ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಆಯ್ಕೆ: ರಾಜ್ಯದಿಂದ 11, ದೇಶದಿಂದ 315 ಮಂದಿ

By Srinath
|
Google Oneindia Kannada News

ನವದೆಹಲಿ, ಮೇ 23- ನೂತನ ಸರಕಾರ ಅಧಿಕಾರಕ್ಕೆ ಬರಲು ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಈ ಮಧ್ಯೆ 16ನೆಯ ಲೋಕಸಭೆಗೆ ಮೊದಲ ಪ್ರಯತ್ನದಲ್ಲೇ ಯಾರೆಲ್ಲಾ ಗೆದ್ದು ಬಂದಿದ್ದಾರೆ ಎಂದು ಫಲಿತಾಂಶದತ್ತ ಕಣ್ಣುಹಾಯಿಸಿದಾಗ ಅನೇಕ ಆಸಕ್ತಿಕರ ವಿಷಯಗಳು ಹೊರಬೀಳುತ್ತವೆ.

ಕರ್ನಾಟಕದಿಂದ ಹಾಲಿ ಲೋಕಸಭೆಗೆ ಒಟ್ಟು 11 ಮಂದಿ ಮೊದಲ ಪ್ರಯತ್ನದಲ್ಲೇ ಆಯ್ಕೆಯಾಗಿದ್ದಾರೆ. ಇವರಲ್ಲಿ ಅತ್ಯಂತ ಹಿರಿಯರಾಗಿ (ಅತಿ ಹೆಚ್ಚು ಮತಗಳ ಅಂತದೊಂದಿಗೂ ಸಹ) ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಆಯ್ಕೆಯಾಗಿದ್ದಾರೆ, ಅತಿ ಕಿರಿಯರಾಗಿ ಮೈಸೂರು-ಕೊಡಗು ಕ್ಷೇತ್ರದಿಂದ ಪ್ರತಾಪ್ ಸಿಂಹ ಆಯ್ಕೆಯಾಗಿರುವುದು ವಿಶೇಷವಾಗಿದೆ.

Lok Sabha election result 2014: 315 MPs newly elected- 11 from Karnataka
ಇನ್ನು ಇಡೀ ದೇಶದತ್ತ ಕಣ್ಣು ಹಾಯಿಸಿದಾಗ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಒಟ್ಟು 315 ಮಂದಿ ಸಂಸದರು ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ 171 ಮಂದಿ ಸಂಸದರು ಮರು ಆಯ್ಕೆಯಾಗಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಈ ಪ್ರಮಾಣದಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿರುವುದು ಈ ಬಾರಿಯೇ. ಗಮನಾರ್ಹವೆಂದರೆ ಈ 315 ಮಂದಿ ಲೋಕಸಭಾ ಸದಸ್ಯರ ಪೈಕಿ 226 ಮಂದಿ ಈ ಹಿಂದೆ ರಾಜ್ಯಸಭೆ ಸದಸ್ಯರಾಗಿದ್ದವರು.

ನೆರೆಯ ತಮಿಳುನಾಡಿನಲ್ಲಿ ಅಣ್ಣಾ ಡಿಎಂಕೆಯ 37 ಸಂಸದರ ಪೈಕಿ 34 ಮಂದಿ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.

PRS Legislative Research ಪ್ರಕಾರ 543 ಸದಸ್ಯ ಬಲದ ಲೋಕಸಭೆಯಲ್ಲಿ 315 ಸಂಸದರು (ಶೇ. 58ರಷ್ಟು) ಮೊಟ್ಟ ಮೊದಲ ಬಾರಿಗೆ ಸಂಸತ್ ಅಂಗಳ ಪ್ರವೇಶ ಮಾಡಿದ್ದಾರೆ. ಸಂಸದರಲ್ಲಿ ರಾಮ್‌ ವಿಲಾಸ್ ಪಾಸ್ವಾನ್, ಕಮಲ್‌ ನಾಥ್, ಪಿಎ ಸಂಗ್ಮಾ ( ತಲಾ 9 ಬಾರಿ), ಜಾರ್ಖಂಡ್ ರಾಜ್ಯದಿಂದ ಕರಿಯಾ ಮುಂಡ ಹಾಗೂ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್, ಮಧ್ಯ ಪ್ರದೇಶದಿಂದ ಸುಮಿತ್ರ ಮಹಾಜನ್ ಮತ್ತು ಒರಿಸ್ಸಾದಿಂದ ಅರ್ಜುನ್ ಚರಣ್ ತಲಾ 8 ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದಾರೆ.

English summary
Lok Sabha election result 2014: 315 MPs newly elected- 11 from Karnataka. In the 543-member Lok Sabha, 315 MPs (58 per cent) have been elected for the first time in the 2014 general elections. The AIADMK tops the list as 34 of its 37 MPs have been elected to Parliament for the first time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X