ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಹಿಂಸಾಚಾರ; ಚರಂಡಿಯಲ್ಲಿ 11 ಶವಗಳು ಪತ್ತೆ

|
Google Oneindia Kannada News

ನವದೆಹಲಿ, ಮಾರ್ಚ್ 03 : ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಳಿಕ ದೆಹಲಿಯ ಚರಂಡಿಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಕಳೆದ 5 ದಿನಗಳಲ್ಲಿ ಚರಂಡಿಗಳಿಂದ 11 ಶವಗಳನ್ನು ಹೊರತೆಗೆಯಲಾಗಿದೆ. ಇವರು ಗಲಭೆಯಲ್ಲಿ ಮೃತಪಟ್ಟವರು ಎಂದು ಶಂಕಿಸಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧ ಹೋರಾಟಗಾರರ ನಡುವೆ ಆರಂಭವಾದ ಘರ್ಷಣೆ ನಂತರ ಕೋಮುಗಲಭೆ ಸ್ವರೂಪ ಪಡೆದಿತ್ತು. ಇದುವರೆಗೂ ಹಿಂಸಾಚಾರದಲ್ಲಿ 47 ಜನರು ಬಲಿಯಾಗಿದ್ದಾರೆ. ಗಲಭೆಗೆ ಸಂಬಂಧಿಸಿದಂತೆ 167 ಎಫ್‌ಐಆರ್‌ಗಳನ್ನು ದಾಖಲು ಮಾಡಲಾಗಿದೆ.

ದೆಹಲಿ ಗಲಭೆಯಲ್ಲಿ ಮನೆ ಕಳೆದುಕೊಂಡ ಯೋಧನಿಗೆ ಬಿಎಸ್‌ಎಫ್ ನೆರವುದೆಹಲಿ ಗಲಭೆಯಲ್ಲಿ ಮನೆ ಕಳೆದುಕೊಂಡ ಯೋಧನಿಗೆ ಬಿಎಸ್‌ಎಫ್ ನೆರವು

ಕಳೆದ 5 ದಿನಗಳಲ್ಲಿ ಚರಂಡಿಗಳಿಂದ 11 ಶವಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶವಗಳು ಕೊಳೆತು ಹೋಗಿದ್ದು ಡಿಎನ್‌ಎ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಪರೀಕ್ಷೆ ಬಳಿಕ ಮೃತಪಟ್ಟವರ ವಿವರಗಳು ತಿಳಿಯಲಿವೆ. ಎಲ್ಲರೂ ಗಲಭೆಯಿಂದಾಗಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ದೆಹಲಿಯ ಗಲಭೆ; ಬಿಜೆಪಿ ನಾಯಕನ ಮನೆಗೆ ಬೆಂಕಿದೆಹಲಿಯ ಗಲಭೆ; ಬಿಜೆಪಿ ನಾಯಕನ ಮನೆಗೆ ಬೆಂಕಿ

11 Bodies Found At Northeast Delhi Drains

ದೆಹಲಿ ಪೊಲೀಸರು ಚರಂಡಿಯಲ್ಲಿ ಮೊದಲು ಗುಪ್ತಚರ ದಳದ ಅಧಿಕಾರಿ ಅಂಕಿತ್ ಶರ್ಮಾ ಶವ ಪತ್ತೆಯಾಗಿತ್ತು. ಅವರ ಕುಟುಂಬಸ್ಥರು ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ದೆಹಲಿ ಗಲಭೆ; 167 ಎಫ್‌ಐಆರ್, 885 ಜನರ ಬಂಧನ ದೆಹಲಿ ಗಲಭೆ; 167 ಎಫ್‌ಐಆರ್, 885 ಜನರ ಬಂಧನ

ಭಾನುವಾರ ಮತ್ತು ಸೋಮವಾರ ಪೊಲೀಸರಿಗೆ ಚರಂಡಿಯಲ್ಲಿ 5 ಶವಗಳು ಸಿಕ್ಕಿವೆ. ಆದರೆ, ಶವಗಳ ಗುರುತು ಪತ್ತೆಯಾಗಿಲ್ಲ. ದೆಹಲಿಯಲ್ಲಿ ಗಲಭೆ ನಡೆಯುವಾಗ ಸಿಕ್ಕ-ಸಿಕ್ಕವರ ಮೇಲೆ ಹಲ್ಲೆ ನಡೆಸಲಾಗಿದೆ.

English summary
In last five days at least 11 bodies found at Northeast Delhi drains and it is suspected that these are persons who lost their lives during the communal riots.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X