ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಂ ಕೇರ್‌ ನಿಧಿಯಿಂದ 50 ಸಾವಿರ ವೆಂಟಿಲೇಟರ್, ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?

|
Google Oneindia Kannada News

ದೆಹಲಿ, ಜೂನ್ 23: ಕೊರೊನಾ ವೈರಸ್ ಹಿನ್ನೆಲೆ ಪಿಎಂ ಕೇರ್ ಫಂಡ್ ಅಡಿ ಸಂಗ್ರಹವಾಗಿದ್ದ ಹಣವನ್ನು ಕೇಂದ್ರ ಸರ್ಕಾರ ಏನು ಮಾಡಿದೆ? ಲೆಕ್ಕ ಕೊಡಿ ಎಂದು ವಿಪಕ್ಷಗಳು ಒತ್ತಾಯಿಸಿದ್ದವು. ಇದಕ್ಕೆ ಉತ್ತರ ಎನ್ನುವಂತೆ ಬಿಜೆಪಿ ನಾಯಕರುಗಳು ಪಿಎಂ ಕೇರ್ ಫಂಡ್ ಸ್ಟಿಕ್ಕರ್ ಮುದ್ರಿತವಾಗಿರುವ ವೆಂಟಿಲೇಟರ್ ಫೋಟೋಗಳು ಹಂಚಿಕೊಂಡಿದ್ದರು.

Recommended Video

Shadab Khan, Haider Ali And Haris Rauf Test Positive For Coronavirus | Oneindia Kannada

ಪಿಎಂ ಕೇರ್ ಫಂಡ್ ಹಣದಿಂದ 50 ಸಾವಿರ ವೆಂಟಿಲೇಟರ್ ತಯಾರಿಸಲಾಗುತ್ತಿದೆ ಎಂದು ಬಿಜೆಪಿ ಮುಖಂಡರು ಹೇಳಿಕೊಂಡಿದ್ದರು. ಈ ಬಗ್ಗೆ ಸರ್ಕಾರ ಅಧಿಕೃತವಾಗಿ ಮಾಹಿತಿ ನೀಡಿರಲಿಲ್ಲ. ಇದೀಗ, ಪ್ರಧಾನಿ ಕಚೇರಿ ಈ ಕುರಿತು ಮಾಹಿತಿ ಹಂಚಿಕೊಂಡಿದೆ.

ಪಿಎಂ ಕೇರ್ ಫಂಡ್ ಲೆಕ್ಕ ಕೇಳಿದವರಿಗೆ 'ವೆಂಟಿಲೇಟರ್' ತೋರಿಸಿದ ಬಿಜೆಪಿಪಿಎಂ ಕೇರ್ ಫಂಡ್ ಲೆಕ್ಕ ಕೇಳಿದವರಿಗೆ 'ವೆಂಟಿಲೇಟರ್' ತೋರಿಸಿದ ಬಿಜೆಪಿ

50 ಸಾವಿರ ವೆಂಟಿಲೇಟರ್ ತಯಾರಿಸಲಾಗಿದ್ದು, ಅದರಲ್ಲಿ ಕೆಲವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಈಗಾಗಲೇ ವೆಂಟಿಲೇಟರ್ ಕಳುಹಿಸಿಕೊಡಲಾಗಿದೆ ಎಂದಿದೆ. ಹಾಗಾದ್ರೆ, ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಸಿಕ್ಕ ವೆಂಟಿಲೇಟರ್ ಎಷ್ಟು? ಮುಂದೆ ಓದಿ....

ವೆಂಟಿಲೇಟರ್ ತಯಾರಿಕೆಗಾಗಿ 2000 ಕೋಟಿ ವೆಚ್ಚ

ಪಿಎಂ ಕೇರ್ ಫಂಡ್ ಅಡಿ ಸಂಗ್ರಹವಾದ ಹಣದಲ್ಲಿ 2000 ಕೋಟಿಯನ್ನು ವೆಂಟಿಲೇಟರ್ ತಯಾರಿಕೆಗಾಗಿ ನೀಡಲಾಗಿದೆ ಎಂದು ಪ್ರಧಾನಿ ಕಚೇರಿ ಮಾಹಿತಿ ನೀಡಿದೆ. ಭಾರತ ಮೂಲದ ಕಂಪನಿಗಳು 50 ಸಾವಿರ ವೆಂಟಿಲೇಟರ್‌ಗಳನ್ನು ತಯಾರಿಸುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಯಾವ ಕಂಪನಿಗಳು ತಯಾರಿಸುತ್ತಿದೆ?

