ ಮೂಲಕ ಉಗ್ರರ ಮೇಲೆ ದಾಳಿ ಮಾಡಿದ್ದೆವು. ಒಟ್ಟು 12 ಮಿರಾಜ್ 2000 ಯುದ್ಧ ವಿಮಾನಗಳೊಂದಿಗೆ ನಾವು ಉಗ್ರನೆಲೆಯ ಮೇಲೆ ಕರಾರುವಾಕ್ ದಾಳಿ ನಡೆಸಿದ್ದೆವು ಎಂದು ಪೈಲಟ್ ನೆನಪಿಸಿಕೊಂಡರು.

ಕಟ್ಟಡದೊಳಗಿರುವ ಉಗ್ರರನ್ನೂ ಬಿಟ್ಟಿಲ್ಲ!

ಕಟ್ಟಡದೊಳಗಿರುವ ಉಗ್ರರನ್ನೂ ಬಿಟ್ಟಿಲ್ಲ!

ಇಸ್ರೇಲಿ ಯುದ್ಧ ಸಾಮಗ್ರಿಗಳಲ್ಲಿ ಸ್ಪೈಸ್ 2000 ಕಾರ್ಯ ಅತ್ಯಂತ ಶ್ಲಾಘನೀಯ. ಅದು ಉಗ್ರರು ನೆಲೆಸಿದ್ದ ಕಟ್ಟಡದೊಳಗೇ ಹೊಕ್ಕು ದಾಳಿ ನಡೆಸುತ್ತದೆ. ಇನ್ನು ಕ್ರಿಸ್ಟಲ್ ಮೇಜ್ ನಮ್ಮ ಗುರಿಗೆ ಸಂಬಂಧಿಸಿದ ವಿಡೀಯೋ ಫೀಡ್ ಗಳನ್ನು ನೀಡುತ್ತದೆ. ಸ್ಪೈಸ್ 2000 ಸ್ಪೋಟಗೊಳ್ಳುವ ಮೊದಲು ಅದು ಯಾವುದೇ ಕಟ್ಟಡದ ಒಳಗೆ ಹೋಗಿ ಅಲ್ಲಿರುವವರನ್ನು ಕೊಲ್ಲುತ್ತದೆ. ಕಟ್ಟಡವನ್ನು ಸಂಪೂರ್ಣ ನಾಶ ಮಾಡುವ ಬದಲು, ಗುರಿಯನ್ನಷ್ಟೇ ತಲುಪಿ, ಉಗ್ರರನ್ನು ಕೊಲ್ಲುವುದು ಅದರ ಉದ್ದೇಶವಾಗಿತ್ತು. ಅಂತೆಯೇ ಕಟ್ಟಡಗಳಲ್ಲಿ ರಂಧ್ರಗಳು ಉಂಟಾದ ಚಿತ್ರವನ್ನೂ ಮಾಧ್ಯಮಗಳು ಬಿಡುಗಡೆ ಮಾಡಿದ್ದವು.

ನಿಮಿಷದಂತೆ ಕಳೆದಿತ್ತು!

ನಿಮಿಷದಂತೆ ಕಳೆದಿತ್ತು!

ನಿಜ ಹೇಳಬೇಕೆಂದರೆ ಆ ಎರಡೂವರೆ ತಾಸು ಕಳೆದುಹೋಗಿದ್ದೇ ತಿಳಿಯಲಿಲ್ಲ. ಯಾಕೆಂದರೆ ನಾವು ಅಷ್ಟೇ ಹೊತ್ತಿನಲ್ಲಿ ಏನೆಲ್ಲ ಮಾಡಿದ್ದೆವು. ನಮಗೆ ಇದ್ದ ಒಂದೇ ಆತಂಕ ಎಂದರೆ ನಮ್ಮ ದಾಳಿಯ ಬಗ್ಗೆ ಪಾಕಿಸ್ತಾನಕ್ಕೆ ತಿಳಿಯಬಾರದು ಎಂಬುದು. ಏಕೆಂದರೆ ಆ ಸಂದರ್ಭದಲ್ಲಿ ಒಂದು ಪಾಕಿಸ್ತಾನಿ ಯುದ್ಧ ವಿಮಾನವೂ ಅದೇ ಪ್ರದೇಶದಲ್ಲಿತ್ತು ಎಂಬ ಮಾಹಿತಿ ಲಭ್ಯವಾಗಿತ್ತು! ಸ್ಪೈಸ್ 2000 ಅಸ್ತ್ರ ಎಂದರೆ ಬೆಂಕಿ ಹಚ್ಚಿ ಮರೆತು ಬಿಡುವ ಅಸ್ತ್ರ. ನೀವು ಅದು ಗುರಿ ತಲುಪಿದೆಯೇ ಇಲ್ಲವೇ, ಆಮೇಲೇನಾಯ್ತು ಎಂದರೆಲ್ಲ ಪರಿಶೀಲಿಸುವ ಅಗತ್ಯವಿಲ್ಲ. ಅದು ಕರಾರುವಕ್ಕಾಗಿ ಗುರಿ ತಲುಪಿ, ಮಾಡಬೇಕಾದ ಹಾನಿಯನ್ನು ಮಾಡಿಯೇ ಮಾಡುತ್ತದೆ ಎಂದು ವಿಶ್ವಾಸದಿಂದ ಹೇಳುತ್ತಾರೆ ಪೈಲಟ್.

