• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತದ ಶಕ್ತಿ ಕೇಂದ್ರ ಸಂಸತ್ ಮೇಲಿನ ದಾಳಿಗೆ ಇಂದಿಗೆ 17 ವರ್ಷ!

|

ನವದೆಹಲಿ, ಡಿಸೆಂಬರ್ 13 : ಭಾರತದ ಶಕ್ತಿ ಕೇಂದ್ರವಾಗಿದ್ದ ಸಂಸತ್ತಿನ ಮೇಲೆ ಭಯೋತ್ಪಾದಕರ ದಾಳಿ ನಡೆದು ಇಂದಿಗೆ (ಡಿಸೆಂಬರ್ 13) ಬರೋಬ್ಬರಿ 17 ವರ್ಷ!

2001ರ ಡಿ.13 ರಂದು ಸಂಸತ್ ಮೇಲೆ ನಡೆದ ದಾಳಿಯಲ್ಲಿ ಐವರು ಭಯೋತ್ಪಾದಕರು ಹತರಾದರು. ಆದರೆ ಈ ದಾಳಿಯ ಸಂದರ್ಭದಲ್ಲಿ ಸಂಸತ್ತಿನಲ್ಲಿದ್ದ ಘಟಾನುಘಟಿ ನಾಯಕರನ್ನು ಉಳಿಸುವುದಕ್ಕಾಗಿ ಐದು ಪೊಲೀಸರು ಸೇರಿದಂತೆ 9 ಜನ ಪ್ರಾಣತ್ಯಾಗ ಮಾಡಿದ್ದರು.

ಈ ದಾಳಿಯ ರೂವಾರಿ ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರ ಅಫ್ಜಲ್ ಗುರುವನ್ನು ದಾಳಿ ನಡೆದ ಎರಡೇ ದಿನದಲ್ಲಿ ಅಂದರೆ ಡಿ.15 ರಂದೇ ಬಂಧಿಸಲಾಯ್ತು. 2005 ಆಗಸ್ಟ್ 4ರಂದು ಅಫ್ಜಲ್ ಗುರುವಿಗೆ ಸುಪ್ರೀಂ ಕೋರ್ಟ್ ಮರಣದಂಡನೆಯನ್ನೇನೋ ದೃಢಪಡಿಸಿತ್ತು. ಆದರೆ ಕ್ಷಮಾದಾನ ಅರ್ಜಿಯ ವಿಚಾರಣೆ, ತೀರ್ಪಿನ ಮರುಪರಿಶೀಲನೆ, ಮಾನವ ಹಕ್ಕು ಹೋರಾಟಗಾರರ ಕೂಗು ಎನ್ನುತ್ತ ಆತ ನೇಣುಗಂಬವೇರಿದ್ದು ಮಾತ್ರ ಸೆರೆ ಸಿಕ್ಕ 12 ವರ್ಷದ ನಂತರ!

ಆ ಕರಾಳ ದಿನಕ್ಕಾಯ್ತು ಹದಿನಾರು! ಸಂಸತ್ ದಾಳಿಯ ಮರೆತವರ್ಯಾರು?!

ಅದೂ ಯಾರಿಗೂ ತಿಳಿಯದಂತೆ ಆತನನ್ನು ಗಲ್ಲಿಗೇರಿಸಲಾಗಿತ್ತು. ಅಕಸ್ಮಾತ್ ಅದನ್ನು ಬಹಿರಂಗಗೊಳಿಸಿ, ಮೊದಲೇ ದಿನ ನಿಗದಿ ಮಾಡಿ ಗಲ್ಲುಗೇರಿಸುವುದಕ್ಕೆ ಹೋಗಿದ್ದರೆ ಭಾರತದಲ್ಲಿ ಮಾನವ ಹಕ್ಕು ಸಂಘಟನೆಗಳು ಅದನ್ನು ವಿರೋಧಿಸುವ ಸಾಧ್ಯತೆ ಇತ್ತು. ಆದ್ದರಿಂದ ಗುಟ್ಟಾಗಿ ಅಂದಿನ ಸರ್ಕಾರ ಅಫ್ಜಲ್ ನನ್ನು ನೇಣಿಗೇರಿಸಿತ್ತು.

ಸಂಸತ್ ದಾಳಿಗೆ ಹದಿನೇಳು ವರ್ಷ ತುಂಬಿದ ನೆನಪಿಗೆ ಹುತಾತ್ಮ ಪೊಲೀಸರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಈ ಹದಿನೇಳು ವರ್ಷಗಳ ನಂತರವೂ ಅಂದು ಮನಸ್ಸಿಗೆ ಆದ ಗಾಯ ಅಷ್ಟು ಬೇಗ ಮಾಸುವುದಿಲ್ಲ.