ಯಾವ ಕಂಪನಿಗಳು ತಯಾರಿಸುತ್ತಿದೆ?

50000 ವೆಂಟಿಲೇಟರ್‌ಗಳಲ್ಲಿ 30000 ವೆಂಟಿಲೇಟರ್‌ಗಳನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ತಯಾರಿಸುತ್ತಿದೆ. ಉಳಿದ 20000 ವೆಂಟಿಲೇಟರ್‌ಗಳಲ್ಲಿ ಆಗ್ವಾ ಹೆಲ್ತ್‌ಕೇರ್ (10000), AMTZ ಬೇಸಿಕ್ (5650), AMTZ ಹೈ ಎಂಡ್ (4000) ಮತ್ತು ಅಲೈಡ್ ಮೆಡಿಕಲ್ (350) ವೆಂಟಿಲೇಟರ್‌ಗಳನ್ನು ತಯಾರಿಸುತ್ತಿವೆ.

2923 ವೆಂಟಿಲೇಟರ್ ಸಿದ್ಧವಾಗಿದೆ

2923 ವೆಂಟಿಲೇಟರ್ ಸಿದ್ಧವಾಗಿದೆ

ಈಗಾಗಲೇ 2923 ವೆಂಟಿಲೇಟರ್‌ಗಳನ್ನು ತಯಾರಿಸಲಾಗಿದೆ. ಈ ಪೈಕಿ 1340 ವೆಂಟಿಲೇಟರ್‌ಗಳನ್ನು ಹೆಚ್ಚು ಕೊರೊನಾ ಕೇಸ್ ಹೊಂದಿರುವ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಕಳುಹಿಸಿಕೊಡಲಾಗಿದೆ. ಮಹಾರಾಷ್ಟ್ರ (245), ದೆಹಲಿ (245), ಗುಜರಾತ್ (175), ಬಿಜಾರ್ (100), ರಾಜಸ್ಥಾನ (75) ಹಾಗೂ ಕರ್ನಾಟಕಕ್ಕೆ 100 ವೆಂಟಿಲೇಟರ್ ರವಾನೆಯಾಗಿದೆ ಎಂದು ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.

1000 ಕೋಟಿ ವಲಸೆ ಕಾರ್ಮಿಕರ ಕಲ್ಯಾಣಕ್ಕೆ

1000 ಕೋಟಿ ವಲಸೆ ಕಾರ್ಮಿಕರ ಕಲ್ಯಾಣಕ್ಕೆ

2000 ಕೋಟಿ ವೆಂಟಿಲೇಟರ್‌ಗೆ ನೀಡಿದರೆ, 1000 ಕೋಟಿ ವಲಸೆ ಕಾರ್ಮಿಕರ ಕಲ್ಯಾಣಕ್ಕೆ ಅನುದಾನ ನೀಡಲಾಗಿದೆ ಎಂದು ಪ್ರಧಾನಿ ಕಚೇರಿ ಅಧಿಕೃತ ಮಾಹಿತಿ ನೀಡಿದೆ. ರಾಜ್ಯವಾರು ಲೆಕ್ಕ ಗಮನಿಸಿದರೆ ಮಹಾರಾಷ್ಟ್ರ (181 ಕೋಟಿ), ಉತ್ತರ ಪ್ರದೇಶ (103 ಕೋಟಿ), ತಮಿಳುನಾಡು(83 ಕೋಟಿ), ಗುಜರಾತ್(63 ಕೋಟಿ), ದೆಹಲಿ(55 ಕೋಟಿ), ಪಶ್ಚಿಮ ಬಂಗಾಳ(53 ಕೋಟಿ), ಬಿಹಾರ್(51 ಕೋಟಿ), ಮಧ್ಯ ಪ್ರದೇಶ(50 ಕೋಟಿ), ರಾಜಸ್ಥಾನ(50 ಕೋಟಿ), ಕರ್ನಾಟಕ (34 ಕೋಟಿ) ಸಿಕ್ಕಿದೆ.

English summary
50,000 Made in India ventillators under PM CARES Fund; So far 2923 ventilators manufactured, out of which 1340 ventilators already delivered to States: PMO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X