ಗಡಿ ನಿಯಂತ್ರಣ ರೇಖೆಯಿಂದ ಎಂಟು ಕಿಮೀ ದೂರ!

ಗಡಿ ನಿಯಂತ್ರಣ ರೇಖೆಯಿಂದ ಎಂಟು ಕಿಮೀ ದೂರ!

"ನಾವು ಗಡಿ ನಿಯಂತ್ರಣ ರೇಖೆಯಿಂದ ಎಂಟು ಕಿಮೀ ಒಳಗೆ ಸಾಗಿ ಅಲ್ಲಿ ಸ್ಪೈಸ್ ಬಾಂಬ್ ಅನ್ನು ಒಂದು ಪೊಸಿಶನ್ ಗೆ ತಂದು ದಾಳಿ ನಡೆಸಿದ್ದೆವು" ಎಂದ ಪೈಲಟ್ ಗಳ ಬಳಿ ಪತ್ರಕರ್ತರು, 'ಏರ್ ಸ್ಟ್ರೈಕ್ ಅನ್ನು ಯಶಸ್ವಿಯಾಗಿ ಮುಗಿಸಿ ವಾಪಸ್ ಬಂದ ಮೇಲೆ ಏನು ಮಾಡಿದಿರಿ' ಎಂದು ಕೇಳಿದ ಪ್ರಶ್ನೆಗೆ ಪೈಲಟ್ ಗಳು ನಗುತ್ತ ನೀಡಿದ ಉತ್ತರ, 'ಮತ್ತಷ್ಟು ಸಿಗರೇಟ್ ಸೇದಿದೆವು!'

ಪುಲ್ವಾಮಾ ದಾಳಿಗೆ ಪ್ರತೀಕಾರ

ಪುಲ್ವಾಮಾ ದಾಳಿಗೆ ಪ್ರತೀಕಾರ

ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರಿದ್ದ ಬಸ್ಸಿನ ಮೇಲೆ ಆತ್ಮಾಹುತಿ ದಾಳಿಕೋರ ಕಾರ್ ಬಾಂಬ್ ದಾಳಿ ನಡೆಸಿದ ಪರಿಣಾಮ ನಲವತ್ತಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಈ ಘಟನೆಯಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿತ್ತು. ಈ ಘಟನೆಗೆ ಪಾಕ್ ಮೂಲದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ತಾನೇ ಹೊಣೆ ಎಂದು ಒಪ್ಪಿಕೊಂಡಿತ್ತು. ಉಗ್ರರಿಗೆ ನೆಲೆ ನೀಡುತ್ತಿರುವ ಪಾಕಿಸ್ತಾನದ ಮೇಲೆ ಇಡೀ ವಿಶ್ವೂ ಒತ್ತಡ ಹೇರಿತ್ತು. ಭಯೋತ್ಪಾದನೆಗೆ ತಿಲಾಂಜಲಿ ಹಾಡುವಂತೆ ತಾಕೀತುಹಾಕಿತ್ತು. ನಂತರ ಫೆಬ್ರವರಿ 26 ರಂದು ಬಾಲಕೋಟ್ ಉಗ್ರ ನೆಲೆಯ ಮೇಲೆ ಏರ್ ಸ್ಟ್ರೈಕ್ ನಡೆಸಿದ ಭಾರತ ಸುಮಾರು 250-300 ಉಗ್ರರನ್ನು ಹೊಡೆದು ಹಾಕಿತ್ತು. ಆದರೆ ಆ ದಾಳಿ ನಡೆದಿದ್ದೇ ಸುಳ್ಳು ಎಂದು ಪಾಕಿಸ್ತಾನ ಹೇಳಿತ್ತು. ಭಾರತದಲ್ಲೂ ಕೆಲವರು ಸಾಕ್ಷಿ ಕೇಳಿದ್ದರು. ಆ ಎಲ್ಲ ಪ್ರಶ್ನೆಗಳಿಗೆ ಅಂದು ಏರ್ ಸ್ಟ್ರೈಕ್ ನಲ್ಲಿ ಭಾಗಿಯಾಗಿದ್ದ ಪೈಲಟ್ ಗಳೇ ಉತ್ತರ ನೀದಿದ್ದಾರೆ.

English summary
Two Squadron Leaders of Indian air force, who flew Balakot mission shares their experince with NDTV, about Balakot air strike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X