ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್.01ರಿಂದ ಎಟಿಎಂಗಳಲ್ಲೂ ಬರೋದಿಲ್ಲ 2,000 ರೂಪಾಯಿ ನೋಟು

|
Google Oneindia Kannada News

ನವದೆಹಲಿ, ಫೆಬ್ರವರಿ.24: ಎರಡು ಸಾವಿರ ರೂಪಾಯಿ ಮೌಲ್ಯದ ನೋಟುಗಳ ಚಲಾವಣೆ ಬಂದ್ ಆಗುತ್ತದೆ ಎಂಬ ಸುದ್ದಿ ದೇಶಾದ್ಯಂತ ಹರಿದಾಡುತ್ತಿದೆ. ಇದರ ನಡುವೆ ಮಾರ್ಚ್.01ರಿಂದ ಎಟಿಎಂಗಳಲ್ಲೂ 2 ಸಾವಿರ ರೂಪಾಯಿ ಮುಖಬೆಲೆಯ ನೋಟ್ ಗಳು ಬರುವುದಿಲ್ಲ ಎನ್ನಲಾಗುತ್ತಿದೆ.

ಇಂಡಿಯನ್ ಬ್ಯಾಂಕ್ ಮುಂದಿನ ಮಾರ್ಚ್.01ರಿಂದ ತನ್ನ ಬ್ಯಾಂಕ್ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ನೋಟ್ ಗಳನ್ನು ನೀಡುವುದನ್ನೇ ಬಂದ್ ಮಾಡುವುದಾಗಿ ತಿಳಿಸಿದೆ. ಸಾರ್ವಜನಿಕರು 2 ಸಾವಿರ ರೂಪಾಯಿ ಚಿಲ್ಲರೆಗೆ ಪರದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಎಟಿಎಂನಲ್ಲಿ ಉಚಿತ ವಿತ್‌ ಡ್ರಾ 5 ರಿಂದ 3ಕ್ಕೆ ಇಳಿಕೆ?ಎಟಿಎಂನಲ್ಲಿ ಉಚಿತ ವಿತ್‌ ಡ್ರಾ 5 ರಿಂದ 3ಕ್ಕೆ ಇಳಿಕೆ?

ಇನ್ನು, ಬ್ಯಾಂಕ್ ನ ಶಾಖೆಗಳಲ್ಲಿ ಎಂದಿನಂತೆ ಗ್ರಾಹಕರಿಗೆ 2 ಸಾವಿರ ರೂಪಾಯಿ ಮೌಲ್ಯದ ನೋಟನ್ನು ನೀಡಲಾಗುತ್ತದೆ. ಇದರಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದು ಬ್ಯಾಂಕ್ ನ ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2 ಸಾವಿರ ರೂಪಾಯಿ ನೋಟಿನ ಬಗ್ಗೆ ಆತಂಕ ಬೇಡ

2 ಸಾವಿರ ರೂಪಾಯಿ ನೋಟಿನ ಬಗ್ಗೆ ಆತಂಕ ಬೇಡ

ಇಂಡಿಯನ್ ಬ್ಯಾಂಕ್ ಎಟಿಎಂಗಳಿಗಷ್ಟೇ ಈ ಕ್ರಮವನ್ನು ಸೀಮಿತಗೊಳಿಸಲಾಗಿದೆ. ದೇಶಾದ್ಯಂತ ಇರುವ ಇಂಡಿಯನ್ ಬ್ಯಾಂಕ್ ನ ಎಲ್ಲ ಶಾಖೆಗಳಲ್ಲೂ 2 ಸಾವಿರ ರೂಪಾಯಿ ಮುಖಬೆಲೆಯ ನೋಟಿನ ವಿನಿಮಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಫೆಬ್ರವರಿ.17ರಂದೇ ಎಲ್ಲ ಶಾಖೆಗಳಿಗೆ ಸೂಚನೆ

ಕಳೆದ ಫೆಬ್ರವರಿ.17ರಂದೇ ಎಲ್ಲ ಶಾಖೆಗಳಿಗೆ ಸೂಚನೆ

ಇನ್ನು, ದೇಶಾದ್ಯಂತ ಇರುವ ಇಂಡಿಯನ್ ಬ್ಯಾಂಕ್ ನ ಎಲ್ಲ ಎಟಿಎಂಗಳಲ್ಲೂ ಮಾರ್ಚ್.01ರಿಂದ 2 ಸಾವಿರ ರೂಪಾಯಿ ಮೌಲ್ಯದ ನೋಟು ಸಿಗುವುದಿಲ್ಲ. ಈ ಕುರಿತು ಕ್ರಮ ತೆಗೆದುಕೊಳ್ಳುವಂತೆ ಬ್ಯಾಂಕ್ ಹಿರಿಯ ಅಧಿಕಾರಿಗಳು ಫೆಬ್ರವರಿ.17ರಂದೇ ಎಲ್ಲ ಶಾಖೆಗಳಿಗೂ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ.

200 ರೂಪಾಯಿ ಕ್ಯಾಸೆಟ್ ಜೋಡಣೆಗೆ ಸೂಚನೆ

200 ರೂಪಾಯಿ ಕ್ಯಾಸೆಟ್ ಜೋಡಣೆಗೆ ಸೂಚನೆ

ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ನೋಟ್ ಗಳನ್ನು ಜೋಡಿಸುವ ಕ್ಯಾಸೆಟ್ ಗಳನ್ನು ತೆಗೆದು ಅದರ ಬದಲು 200 ರೂಪಾಯಿ ನೋಟ್ ಗಳನ್ನು ಜೋಡಿಸುವ ಕ್ಯಾಸೆಟ್ ಗಳನ್ನು ಹಾಕುವಂತೆ ಎಲ್ಲ ಶಾಖೆ ಸಿಬ್ಬಂದಿಗೂ ಮಾಹಿತಿ ರವಾನಿಸಲಾಗಿದೆ.

ಚಿಲ್ಲರೆ ಸಮಸ್ಯೆ ಬಗೆಹರಿಸಲು ಇಂಡಿಯನ್ ಬ್ಯಾಂಕ್ ಕ್ರಮ

ಚಿಲ್ಲರೆ ಸಮಸ್ಯೆ ಬಗೆಹರಿಸಲು ಇಂಡಿಯನ್ ಬ್ಯಾಂಕ್ ಕ್ರಮ

ಗ್ರಾಹಕರು 2 ಸಾವಿರ ರೂಪಾಯಿಗೆ ಚಿಲ್ಲರೆ ಪಡೆಯುವುದಕ್ಕಾಗಿ ಪರದಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕ್ರಮವನ್ನು ಜರುಗಿಸಲಾಗಿದೆ ಎಂದು ಇಂಡಿಯನ್ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಹೊರತುಪಡಿಸಿ ಬೇರೆ ಯಾವ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳು ತಮ್ಮ ಬ್ಯಾಂಕಿನ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ಮೌಲ್ಯನ ನೋಟ್ ನ್ನು ತುಂಬಿಸುವುದಿಲ್ಲ ಎಂದು ಮಾಹಿತಿ ನೀಡಿಲ್ಲ. ಈ ಕ್ರಮವು ಕೇವಲ ಇಂಡಿಯನ್ ಬ್ಯಾಂಕ್ ನದ್ದು ಎಂದು ತಿಳಿದು ಬಂದಿದೆ.

English summary
2,000 Rupees Not Get In ATM's Form March.01. India Bank Officers Clarification About This Action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X