ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ಚರಂಡಿಯಲ್ಲಿ ಮತ್ತೆರೆಡು ಮೃತದೇಹ ಪತ್ತೆ

|
Google Oneindia Kannada News

ನವದೆಹಲಿ, ಫೆಬ್ರವರಿ 27: ಗುಪ್ತಚರ ಇಲಾಖೆ ಅಧಿಕಾರಿ ಶವ ಪತ್ತೆಯಾಗಿ ಒಂದು ದಿನದೊಳಗೆ ಮತ್ತೆರೆಡು ಶವ ಚರಂಡಿಯಲ್ಲಿ ಪತ್ತೆಯಾಗಿದೆ.

ಗಂಗವಿಹಾರ್​ ಜೊಹ್ರಿಪುರದ ವಿಸ್ತರಣೆ ಪ್ರದೇಶದಲ್ಲಿರುವ ಚರಂಡಿಯಲ್ಲಿ ಎರಡು ಶವಗಳು ಪತ್ತೆಯಾಗಿದ್ದು ಅವುಗಳನ್ನು ಹೊರತೆಗೆಯಲಾಗಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಚರಂಡಿಯೊಳಗೆ ಇನ್ನೂ ಶವಗಳಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ನಾಪತ್ತೆಯಾಗಿದ್ದ ಐಬಿ ಅಧಿಕಾರಿ ಮೃತದೇಹ ಚರಂಡಿಯಲ್ಲಿ ಪತ್ತೆನಾಪತ್ತೆಯಾಗಿದ್ದ ಐಬಿ ಅಧಿಕಾರಿ ಮೃತದೇಹ ಚರಂಡಿಯಲ್ಲಿ ಪತ್ತೆ

ಈಶಾನ್ಯ ದೆಹಲಿಯಲ್ಲಿ ನಡೆದ ಸಿಎಎ ಪರ ಮತ್ತು ವಿರೋಧ ಹೋರಾಟದಿಂದಾಗಿ ಸಾವಿಗೀಡಾದವರ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚಳ ಕಾಣುತ್ತಿದೆ. ಇಂದು ಬೆಳಗ್ಗೆ ಚರಂಡಿಯಿಂದ ಎರಡು ಶವವನ್ನು ಹೊರತೆಗೆಯಲಾಗಿದೆ.

2 Bodies Pulled Out Of Drain In Northeast Delhi

ರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಅಧಿಕಾರಿ ಹಿಂಸಾಚಾರದಲ್ಲಿ ಕೊಲೆಮಾಡಿ ಅವರ ಶವವನ್ನು ಚರಂಡಿಗೆ ಎಸೆಯಲಾಗಿತ್ತು. ಅವರನ್ನು ಮನೆಯಿಂದ ಎಳೆದು ತಂದು ಕೊಲೆ ಮಾಡಿದ್ದಾಗಿ ಹೇಳಲಾಗಿತ್ತು.

ದೆಹಲಿಯ ಹಿಂಸಾಚಾರದಿಂದಾಗಿ ಸತ್ತವರ ಸಂಖ್ಯೆ 35ಕ್ಕೆ ತಲುಪಿದೆ. ಇನ್ನೂ ಹೆಚ್ಚೆಚ್ಚು ಶವಗಳು ಪತ್ತೆಯಾಗುತ್ತಿರುವುದು ವರದಿಯಾಗಿದೆ.

ಈಶಾನ್ಯ ದೆಹಲಿಯ ಖಜೂರಿ ಖಾಸ್ ಪ್ರದೇಶದ ನಿವಾಸಿಯಾಗಿದ್ದ ಅಂಕಿತ್ ಶರ್ಮಾ, ಅವರ ದೇಹ ಅತ್ಯಂತ ಗಲಭೆ ಪೀಡಿತ ಪ್ರದೇಶಗಳಲ್ಲಿ ಒಂದಾದ ಜಫ್ರಾಬಾದ್‌ನಲ್ಲಿ ಸಿಕ್ಕಿದೆ. ಅಂಕಿತ್ ಸಾವಿಗೆ ಎಎಪಿ ಮುಖಂಡ ತಾಹೀರ್ ಹುಸೇನ್ ಕಾರಣ ಎಂದು ಅವರ ತಂದೆ ರವೀಂದರ್ ಶರ್ಮಾ ಆರೋಪಿಸಿದ್ದಾರೆ.

ಹುಸೇನ್ ನೇತೃತ್ವದಲ್ಲಿ ಕಲ್ಲು ತೂರಾಟಗಾರರು ನಡೆಸಿದ್ದಾರೆ ಎನ್ನಲಾದ ದಾಳಿಯ ವಿಡಿಯೋವನ್ನು ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹುಸೇನ್ ಅವರೇ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ ಮತ್ತು ಕಲ್ಲು ತೂರಾಟ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಂಕಿತ್ ಹತ್ಯೆಯ ಹಿಂದೆ ಹುಸೇನ್ ಕೈವಾಡ ಇದೆ ಎಂದು ಅವರ ಕುಟುಂಬ ಹೇಳಿದೆ ಎಂದು ತಿಳಿಸಿದ್ದಾರೆ.

English summary
Police in northeast Delhi's Gangavihar area on Thursday recovered two more bodies from the drains. The two bodies were recovered from Gangavihar Johripur Extension area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X