ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ: 15 ವರ್ಷ ಹಳೆಯ ಡೀಸೆಲ್ ವಾಹನಗಳು ರಸ್ತೆಗಿಳಿಯುವಂತಿಲ್ಲ

|
Google Oneindia Kannada News

ದೆಹಲಿ, ಅಕ್ಟೋಬರ್ 08: ಚಳಿಗಾಲ ಸಮೀಪವಾಗುತ್ತಿದ್ದಂತೆ ನಿದ್ದೆಯಿಂದ ಎದ್ದಿರುವ ದೆಹಲಿ ಸರ್ಕಾರ ವಾಯುಮಾಲಿನ್ಯ ನಿಯಂತ್ರಣಕ್ಕೆ ಸಜ್ಜುಗೊಂಡಿದೆ. ಮೊದಲ ನಡೆಯಾಗಿ 15 ವರ್ಷ ಹಳೆಯ ಡೀಸೆಲ್ ವಾಹನಗಳನ್ನು ರಸ್ತೆಗೆ ಇಳಿಯದಂತೆ ತಡೆಯುವ ಯತ್ನಕ್ಕೆ ಕೈ ಹಾಕಿದೆ.

15 ವರ್ಷ ಹಳೆಯ ಡೀಸೆಲ್ ವಾಹನಗಳನ್ನು ದೆಹಲಿ ಸಾರಿಗೆ ಇಲಾಖೆ ವಶಪಡಿಸಿಕೊಳ್ಳಲಿದ್ದು, ಅವುಗಳನ್ನು ಸಾಮೂಹಿಕವಾಗಿ ನಾಶ ಮಾಡಲಾಗುತ್ತದೆ. ಮನೆ ಮುಂದೆ, ಪಾರ್ಕಿಂಗ್ ಎಲ್ಲೇ ನಿಂತಿರುವ ಹಳೆಯ ಡೀಸೆಲ್ ಕಾರುಗಳನ್ನು ಏಕಾ-ಏಕಿ ಅಮಾನತ್ತು ಎತ್ತಿಕೊಂಡು ಹೋಗಲು ಸಂಚಾರಿ ಇಲಾಖೆ ಸಜ್ಜಾಗಿ ಕೂತಿದೆ.

 15 years Old diesel cars to be seized in Delhi

ಹೀಗೆ ವಶಪಡಿಸಿಕೊಂಡ ವಾಹನವನ್ನು ಅದರ ಮಾಲೀಕರಿಗೆ ನೀಡದೆ ರಾಜ್ಯ ಸರ್ಕಾರ ನಡೆಸುವ ಎಂಎಸ್‌ಟಿಸಿ ಸಂಸ್ಥೆಗೆ ಕಳುಹಿಸಿ ನಾಶಪಡಿಸಲಾಗುತ್ತದೆ.

ಇದಪ್ಪಾ ಹುಮ್ಮಸ್ಸು ಅಂದ್ರೆ! ಸಮುದ್ರವನ್ನೇ ಸ್ವಚ್ಛಗೊಳಿಸುತ್ತಿರುವ ಪೋರ! ಇದಪ್ಪಾ ಹುಮ್ಮಸ್ಸು ಅಂದ್ರೆ! ಸಮುದ್ರವನ್ನೇ ಸ್ವಚ್ಛಗೊಳಿಸುತ್ತಿರುವ ಪೋರ!

ನೆರೆ ರಾಜ್ಯಗಳಲ್ಲಿ ಕಳೆಯನ್ನು ಸುಡುವ ಸಮಯ ಸನಿಹವಾಗಿದೆ. ಇದು ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಲು ಕಾರಣವಾಗುತ್ತದೆ. ಚಳಿಗಾಲ ಸಹ ಸನಿಹದಲ್ಲಿದೆ, ದೆಹಲಿಯ ವಾತಾವರಣದಲ್ಲಿ ಮಂಜು ಮಿಶ್ರಿತ ಹೊಗೆ ಆವರಿಸಿಕೊಳ್ಳಲು ಆರಂಭವಾಗುತ್ತದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಣಯ ಕೈಗೊಳ್ಳಲಿದ್ದೇವೆ ಎಂದು ದೆಹಲಿ ಸಾರಿಗೆ ಸಚಿವರು ಹೇಳಿದ್ದಾರೆ.

ವಾಯುಮಾಲಿನ್ಯ ನಿಯಂತ್ರಣಕ್ಕೆ ರಾಜ್ಯದ ನಿರ್ಲಕ್ಷ್ಯ: ಕಾದಿದೆ ಅಪಾಯವಾಯುಮಾಲಿನ್ಯ ನಿಯಂತ್ರಣಕ್ಕೆ ರಾಜ್ಯದ ನಿರ್ಲಕ್ಷ್ಯ: ಕಾದಿದೆ ಅಪಾಯ

ಹಸಿರು ನ್ಯಾಯಾಧಿಕರಣ ನಿಯಮದ ಅನ್ವಯ 15 ವರ್ಷ ಹಳೆಯ ಡೀಸೆಲ್ ಕಾರುಗಳನ್ನು ಮನೆಯ ಮುಂದೆ ಪಾರ್ಕ್‌ ಮಾಡುವಂತಿಲ್ಲ. ಹಾಗೇನಾದರೂ ಪಾರ್ಕ್‌ ಮಾಡಿದಲ್ಲಿ ಅದನ್ನು ಸಂಚಾರ ಇಲಾಖೆಯವರು ವಶಪಡಿಸಿಕೊಳ್ಳಬಹುದಾಗಿದೆ. ಆದರೆ ದೆಹಲಿ ನಗರದಲ್ಲಿ ಬಹುತೇಕರಿಗೆ ಪಾರ್ಕಿಂಗ್‌ ಸ್ಥಳವೇ ಇಲ್ಲ.

ಭಾರತೀಯರ ಒಂದೂವರೆ ವರ್ಷ ಆಯಷ್ಯ ಕಸಿಯುತ್ತಿದೆ ವಾಯುಮಾಲಿನ್ಯ ಭಾರತೀಯರ ಒಂದೂವರೆ ವರ್ಷ ಆಯಷ್ಯ ಕಸಿಯುತ್ತಿದೆ ವಾಯುಮಾಲಿನ್ಯ

ದೆಹಲಿ ಒಂದರಲ್ಲೇ ಒಂದು ಕೋಟಿ ನೊಂದಾಯಿತ ವಾಹನಗಳು ಇವೆ. ಅದರಲ್ಲಿ 3,70,000 ವಾಹನಗಳು 15 ವರ್ಷಕ್ಕಿಂತಲೂ ಹಳೆಯವು. 2016 ರ ನಂತರ 2,23,000 ವಾಹನಗಳು ನೊಂದಾವಣಿ ರದ್ದು ಮಾಡಲಾಗಿದೆ.

English summary
Delhi transport department started a drive on Monday to confiscate, de-register and scrap diesel vehicles that are more than 15 years old.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X