ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ದೆಹಲಿಯಲ್ಲಿ ಭಾರೀ ಶಸ್ತ್ರಾಸ್ತ್ರ ವಶ

|
Google Oneindia Kannada News

ನವದೆಹಲಿ, ಆಗಸ್ಟ್‌ 12: ಸ್ವಾತಂತ್ರ್ಯ ದಿನಾಚರಣೆಗೆ ಮುನ್ನವೇ ಪೂರ್ವ ದೆಹಲಿಯಲ್ಲಿ ಮದ್ದುಗುಂಡುಗಳ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅಜ್ಮಲ್, ರಶೀದ್, ಪರೀಕ್ಷಿತ್, ಸದ್ದಾಂ, ಕಮ್ರಾನ್ ಮತ್ತು ನಾಸಿರ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 2,251 ಸಜೀವ ಗುಂಡು ಸೇರಿದಂತೆ ಅಪಾರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ: ಮೀರಿದರೆ 500 ರೂ. ದಂಡದೆಹಲಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ: ಮೀರಿದರೆ 500 ರೂ. ದಂಡ

ಆಗಸ್ಟ್ 6 ರಂದು ಪೊಲೀಸರು ಗಸ್ತು ತಿರುಗುತ್ತಿದ್ದಾಗ ಇಬ್ಬರು ಶಂಕಿತರು ಟ್ರಾಲಿ ಬ್ಯಾಗ್‌ನೊಂದಿಗೆ ಪಾರ್ಕಿಂಗ್ ಕಡೆಗೆ ಹೋಗುತ್ತಿರುವುದನ್ನು ಅವರು ಗಮನಿಸಿದರು. ಪೊಲೀಸರ ವಿಚಾರಣೆ ನಡೆಸಿದಾಗ ಅವರು ವಿವಿಧ ರೀತಿಯ ಆಮದು ಮಾಡಿಕೊಂಡ ಮದ್ದುಗುಂಡುಗಳನ್ನು ಒಳಗೊಂಡಂತೆ 2,251 ಜೀವಂತ ಗುಂಡುಗಳನ್ನು ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಆಟೋ ರಿಕ್ಷಾ ಚಾಲಕರೊಬ್ಬರು ಇಬ್ಬರ ಬಗ್ಗೆ ಸುಳಿವು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

2,000 cartridges recovered in Delhi just before Independence Day

ಆರೋಪಿಗಳನ್ನು ಅಜ್ಮಲ್ ಖಾನ್ (20) ಮತ್ತು ರಶೀದ್ ಅಲಿಯಾಸ್ ಲಲ್ಲನ್ (20) ಎಂದು ಗುರುತಿಸಲಾಗಿದೆ. ಇಬ್ಬರೂ ಉತ್ತರ ಪ್ರದೇಶದ ಜೌನ್‌ಪುರ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿರುವ ವ್ಯಕ್ತಿಯಿಂದ ಶಸ್ತ್ರಾಸ್ತ್ರ ಪಡೆದಿರುವುದಾಗಿ ಆರೋಪಿಗಳು ಹೇಳಿದ್ದಾರೆ. ಅದನ್ನು ಲಕ್ನೋದಲ್ಲಿರುವ ವ್ಯಕ್ತಿಗೆ ತಲುಪಿಸಲು ಹೊರಟಿದ್ದರು ಎಂದು ಡಿಸಿಪಿ (ಪೂರ್ವ) ಪ್ರಿಯಾಂಕಾ ಕಶ್ಯಪ್ ಹೇಳಿದ್ದಾರೆ.

ತನಿಖೆ ವೇಳೆ ಆರೋಪಿಗಳು ಈ ಹಿಂದೆ ನಾಲ್ಕೈದು ಬಾರಿ ಇದೇ ರೀತಿಯ ಸರಕುಗಳನ್ನು ಸರಬರಾಜು ಮಾಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಆರೋಪಿಗಳನ್ನು ಹಿಡಿಯಲು ಪೊಲೀಸರು ಲಕ್ನೋ ಮತ್ತು ಜಾನ್‌ಪುರ ಪ್ರದೇಶಗಳಲ್ಲಿ ದಾಳಿ ನಡೆಸಿದ್ದು, ಪ್ರಸ್ತಾವಿತ ರಿಸೀವರ್‌ಗಳಲ್ಲಿ ಒಬ್ಬನಾದ ಸದ್ದಾಂನನ್ನು ಜೌನ್‌ಪುರದಿಂದ ಬಂಧಿಸಲಾಗಿದೆ ಎಂದು ಡಿಸಿಪಿ ಹೇಳಿದರು.

ಮತ್ತೊಂದು ಪೊಲೀಸ್ ತಂಡವು ಡೆಹ್ರಾಡೂನ್‌ನ ಪ್ರದೇಶಗಳಲ್ಲಿ ತನಿಖೆ ಮಾಡಿದೆ. ಅಲ್ಲಿ ಗನ್ ಹೌಸ್ ನಡೆಸುತ್ತಿದ್ದ ಪರೀಕ್ಷಿತ್ ನೇಗಿ (42) ಎಂಬುವವನನ್ನು ಬಂಧಿಸಿದೆ. ನೇಗಿ ಅವರು ಉತ್ತರಾಖಂಡದ ಹಲವಾರು ಗನ್ ಹೌಸ್‌ಗಳು ಮತ್ತು ಇತರ ಮೂಲಗಳಿಂದ ತನ್ನ ಗನ್ ಹೌಸ್‌ನ ದಾಖಲೆಗಳನ್ನು ತಿರುಚಿದ ನಂತರ ಮದ್ದುಗುಂಡುಗಳನ್ನು ಸಂಗ್ರಹಿಸಿದ್ದಾರೆ ಎಂದು ಹೇಳಿದ್ದಾರೆ. ನೇಗಿ ಬಂಧಿತ ವ್ಯಕ್ತಿಗಳಿಗೆ ಮದ್ದುಗುಂಡುಗಳನ್ನು ಮತ್ತಷ್ಟು ಪೂರೈಸಿದರು. ಈತ ಕೂಡ ಇಂತಹ ದಂಧೆಯಲ್ಲಿ ಭಾಗಿಯಾಗಿದ್ದನು. ಸಿಂಡಿಕೇಟ್‌ನ ಇನ್ನೂ ಮೂವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

2,000 cartridges recovered in Delhi just before Independence Day

ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಪ್ರಾಥಮಿಕವಾಗಿ ಆರೋಪಿಯು ಕ್ರಿಮಿನಲ್ ಜಾಲದ ಭಾಗವಾಗಿ ತೋರುತ್ತಾನೆ. ಆದರೆ ಅವನ ಭಯೋತ್ಪಾದನೆ ಹಿನ್ನೆಲೆಯ ಆಯಾಮವನ್ನು ತಳ್ಳಿಹಾಕಿಲ್ಲ.

English summary
Six people have been arrested in connection with an ammunition smuggling case in East Delhi ahead of the Independence Day celebrations, police said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X