ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗುವಿನ ಹೃದಯ ಶಸ್ತ್ರ ಚಿಕಿತ್ಸೆಗೆ ಪಾಲಕರ ಹೋರಾಟ

Google Oneindia Kannada News

"ಕಳೆದ 7 ತಿಂಗಳುಗಳಿಂದ ನನ್ನ 11 ತಿಂಗಳ ಮಗಳ ಆರೋಗ್ಯ ಸಾಕಷ್ಟು ಹಾಳಾಗಿದೆ. ಅವಳು ದೀರ್ಘ ಸಮಯಗಳ ಕಾಲ ತನ್ನ ಕಣ್ಣುಗಳನ್ನು ತೆರೆದಿರಲು ಸಾಧ್ಯವಾಗುತ್ತಿಲ್ಲ. ಆಹಾರವನ್ನೂ ಮೊದಲಿನಂತೆ ಸೇವಿಸುತ್ತಿಲ್ಲ. ತಿಂದ ಆಹಾರವು ವಾಂತಿಯಾಗುತ್ತಿವೆ. ಅವಳಿಗೆ ತುರ್ತು ಹೃದಯ ಚಿಕಿತ್ಸೆಯ ಅಗತ್ಯವಿದೆ. ಆದರೆ ಈ ದುರಾದೃಷ್ಟ ತಂದೆಯ ಜೇಬಿನಲ್ಲಿ ಕೇವಲ 1000 ರೂಪಾಯಿಗಳಿವೆ. ಅವಳ ಶಸ್ತ್ರ ಚಿಕಿತ್ಸೆ ಬೇಕಾದಷ್ಟು ಹಣವನ್ನು ಹೊಂದಿಸಲು ಒದ್ದಾಡುತ್ತಿದ್ದೇನೆ. ಅವಳ ಆ ಪುಟ್ಟ ಕಣ್ಣುಗಳು ಅಸಹಾಯಕತೆಯಿಂದ ನನ್ನನ್ನು ನೋಡುವಾಗ ಏನು ಮಾಡಲು ಆಗುತ್ತಿಲ್ಲ ಎನ್ನುವ ಅಸಾಹಯಕತೆ ನನ್ನನ್ನು ತಿವಿದಂತಾಗುತ್ತದೆ. ತಂದೆಯಾಗಿ ಮಗಳ ಆರೋಗ್ಯ ಸುಧಾರಣೆ ಮಾಡಿಸುವ ಸಾಮರ್ಥ್ಯವಿಲ್ಲ ಎನ್ನುವ ಭಾವನೆ ನನ್ನನ್ನು ಕಾಡುತ್ತಿದೆ" ಎಂದು ಕಣ್ಣೀರಿಡುತ್ತಿದ್ದಾರೆ ಶಿವಾನಿಯ ತಂದೆ ಶಿವಕುಮಾರ.

ಶಿವಾನಿಗೆ ಸಹಾಯ ಮಾಡಲು ಇಲ್ಲಿ ಕ್ಲಿಕ್ಕಿಸಿ

ಶಿವ ಮತ್ತು ಆಶಾ ಅವರು ನವೆಂಬರ್ 2017ರಂದು ಸುಂದರವಾದ ಹೆಣ್ಣುಮಗಳ ಜನನದಿಂದ ಸಂತೋಷಗೊಂಡಿದ್ದರು. ಸುಂದರವಾದ ಮಗು ತಾಯಿ ಆಶಾ ಅವರ ಮಡಿಲಲ್ಲಿ ಮಲಗಿರುವಾಗ ಬಹಳ ಸಂತೋಷದಿಂದ ಕಣ್ಣಿನಲ್ಲಿ ನೀರು ತುಂಬಿಕೊಂಡಿದ್ದವು. ಬೂದು ಬಣ್ಣದ ಕಣ್ಣಿನ ತಮ್ಮ ಮಗಳು ಸುಂದರಿ ಹಾಗೂ ಅದೃಷ್ಟವಂತೆ ಎಂದು ಸಂತೋಷಪಟ್ಟಿದ್ದರು.

