ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1993ರ ಮುಂಬೈ ಸ್ಫೋಟ: ದಾವೂದ್ ಆಪ್ತ ಅಬು ಬಕರ್ ಬಂಧನ

|
Google Oneindia Kannada News

ನವದೆಹಲಿ, ಫೆಬ್ರವರಿ 5: ಕಳೆದ 1993ರ ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷಗಳ ನಂತರ ಆರೋಪಿ ಮತ್ತು ದಾವೂದ್ ಇಬ್ರಾಹಿಂನ ಆಪ್ತ ಸಹಾಯಕ ಅಬು ಬಕರ್ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಬಂಧಿಸಲಾಗಿದೆ.

ವರದಿಗಳ ಪ್ರಕಾರ, ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬರಾದ ಅಬು ಬಕರ್‌ನ ಹಸ್ತಾಂತರ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. 1993 ರ ಸ್ಫೋಟದ ಪ್ರಮುಖ ಸಂಚುಕೋರರಲ್ಲಿ ಒಬ್ಬರಾದ ಬಕರ್ ಯುಎಇ ಮತ್ತು ಪಾಕಿಸ್ತಾನದಲ್ಲಿ ನೆಲೆಸಿದ್ದನು. 1997ರಲ್ಲಿ ಆರೋಪಿ ವಿರುದ್ಧ 'ರೆಡ್ ಕಾರ್ನರ್ ನೋಟಿಸ್' ಹೊರಡಿಸಲಾಗಿತ್ತು.

ದಾವೂದ್ ನ ಆಸ್ತಿ ಯುಕೆ ಸರಕಾರದ ವಶ, ಭಾರತಕ್ಕೆ ರಾಜತಾಂತ್ರಿಕ ಗೆಲುವುದಾವೂದ್ ನ ಆಸ್ತಿ ಯುಕೆ ಸರಕಾರದ ವಶ, ಭಾರತಕ್ಕೆ ರಾಜತಾಂತ್ರಿಕ ಗೆಲುವು

ದಾವೂದ್ ಇಬ್ರಾಹಿಂನ ಪ್ರಮುಖ ಲೆಫ್ಟಿನೆಂಟ್‌ಗಳಾದ ಮೊಹಮ್ಮದ್ ಮತ್ತು ಮುಸ್ತಫಾ ದೊಸ್ಸಾ ಜೊತೆಗೆ ಗಲ್ಫ್ ದೇಶಗಳಿಂದ ಮುಂಬೈಗೆ ಚಿನ್ನ, ಬಟ್ಟೆ ಮತ್ತು ಎಲೆಕ್ಟ್ರಾನಿಕ್ಸ್ ಕಳ್ಳಸಾಗಣೆಯಲ್ಲಿ ಅಬು ಬಕರ್ ತೊಡಗಿಸಿಕೊಂಡಿದ್ದನು. ಅಬು ಬಕರ್ ಪೂರ್ಣ ಹೆಸರು ಅಬು ಬಕರ್ ಅಬ್ದುಲ್ ಗಫೂರ್ ಶೇಖ್ ಆಗಿದೆ.

1993 Mumbai blast: Dawood Ibrahim’s close aide Abu Bakar Arrested in UAE


2019ರಲ್ಲಿ ಜೈಲಿನಲ್ಲಿ ಮೃತಪಟ್ಟಿದ್ದ ಅಪರಾಧಿ ಗನಿ:

1993ರಲ್ಲಿ ಮುಂಬೈನ 12ಕ್ಕೂ ಅಧಿಕ ಕಡೆಗಳಲ್ಲಿ ಸಂಭವಿಸಿದ ಸ್ಫೋಟದಲ್ಲಿ 257ಕ್ಕೂ ಅಧಿಕ ಮಂದಿ ಮೃತಪಟ್ಟು 1400 ಮಂದಿ ಗಾಯಗೊಂಡಿದ್ದರು. ಇದೇ ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಅಪರಾಧಿ ಅಬ್ದುಲ್ ಗನಿ ತುರ್ಕ್ 2019ರ ಏಪ್ರಿಲ್ 25ರಂದು ಮೃತಪಟ್ಟಿದ್ದನು. ನಾಗ್ಪುರದ ಜಿಎಂಸಿ ಆಸ್ಪತ್ರೆಯಲ್ಲಿ ಗುರುವಾರದಂದು ಗನಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.

ನಾಗ್ಪುರದ ಕೇಂದ್ರ ಕಾರಾಗೃಹದಲ್ಲಿ ಅಬ್ದುಲ್ ಗನಿ ತುರ್ಕ್ ಅನ್ನು ಇರಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಎನಿಸಿದವರ ಪೈಕಿ ಅಬ್ದುಲ್ ಗನಿ 8ನೆಯವನಾಗಿದ್ದನು. ರಾಯ್ ಗಢ ಜಿಲ್ಲೆಯ ಶೆಖಾಡಿ ಕರಾವಳೀಯಲ್ಲಿ ಆರ್ ಡಿಎಕ್ಸ್ ಇಟ್ಟು ಕಾರ್ಯಾಚರಣೆ ನಡೆಸಿದ ಆರೋಪ ಸಾಬೀತಾಗಿತ್ತು.

ಗನಿ ವಿರುದ್ಧ ಐಪಿಸಿ ಸೆಕ್ಷನ್ 302, 307, 326, 324, 435, 436 ಅನ್ವಯ ಪ್ರಕರಣಗಳು ದಾಖಲಾಗಿ, ಸಾಬೀತಾಗಿತ್ತು. ಇದಲ್ಲದೆ, ಸ್ಫೋಟಕ ವಸ್ತು ನಿಯಂತ್ರಣ ಕಾಯ್ದೆ ಸೆಕ್ಷನ್ 9 ಬಿ (1), ಸೆಕ್ಷನ್ 3, 4(ಎ), (ಬಿ) ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ನಿಯಂತ್ರಣ ಕಾಯ್ದೆ ಸೆಕ್ಷನ್ 4ರ ಅಡಿಯಲ್ಲೂ ಆರೋಪ ಸಾಬೀತಾಗಿತ್ತು.

Recommended Video

ಯೋಗಿ ಆದಿತ್ಯನಾಥ್ ಕಿವಿ ಓಲೆ ಮತ್ತು ರುದ್ರಾಕ್ಷಿ ಮಾಲೆಯ ಬೆಲೆ ಎಷ್ಟು ಗೊತ್ತಾ? | Oneindia Kannada

English summary
1993 Mumbai blast: Dawood Ibrahim’s close aide Abu Bakar Arrested in UAE, extradition process initiated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X