ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ 13 ಜಿಲ್ಲೆಗಳಲ್ಲಿ ಅತಿ ಹೆಚ್ಚು ಕೊವಿಡ್ ಸಾವು: ಆರೋಗ್ಯ ಇಲಾಖೆ

|
Google Oneindia Kannada News

ದೆಹಲಿ, ಆಗಸ್ಟ್ 8: ದೇಶದ ಒಟ್ಟು ಪ್ರಕರಣಗಳ ಪೈಕಿ 8 ರಾಜ್ಯಗಳ 13 ಜಿಲ್ಲೆಗಳಲ್ಲಿ ಶೇಕಡಾ 9ರಷ್ಟು ಕೇಸ್ ಸಕ್ರಿಯವಾಗಿದೆ. ಒಟ್ಟು ಸಾವಿನಲ್ಲಿ ಶೇಕಡಾ 14 ರಷ್ಟು 13 ಜಿಲ್ಲೆಗಳಲ್ಲಿ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಶನಿವಾರ ಸಂಜೆ ಮಾಹಿತಿ ನೀಡಿದೆ.

ದೆಹಲಿ, ಕಮ್ರೂಪ್, ಪಾಟ್ನಾ, ರಾಂಚಿ, ಅಲ್ಪುಝಾ, ಗಂಜಾಂ, ಲಕ್ನೋ, 24 ಪ್ಯಾರಗನ್ಸ್ ನಾರ್ತ್, ಹೂಗ್ಲಿ, ಹೌರಾ, ಕೋಲ್ಕತಾ, ಮತ್ತು ಮಾಲ್ಡಾಗಳಲ್ಲಿ ಶೇಕಡಾ 9 ರಷ್ಟು ಆಕ್ಟಿವ್ ಕೇಸ್ ಹಾಗೂ 14 ರಷ್ಟು ಸಾವಿನ ಪ್ರಮಾಣ ವರದಿಯಾಗಿದೆ.

ಭಾರತದಲ್ಲಿ ಶನಿವಾರದ ಬೆಳಗ್ಗಿನ ವರದಿಯಂತೆ ಶುಕ್ರವಾರ ಒಂದೇ ದಿನ 61,537 ಮಂದಿಗೆ ಕೊರೊನಾ ತಗುಲಿದ್ದು, 933 ಜನರು ಸಾವನ್ನಪ್ಪಿದ್ದರು.

Breaking: ಕರ್ನಾಟಕದಲ್ಲಿ ಇಂದು 7 ಸಾವಿರ ಕೊರೊನಾ ಕೇಸ್ ಪತ್ತೆBreaking: ಕರ್ನಾಟಕದಲ್ಲಿ ಇಂದು 7 ಸಾವಿರ ಕೊರೊನಾ ಕೇಸ್ ಪತ್ತೆ

13-districts-reporting-high-covid-19-mortality-rates-said-health-ministry

ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 20,88,612ಕ್ಕೆ ಏರಿತ್ತು. ಅದರಲ್ಲಿ 6,19,088 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೆ, 14,27,006 ಜನರು ಗುಣಮುಖರಾಗಿದ್ದರು. ಇದುವರೆಗೂ 42,518 ಮಂದಿ ಸಾವನ್ನಪ್ಪಿದ್ದಾರೆ.

ಇನ್ನು 16 ಜಿಲ್ಲೆಗಳು ಭಾರತದ ಸಕ್ರಿಯ ಪ್ರಕರಣಗಳಲ್ಲಿ 17% ನಷ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

English summary
In a statement issued on Saturday, the Union Health Ministry said that 13 districts from across eight states are reporting high Covid-19 mortalities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X