ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವದೆಹಲಿ: ಮಾನವ ಕಳ್ಳ ಸಾಗಣೆ, 16 ಯುವತಿಯರ ರಕ್ಷಣೆ

By Nayana
|
Google Oneindia Kannada News

ನವದೆಹಲಿ, ಜು.25: ಅಪಾರ್ಟ್‌ಮೆಂಟ್‌ ಒಂದರಲ್ಲಿ ನೇಪಾಳದಿಂದ ಕಳ್ಳಸಾಗಣೆ ಮೂಲಕ ದೆಹಲಿಗೆ ಕರೆತರಲಾಗುತ್ತಿದ್ದ 16 ಯುವತಿಯರನ್ನು ರಕ್ಷಿಸಲಾಗಿದೆ.

ಮುನಿರ್ಕಾ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ ಒಂದರಿಂದ ದೆಹಲಿಗೆ ತರಲಾಗುತ್ತಿದ್ದ ನೇಪಾಳದ ಯುವತಿಯರನ್ನು ಮಹಿಳಾ ಆಯೋಗ ಮತ್ತು ಪೊಲೀಸರು ತೆರಳಿ ರಕ್ಷಿಸಿದ್ದಾರೆ.ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಅವರಿಗೆ ಮನವಿ ಮಾಡಿಕೊಂಡಿರುವ ಆಯೋಗ ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಮಕ್ಕಳ ಕಳ್ಳನೆಂದು ಭಾವಿಸಿ ಮಗುವಿನ ತಂದೆಯನ್ನೇ ಥಳಿಸಿದ ಸಾರ್ವಜನಿಕರುಮಕ್ಕಳ ಕಳ್ಳನೆಂದು ಭಾವಿಸಿ ಮಗುವಿನ ತಂದೆಯನ್ನೇ ಥಳಿಸಿದ ಸಾರ್ವಜನಿಕರು

ಈ ಕುರಿತು ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಳ್​ ಮಾತನಾಡಿ, ಇರಾನ್‌ ಮತ್ತು ಕುವೈತ್‌ನಲ್ಲಿ ಉದ್ಯೋಗದ ಆಮಿಷವೊಡ್ಡಿ ಯುವತಿಯರನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಎನ್‌ಜಿಒ ಮಾಹಿತಿ ನೀಡಿತು. ಇವರನ್ನು ಹೊರತುಪಡಿಸಿ ಇತರೆ 7 ಜನ ಯುವತಿಯರನ್ನು ಈಗಾಗಲೇ ಗಲ್ಫ್‌ ರಾಷ್ಟ್ರಗಳಿಗೆ ಸಾಗಿಸಲಾಗಿದೆ ಎಂದು ತಿಳಿಸಿದ್ದಾರೆ.

16 girls saved from Human traffickers

ಈ ವಿಷಯವನ್ನು ದೆಹಲಿ ಪೊಲೀಸರಿಗೆ ತಿಳಿಸಿ ಮಹಿಳಾ ಆಯೋಗದ ತಂಡದೊಂದಿಗೆ ಮುನಿರ್ಕಾ ಅಪಾರ್ಟ್‌ಮೆಂಟ್‌ ಬಳಿ ತೆರಳಿ ಕಾರ್ಯಾಚರಣೆ ನಡೆಸಿ ಯುವತಿಯರನ್ನು ರಕ್ಷಿಸಲಾಗಿದೆ. ಉದ್ಯೋಗದ ಭರವಸೆ ನೀಡಿ ಮಧ್ಯವರ್ತಿಗಳು ಯುವತಿಯರನ್ನು ಇರಾನ್‌ ಮತ್ತು ಕುವೈತ್‌ಗೆ ಸಾಗಿಸಲು ಬೆಳಗ್ಗೆ ಸಿದ್ಧತೆ ನಡೆಸಿದ್ದರು. ಸಣ್ಣದೊಂದು ಕೋಣೆಯಲ್ಲಿ ಕೂಡಿಹಾಕಿದ್ದರು ಎಂದು ಯುವತಿಯರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

English summary
National women commission rescue 16 girls from Human trafficking. They were transported from Delhi to Gulf countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X