ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣರಾಜ್ಯೋತ್ಸವ ಹಿಂಸಾಚಾರ: ನಟ ದೀಪ್ ಸಿಧುಗೆ 14 ದಿನಗಳ ನ್ಯಾಯಾಂಗ ಬಂಧನ

|
Google Oneindia Kannada News

ನವದೆಹಲಿ,ಫೆಬ್ರವರಿ 23: ಗಣರಾಜ್ಯೋತ್ಸವದ ದಿನದಂದು ರೈತರ ಪ್ರತಿಭಟನೆ ಹಿಂಸಾತ್ಮ ರೂಪವನ್ನು ತಾಳಿತ್ತು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದೀಪ್ ಸಿಧುಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಟ್ರ್ಯಾಕ್ಟರ್ ಜಾಥಾ ಹೆಸರಿನಲ್ಲಿ ಕೆಂಪು ಕೋಟೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಭಾರತಕ್ಕೆ ಅವಮಾನ ಮಾಡಿದ್ದರು.

ವಿನಾಶದತ್ತ ಭಾಜಪ: ರೈತ ಮತಗಳ ಫಸಲು ಕೊಯಿಲಿಗಾಗಿ ಕಾದಿರುವ ಇತರೆ ಪಕ್ಷಗಳುವಿನಾಶದತ್ತ ಭಾಜಪ: ರೈತ ಮತಗಳ ಫಸಲು ಕೊಯಿಲಿಗಾಗಿ ಕಾದಿರುವ ಇತರೆ ಪಕ್ಷಗಳು

ಸಾರ್ವಜನಿಕರ ಆಸ್ತಿಪಾಸ್ತಿ ನಾಶಪಡಿಸಿದ್ದರು. ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು,ಈ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ದೀಪ್ ಸುಧಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

14-Day Judicial Custody For Actor-Activist Deep Sidhu Over Republic Day Violence

ದೆಹಲಿ ಹಿಂಸಾಚಾರದಲ್ಲಿ ಪ್ರಮುಖ ಆರೋಪಿಯಾಗಿರುವ ದೀಪ್ ಸಿಧು ಹೆಚ್ಚಿನ ವಿಚಾರಣೆ ಅಗತ್ಯವಿದೆ, ಹೀಗಾಗಿ ಜಾಮೀನು ನೀಡಬಾರದು ಎಂದು ದೆಹಲಿ ಪೊಲೀಸರ ಪರ ವಕೀಲರು ವಾದಿಸಿದ್ದರು.

ಜನವರಿ 26 ರಂದು ನಡೆದ ಹಿಂಸಾಚಾರದಲ್ಲಿ ಸುಮಾರು 500ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದರು.ಸಾರ್ವಜನಿಕ ಸಾರಿಗೆ ,ಪೊಲೀಸ್ ವಾಹನಗಳು ಜಖಂಗೊಂಡಿತ್ತು.
ಫೆ.9 ರಂದು ದೀಪ್ ಸಿಧುವನ್ನು ಪಂಜಾಬ್‌ನ ಜೀಕರ್‌ಪುರದಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು, ಬಳಿಕ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಲಾಗಿತ್ತು.

ಈ ವೇಳೆ ನ್ಯಾಯಾಲಯ 7 ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ನೀಡಿತ್ತು. ಇಂದಿಗೆ 7 ದಿನದ ಪೊಲೀಸ್ ಕಸ್ಟಡಿ ಅಂತ್ಯಗೊಂಡ ಕಾರಣ ದೆಹಲಿ ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಈ ವೇಳೆ 14 ದಿನದ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಸೂಚಿಸಿದೆ.

English summary
A Delhi court has sent actor-activist Deep Sidhu to judicial custody for 14 days in connection with the Red Fort violence on the Republic Day during farmers'' tractor parade against the Centre's three new farm laws.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X