ನರೇಂದ್ರ ಮೋದಿಯಿಂದ ಹುತಾತ್ಮರಿಗೆ ಶ್ರದ್ಧಾಂಜಲಿ

'2001ರ ಈ ದಿನ ನಮ್ಮ ಸಂಸತ್ತಿನ ಮೇಲೆ ನಡೆದ ಕ್ರೂರ ದಾಳಿಯ ಸಂದರ್ಭದಲ್ಲಿ ಪ್ರಾಣತ್ಯಾಗ ಮಾಡಿದ ಹುತಾತ್ಮರಿಗೆ ನಾನು ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಅವರ ಧೈರ್ಯ ಮತ್ತು ನಾಯಕತ್ವ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿ' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಉಂಡ ಮನೆಗೆ 2 ಬಗೆದಿದ್ದ ಗುರು ಟೈಂ ಲೈನ್

ಶ್ರದ್ಧಾಂಜಲಿ ಅರ್ಪಿಸಲು ಸಕಾಲ

17 ವರ್ಷಗಳ ಹಿಂದೆ ನಮ್ಮ ಸಂಸತ್ತಿನ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದರು. ಅಂದು ಪ್ರಾಣತೆತ್ತ ಹುತಾತ್ಮ ಪೊಲೀಸರಿಗೆ ಶ್ರದ್ಧಾಂಜಲಿ ಅರ್ಪಿಸಲು ಇದು ಸಕಾಲ. ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಲು ಅವರು ಮಾಡಿದ ತ್ಯಾಗವನ್ನು ನೆನಪಿಸಿಕೊಂಡು, ಅದನ್ನು ನಾಶ ಮಾಡಲು ಯತ್ನಿಸುವ ದೇಶದ ಒಳಗಿನ ಮತ್ತು ಹೊರಗಿನ ಶಕ್ತಿಗಳೊಂದಿಗೆ ಹೋರಾಡುವುದು ಅಗತ್ಯ ಎಂದು ಕಾಂಗ್ರೆಸ್ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಹೋರಾಡಲು ಪಣ ತೊಡೋಣ : ವೆಂಕಯ್ಯ ನಾಯ್ಡು

ನಮ್ಮ ದೇಶದ ಭದ್ರತೆಯನ್ನು ಕಾಪಾಡುವಲ್ಲಿ ಅವರಲ್ಲಿದ್ದ ನಿಸ್ವಾರ್ಥ ಗುಣ ನಮ್ಮಲ್ಲರಿಗೂ ಮಾದರಿ. ಆ ದಿನ ಪ್ರಾಣ ತ್ಯಾಗ ಮಾಡಿದ ಎಲ್ಲ ಹುತಾತ್ಮರಿಗೂ ನನ್ನ ನಮನಗಳು. ಸಂಸತ್ ಮೇಲೆ ದಾಳಿಮಾಡಿದಂಥ ಎಲ್ಲ ದುಷ್ಟಶಕ್ತಿಗಳ ವಿರುದ್ಧ ನಿರಂತರವಾಗಿ ಹೋರಾಡಲು ಪಣತೊಡೋಣ' ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.

ಪ್ರಜಾಪ್ರಭುತ್ವದ ಸಂಕೇತ

ನಮ್ಮ ಪ್ರಜಾಪ್ರಭುತ್ವದ ಸಂಕೇತವಾದ ಸಂಸತ್ತನ್ನು ಉಳಿಸಲು ತಮ್ಮ ಪ್ರಾಣತ್ಯಾಗ ಮಾಡಿದ ಎಲ್ಲ ಹುತಾತ್ಮರಿಗೂ ನಮನಗಳು ಎಂದು ಶೆಹನ್ವಾಜ್ ಪೂನಾವಾಲಾ ಟ್ವೀಟ್ ಮಾಡಿದ್ದಾರೆ.

ಪ್ರಾಣತೆತ್ತ ಹುತಾತ್ಮರಿಗೆ ಒಂದು ಸೆಲ್ಯೂಟ್

ನಮ್ಮ ದೇಶಕ್ಕಾಗಿ, ಅಧಿಕಾರದ ಕೇಂದ್ರವಾಗಿರುವ ಸಂಸತ್ತಿನ ಮೇಲೆ ದಾಳಿ ಮಾಡಿದ ಭಯೋತ್ಪಾದಕರನ್ನು ಸದೆಬಡಿಯುವ ಸಂದರ್ಭದಲ್ಲಿ ಪ್ರಾಣತೆತ್ತ ಹುತಾತ್ಮರಿಗೆ ಒಂದು ಸೆಲ್ಯೂಟ್. ಈ ಘಟನೆ ನಡೆದು ಹದಿನೇಳು ವರ್ಷವಾದರೂ ಆಗಿರುವ ಗಾಯ ಅಷ್ಟು ಬೇಗ ಮನಸ್ಸಿನಿಂದ ಮಾಸುವುದಿಲ್ಲ.

English summary
It is(13-12-2018) the 17th anniversary of Parliament attack. In 2001 this day Mohammad Afzal Guru who was a Jaish-e-Mohammad terrorist attacked Parliament. 9 people including 5 police personnel died i the incidents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X