11-Months-Old Fights A Deadly Heart Disease, help to save the child

ಶೀಘ್ರದಲ್ಲಿಯೇ ಅವಳು ಅನಾರೋಗ್ಯಕ್ಕೆ ಒಳಗಾಗಲು ಆರಂಭಿಸಿದಳು. ಆಗಾಗ ಶೀತ ಮತ್ತು ಜ್ವರ ಕಾಡಲು ಪ್ರಾರಂಭವಾಯಿತು. ನಂತರ ತಿಂಗಳುಗಳ ಕಾಲ ಔಷಧಿಯನ್ನು ನೀಡುತ್ತಲೇ ಬಂದೆವು. ಆದರೂ ಜ್ವರವು ಕಡಿಮೆಯಾಗಲೇ ಇಲ್ಲ. ಅಲ್ಲಿಯೇ ಇದ್ದ ಸಾಕಷ್ಟು ಸ್ಥಳೀಯ ವೈದ್ಯರಲ್ಲಿ ಪರೀಕ್ಷೆಗೆ ಒಳಪಡಿಸಿದ್ದರಾದರೂ ಯಾವುದೇ ಫಲಕಾರಿ ಚಿಕಿತ್ಸೆಗಳು ದೊರೆಯಲಿಲ್ಲ. ನಂತರ ಒಬ್ಬ ವೈದ್ಯರ ಔಷಧಿಯಲ್ಲಿ ಸ್ವಲ್ಪ ಗುಣಮುಖಳಾದಳು.

ಶಿವಾನಿ 8ನೇ ತಿಂಗಳಿನಲ್ಲಿ ಇರುವಾಗ ಅವಳ ಜ್ವರವು ನ್ಯುಮೋನಿಯಾಕ್ಕೆ ತಿರುಗಿತು. ನಂತರ ದೆಹಲಿಯ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಆಗಲೂ ಜ್ವರವು ಕಡಿಮೆ ಆಗಲಿಲ್ಲ. ವೈದ್ಯರು ಕೆಲವು ಸೂಕ್ತ ತಪಾಸಣೆ ಮಾಡುವುದರ ಮೂಲಕ ಅವಳಿಗೆ ಹೃದಯದ ತೊಂದರೆ ಇದೆ ಎಂದು ಖಚಿತಪಡಿಸಿದರು. ಪುಟ್ಟ ಶಿವಾನಿಯ ಹೃದಯದಲ್ಲಿ ಒಂದು ರಂಧ್ರವಿದೆ. ಈ ಸುದ್ದಿ ಕೇಳಿ ಸಾಕಷ್ಟು ಆಘಾತಕ್ಕೆ ಒಳಗಾದೆವು. ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದೇ ತಿಳಿಯದಾಯಿತು.

11-Months-Old Fights A Deadly Heart Disease, help to save the child

ಅವಳು ಪ್ರಪಂಚವನ್ನು ಸರಿಯಾಗಿ ಕಣ್ತೆರದು ನೋಡದ ಮಗು. ಅವಳಿಗೆ ಈ ಸಮಸ್ಯೆ ಉಂಟಾದ ಬಳಿಕ ಕೈಕಾಲು ಹಾಗೂ ದೇಹವೆಲ್ಲಾ ನೀಲಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿತು. ಅವಳ ಹೃದಯವು ಸೂಕ್ತವಾಗಿ ಕೆಲಸ ನಿರ್ವಹಿಸದೆ ಇರುವ ಕಾರಣದಿಂದ ಈ ಸಮಸ್ಯೆಗಳು ಉಂಟಾದವು. ಅಲ್ಲದೆ ಸರಿಯಾಗಿ ಉಸಿರಾಡಲು ಸಹ ಸಾಕಷ್ಟು ಕಷ್ಟಪಡುತ್ತಿದ್ದಳು. ಈ ಭೀಕರವಾದ ಸಮಸ್ಯೆಗೆ ಒಳಗಾದ ನಮ್ಮ ಶಿವಾನಿಯನ್ನು ಕಾಪಾಡುವುದು ಹೇಗೆ ಎನ್ನುವ ಚಿಂತೆ ಕಾಡುತ್ತಿದೆ ಎಂದು ಶಿವಾನಿ ತಾಯಿ ಆಶಾ ಕಣ್ಣೀರು ಇಡುತ್ತಿದ್ದಾರೆ.

