ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಮುಂಬೈ ಮಾತ್ರವಲ್ಲ ದೆಹಲಿಯಲ್ಲೂ ಕೊರೊನಾ ಹೆಚ್ಚಳ!

|
Google Oneindia Kannada News

ದೆಹಲಿ, ಆಗಸ್ಟ್ 10: ಮಹಾರಾಷ್ಟ್ರದ ಮುಂಬೈ ಮಾತ್ರವಲ್ಲದೇ ದೆಹಲಿಯಲ್ಲೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಒಂದೇ ದಿನ 2146 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ಖಾತ್ರಿಯಾಗಿದೆ.

ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ ಸೋಂಕಿನಿಂದ ದೆಹಲಿಯಲ್ಲಿ 8 ಮಂದಿ ಪ್ರಾಣ ಬಿಟ್ಟಿದ್ದು, 180 ದಿನಗಳಲ್ಲೇ ಒಂದೇ ದಿನ ಅತಿಹೆಚ್ಚು ಸಾವಿನ ಪ್ರಕರಣಗಳು ವರದಿಯಾಗಿವೆ. ಇದರ ಜೊತೆಗೆ ದೆಹಲಿಯಲ್ಲಿ ಪಾಸಿಟಿವಿಟಿ ದರ ಶೇ.17.83ರಷ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

2,146 New Corona virus Cases and 8 Deaths In Delhi: Positivity Rate Spikes To 17.83 per cent

 Big Alert: ಮುಂಬೈನಲ್ಲಿ ಶೇ.79ರಷ್ಟು ಹೆಚ್ಚಾಯ್ತು ಕೊರೊನಾ ಕೇಸ್! Big Alert: ಮುಂಬೈನಲ್ಲಿ ಶೇ.79ರಷ್ಟು ಹೆಚ್ಚಾಯ್ತು ಕೊರೊನಾ ಕೇಸ್!

ದೆಹಲಿಯಲ್ಲಿ ಫೆಬ್ರವರಿ 13ರಂದು ಒಂದೇ ದಿನ 12 ಮಂದಿಗೆ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದರು. ಮಂಗಳವಾರವೊಂದೇ ದಿನ 2495 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪಕ್ಕಾ ಆಗಿತ್ತು. ಮಂಗಳವಾರ ಪಾಸಿಟಿವಿಟಿ ದರ ಶೇ.15.41ರಷ್ಟಿದ್ದು, 7 ಮಂದಿ ಮೃತಪಟ್ಟಿದ್ದರು.

ದೆಹಲಿಯಲ್ಲಿ ಕೋವಿಡ್-19 ಏರಿಳಿತ:
ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ 1,372 ಸೋಂಕಿತ ಪ್ರಕರಣಗಳು ಮತ್ತು ಆರು ಸಾವಿನ ಪ್ರಕಕರಣಗಳು ವರದಿಯಾಗಿದ್ದವು. ಅಂದು ಕೋವಿಡ್-19 ಪ್ರಕರಣದ ಪಾಸಿಟಿವಿಟಿ ಪ್ರಮಾಣವು ಶೇಕಡಾ 17.85ರಷ್ಟಿತ್ತು. ಇದು ಜನವರಿ 21ರ ನಂತರದ ಗರಿಷ್ಠ ಸಂಖ್ಯೆಯಾಗಿತ್ತು. ಜನವರಿ 21 ರಂದು ಪಾಸಿಟಿವಿಟಿ ದರ ಶೇ.18.04ರಷ್ಟಿತ್ತು. ಇನ್ನು ಮಂಗಳವಾರ 12,036 ಕೋವಿಡ್-19 ಪರೀಕ್ಷೆಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಬುಲೆಟಿನ್ ತಿಳಿಸಿತ್ತು. ದೆಹಲಿಯಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 19,75,540ಕ್ಕೆ ಏರಿಕೆಯಾಗಿದ್ದರೆ, ಸಾವಿನ ಸಂಖ್ಯೆ 26,351ಕ್ಕೆ ಏರಿಕೆಯಾಗಿದೆ.

ಮುಂಬೈನಲ್ಲಿ ಶೇ.79ರಷ್ಟು ಕೋವಿಡ್-19 ಹೆಚ್ಚಳ:
ರಾಜಧಾನಿ ಮುಂಬೈನಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಮತ್ತೊಮ್ಮೆ ದಾಖಲೆ ಬರೆದಿದೆ. ಒಂದೇ ದಿನದಲ್ಲಿ 852 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪಕ್ಕಾ ಆಗಿದೆ.

ಕಳೆದ ಮಂಗಳವಾರ ಮುಂಬೈನಲ್ಲಿ 476 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಅದಾಗಿ ಮರುದಿನವೇ ಈ ಸಂಖ್ಯೆ ಬಹುತೇಕ ಡಬಲ್ ಆಗಿದೆ. ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಶೇ.79ರಷ್ಟು ಏರಿಕೆಯಾಗಿದೆ. ನಿನ್ನೆಗೆ ಹೋಲಿಸಿದರೆ, ಇಂದು 376 ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಇದು ಮುಂಬೈ ನಗರದ ಜನರಲ್ಲಿ ಹೊಸ ಆತಂಕವನ್ನು ಹುಟ್ಟು ಹಾಕುವಂತಿದೆ. ಇದರ ಮಧ್ಯೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,500 ಅಂಕಗಳನ್ನು ದಾಟಿ 3,545 ಕ್ಕೆ ತಲುಪಿದೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಬುಲೆಟಿನ್ ತಿಳಿಸಿದೆ.

English summary
2,146 New Corona virus Cases and 8 Deaths In Delhi: Positivity Rate Spikes To 17.83 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X