ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಯಿಗಾಗಿ ಆಮ್ಲಜನಕ ಕೇಳಿದ ಮಗನ ಕಪಾಳಕ್ಕೆ ಹೊಡೆಯುತ್ತೇನೆ ಎಂದ ಸಚಿವರು

|
Google Oneindia Kannada News

ನವದೆಹಲಿ, ಏಪ್ರಿಲ್ 23: ಕೊರೊನಾ ಪೀಡಿತ ಮಹಿಳೆಯ ಮಗನಿಗೆ ಕಪಾಳಕ್ಕೆ ಹೊಡೆಯುತ್ತೇನೆ ಎಂದು ಹೇಳುವ ಮೂಲಕ ಕೇಂದ್ರ ಸಚಿವರು ಮಾನವೀಯತೆ ಮರೆತು ವರ್ತಿಸಿರುವ ಘಟನೆ ನಡೆದಿದೆ.

ಕೊರೊನಾ ಸೋಂಕು ಪೀಡಿತ ತಾಯಿಗೆ ಆಕ್ಸಿಜನ್ ಒದಗಿಸುವಂತೆ ಬೇಡಿಕೊಂಡ ವ್ಯಕ್ತಿಯೊಬ್ಬರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಅವರು ಕಪಾಳಕ್ಕೆ ಹೊಡೆಯುತ್ತೇನೆ ಎಂದು ಹೇಳಿದ್ದು ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೊಸ ದಾಖಲೆ: ಭಾರತದಲ್ಲಿ ಒಂದೇ ದಿನ 3,32,730 ಮಂದಿಗೆ ಕೊರೊನಾವೈರಸ್!ಹೊಸ ದಾಖಲೆ: ಭಾರತದಲ್ಲಿ ಒಂದೇ ದಿನ 3,32,730 ಮಂದಿಗೆ ಕೊರೊನಾವೈರಸ್!

ಎರಡು ದಿನಗಳ ಹಿಂದೆ ದಾಮೋಹ್ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಗಳನ್ನು ಲೂಟಿ ಮಾಡಲಾಗಿತ್ತು. ಘಟನೆ ನಡೆದ ಎರಡು ದಿನಗಳ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು.

2 Slaps: Union Minister Prahlad Patels Shocker To Man Seeking Oxygen

ಈ ವೇಳೆ ವ್ಯಕ್ತಿಯೊಬ್ಬರು ಸಚಿವರ ಬಳಿ ಬಂದು ನನ್ನ ತಾಯಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಆಕ್ಸಿಜನ್ ಸಿಲಿಂಡರ್ ಅಗತ್ಯವಿದೆ. 36 ಗಂಟೆಗಳ ಬಳಿಕ ಆಕ್ಸಿಜನ್ ನೀಡುವುದಾಗಿ ಆಸ್ಪತ್ರೆಯವರು ಹೇಳಿದ್ದರು.

ಆದರೆ, ಇನ್ನೂ ಕೊಟ್ಟಿಲ್ಲ ಎಂದು ಹೇಳಿದರು. ಮಾತನಾಡುವ ವೇಳೆ ವ್ಯಕ್ತಿ ಸಚಿವರ ಮೇಲೆ ಬೆರಳು ತೋರಿಸಿ ಮಾತನಾಡಿದ್ದರು. ಘಟನೆ ಕುರಿತು ಕಾಂಗ್ರೆಸ್ ಕೇಂದ್ರ ಸಚಿವರ ವಿರುದ್ಧ ಹರಿಹಾಯುತ್ತಿದ್ದು, ಕೇಂದ್ರ ಸಚಿವರ ಮಾತ್ರ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಇದರಿಂದ ತೀವ್ರವಾಗಿ ಕೆಂಡಾಮಂಡಲಗೊಂಡ ಸಚಿವರು ಕೈಕೆಳಗಿಳಿಸುವಂತೆ ಸೂಚಿಸಿದರು. ಅಲ್ಲದೆ, ಇದೇ ಧಾಟಿಯಲ್ಲಿ ಮಾತನಾಡಿದರೆ, ಕಪಾಳಕ್ಕೆ ಹೊಡೆಯುತ್ತೇನೆಂದು ಹೇಳಿದರು.

ನಿಮಗೆ ಯಾರಾದರೂ ಆಮ್ಲಜನಕ ಸಿಲಿಂಡರ್ ನಿರಾಕರಿಸಿದ್ದಾರೆಯೇ? ಎಂದು ಕೇಳಿದ್ದಾರೆ. ಆಗ ಆ ವ್ಯಕ್ತಿ, ಹೌದು, ಅವರು ನಿರಾಕರಿಸಿದರು, ನಮಗೆ ಐದು ನಿಮಿಷ ಮಾತ್ರ ಆಕ್ಸಿಜನ್ ಸಿಕ್ಕಿತು ಎಂದು ಉತ್ತರಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ನಂತರ ಅಳಲಾರಂಭಿಸಿದ ವ್ಯಕ್ತಿ, ಹೌದು, ನನಗೆ ಅದುವೇ ಸಿಗುತ್ತದೆ ಎಂಬುದು ಗೊತ್ತಿದೆ. ನನ್ನ ತಾಯಿ ಅಲ್ಲಿಯೇ ಮಲಗಿದ್ದಾಳೆ. ಈಗ ನಾವೇನೂ ಮಾಡಬೇಕು ಎಂದು ಕೇಳಿದ್ದಾನೆ. ಬಳಿಕ ವಿಡಿಯೋ ರೆಕಾರ್ಡ್ ಆಗುತ್ತಿರುವುದನ್ನು ಗಮನಿಸಿದ ಸಚಿವರು ಕೂಡಲೇ ಎಚ್ಚೆತ್ತುಕೊಂಡು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು.

English summary
Union Minister Prahlad Patel was caught on camera today threatening to slap a man pleading with him for oxygen for his Covid positive relative.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X