ಶಿವಾನಿಯ ಆರೋಗ್ಯ ಸಾಕಷ್ಟು ಹದಗೆಟ್ಟಿದೆ. ಅವಳ ಆರೋಗ್ಯ ಸುಧಾರಣೆಗೆ ಹೃದಯದ ತುರ್ತು ಚಿಕಿತ್ಸೆಯೊಂದೇ ಪರಿಹಾರ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಶಸ್ತ್ರ ಚಿಕಿತ್ಸೆಯ ಒಟ್ಟು ಮೊತ್ತ 3 ಲಕ್ಷ ರೂಪಾಯಿ. ಅಲ್ಲದೆ ಚಿಕಿತ್ಸೆಯ ನಂತರ ಔಷಧಿಗೆ ಶಿವ ಮತ್ತು ಆಶಾ ಹಣವನ್ನು ಹೊಂದಿಸಬೇಕಿದೆ. ಮಗಳ ಆರೈಕೆಗೆ ಒದಗಿಸಲು ಸಾಕಷ್ಟು ಹಣ ಇಲ್ಲದಿರುವುದು ಹಾಗೂ ತಮ್ಮ ಕಷ್ಟಕರವಾದ ಆರ್ಥಿಕ ಸ್ಥಿತಿಯಿಂದ ಚಿಂತಿತರಾಗಿದ್ದಾರೆ.

11-Months-Old Fights A Deadly Heart Disease, help to save the child

ಶಿವಾನಿಯು ಆಮ್ಲಜನಕವನ್ನು ತೆಗೆದುಕೊಂಡು ಉಸಿರಾಡಲು ಕಷ್ಟಪಡುತ್ತಿದ್ದಾಳೆ. ಅವಳ ಚಿಕಿತ್ಸೆ ಎಷ್ಟು ಬೇಗ ಆಗುವುದೋ ಅಷ್ಟು ಬೇಗ ಗುಣಮುಖಳಾಗುತ್ತಾಳೆ. ಆದರೆ ಅವಳ ಚಿಕಿತ್ಸೆಗೆ ಬೇಕಾದ 3 ಲಕ್ಷ ರೂಪಾಯಿ ಭರಿಸಲು ಪಾಲಕರಿಂದ ಸಾಧ್ಯವಾಗುತ್ತಿಲ್ಲ.

"ನಾನು ಕೂಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ನನಗೆ 10,000 ತಿಂಗಳ ಆದಾಯವಿದೆ. ದೆಹಲಿಯ ಅಲಿ ವಿಹಾರ್ ಅಲ್ಲಿ ವಾಸವಿದ್ದೇವೆ. ಮನೆಯಲ್ಲಿ ದುಡಿಯುವ ಏಕೈಕ ವ್ಯಕ್ತಿ ನಾನು. ನನ್ನ ತಾಯಿ, ಹೆಂಡತಿ ಮತ್ತು ನನ್ನ ಮಗಳು ಇದ್ದೇವೆ. ಮಗಳ ಚಿಕಿತ್ಸೆಗೆ ಹಣ ಉಳಿಸಲು ದಿನದಲ್ಲಿ ಒಂದು ಹೊತ್ತು ಊಟವನ್ನು ಮಾಡಿ ಉಳಿಸಲು ಪ್ರಯತ್ನಿಸುತ್ತಿದ್ದೇವೆ. ಮಗಳು ಪ್ರತಿ ನಿಮಿಷವು ಸಾವಿನ ಕಡೆಗೆ ಬಾಗುತ್ತಿದ್ದಾಳೆ. ಇವುಗಳನ್ನು ನನ್ನಿಂದ ನೋಡಲಾಗುತ್ತಿಲ್ಲ" ಎಂದು ಗದ್ಗಿತರಾಗುತ್ತಾರೆ ಶಿವ ಕುಮಾರ.

11-Months-Old Fights A Deadly Heart Disease, help to save the child

ಶಿವಾನಿಯ ತಪಾಸಣೆ ಹಾಗೂ ಆರೈಕೆಗಾಗಿ ಈಗಾಗಲೇ ನಮ್ಮಲ್ಲಿದ್ದ ಉಳಿತಾಯದ ಹಣ ಹಾಗೂ ಹೆಂಡತಿಯ ಆಭರಣಗಳನ್ನು ಮಾರಿದ್ದೇವೆ. ಚಿಕಿತ್ಸೆಗೆ ಬೇಕಷ್ಟು ಹಣವನ್ನು ನಮ್ಮಿಂದ ಹೊಂದಿಸಲು ಆಗುತ್ತಿಲ್ಲ ಎಂದು ಅಸಾಯಕರಾಗಿ ಕಣ್ಣೀರು ಇಡುತ್ತಿದ್ದಾರೆ ನತದೃಷ್ಟ ದಂಪತಿ.

11-Months-Old Fights A Deadly Heart Disease, help to save the child

ನೀವು ಹೇಗೆ ಸಹಾಯ ಮಾಡಬಹುದು?

ಕಳೆದ ತಿಂಗಳಿಂದ ತಮ್ಮ ಮಗಳನ್ನು ಅನಾರೋಗ್ಯದಿಂದ ಉಳಿಸಿಕೊಳ್ಳಲು ಶಿವ ಮತ್ತು ಆಶಾ ಸಾಕಷ್ಟು ಕಷ್ಟಪಡುತ್ತಿದ್ದಾರೆ. ಮಗಳಿಗೆ ತುರ್ತು ಹೃದಯ ಚಿಕಿತ್ಸೆ ಮಾಡಿಸದೆ ಹೋದರೆ ಆರೋಗ್ಯ ಇನ್ನಷ್ಟು ಉಲ್ಭಣವಾಗುವುದು ಎಂದು ವೈದ್ಯರು ಸೂಚಿಸಿದ್ದಾರೆ. ಅಸಹಾಯಕರಾದ ಪಾಲಕರು ಧನ ಸಹಾಯಕ್ಕಾಗಿ ಮಂದಿಯ ಮುಂದೆ ಕೈಚಾಚುತ್ತಿದ್ದಾರೆ. ಹಾಗಾಗಿ ನಿಮ್ಮ ಕೊಡುಗೆಯ ಸಹಾಯ ಇಲ್ಲದೆ ಅವರ ಕುಟುಂಬದ ಬೆಳಕು ಬೆಳಗದು. ಆ ಪುಟ್ಟ ಮಗುವಿನ ಚಿಕಿತ್ಸೆಗೆ ನಿಮ್ಮ ಕೈಲಾದ ಸಹಾಯ ಮಾಡಿ. ಒಂದು ಪುಟ್ಟ ಜೀವವನ್ನು ಉಳಿಸಿದ ಪುಣ್ಯ ದೊರೆಯುವುದು. ನೀವು ವಾಟ್ಸ್ ಆಪ್, ಫೇಸ್ ಬುಕ್ ಮೂಲಕ ನಿಮ್ಮ ಸ್ನೇಹಿತರು ಹಾಗೂ ಬಂಧುಗಳೊಂದಿಗೆ ಹಂಚಿಕೊಂಡರೆ ಅವರಿಗೆ ದೊಡ್ಡ ಸಹಾಯ ಮಾಡಿದಂತಾಗುವುದು. ನಿಮ್ಮ ಅಲ್ಪ ಸಹಾಯವು ಅವರಿಗೊಂದು ಜೀವವನ್ನು ತಂದುಕೊಟ್ಟಂತಾಗುವುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X