ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುದ್ವಾರದಲ್ಲಿ ಅಪಹೃತರಾಗಿದ್ದ ನಿದಾನ್ ಸಿಂಗ್ ಸೇರಿ 11 ಮಂದಿ ದೆಹಲಿಗೆ

|
Google Oneindia Kannada News

ನವದೆಹಲಿ, ಜುಲೈ 27: ಗುರುದ್ವಾರದಿಂದ ಅಪಹೃತವಾಗಿದ್ದ ನಿದಾನ್ ಸಿಂಗ್ ಸೇರಿ ಸಿಖ್ ಸಮುದಾಯದ ಒಟ್ಟು 11 ಮಂದಿ ದೆಹಲಿಗೆ ಬಂದಿದ್ದಾರೆ. ಅಫ್ಘಾನಿಸ್ತಾನದ ಸಿಖ್ ಸಮುದಾಯದ 11 ಮಂದಿಗೆ ಕಾಬೂಲ್‌ನಲ್ಲಿರುವ ಭಾರತೀಯ ರಾಯಬಾರಿ ಕಚೇರಿಯು ಅಲ್ಪಾವಧಿಯ ವೀಸಾವನ್ನು ನೀಡಿದೆ.

ಕಳೆದ ತಿಂಗಳು ಗುರುದ್ವಾರದ ಪಾಕ್ತಿಯಾ ಪ್ರದೇಶದಲ್ಲಿ ಅಪಹೃತರಾದ ನಿದನ್ ಸಿಂಗ್ ಸಚ್‌ದೇವಾ ಅವರನ್ನು ಕೂಡ ಕರೆತರಲಾಗುತ್ತಿದೆ. ಅಫ್ಘಾನಿಸ್ತಾನದಲ್ಲಿರುವ ಹಿಂದೂ ಹಾಗೂ ಸಿಖ್ಖರಿಗೆ ಜೀವಭಯವಿದ್ದು, ಅವರನ್ನು ಭಾರತಕ್ಕೆ ಕರೆಸಿಕೊಳ್ಳಲು ಭಾರತೀಯ ವಿದೇಶಾಂಗ ಸಚಿವಾಲಯ ಮುಂದಾಗಿದೆ.

ಸಂಪರ್ಕದಲ್ಲಿತ್ತು.ಸಿಖ್ಖರಿಗೆ ಇಮ್ರಾನ್ ಖಾನ್ ನೀಡಿದ ಭರವಸೆ ಏನು?ಸಂಪರ್ಕದಲ್ಲಿತ್ತು.ಸಿಖ್ಖರಿಗೆ ಇಮ್ರಾನ್ ಖಾನ್ ನೀಡಿದ ಭರವಸೆ ಏನು?

ಕಾಬುಲ್‌ನಲ್ಲಿರುವ ಗುರುದ್ವಾರದ ಮೇಲೆ ದಾಳಿ ನಡೆಸಿ 25 ಮಂದಿಯನ್ನು ಹತ್ಯೆ ಮಾಡಿದ್ದರು. ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಭಾರತ ದೂರಿದೆ. ಅಫ್ಘಾನಿಸ್ತಾನದಲ್ಲಿರುವ ಸಿಖ್ಖರು ಹಾಗೂ ಹಿಂದೂಗಳಿಗೆ ನೆಲೆ ಕಲ್ಪಿಸುವಂತೆ ಸಿಂಗ್ ಸಮುದಾಯ ಭಾರತ ಸರ್ಕಾರಕ್ಕೆ ಮನವಿ ಮಾಡಿದೆ.

11 Afghan Sikhs Kidnapped From Gurdwara Reach Delhi

ಒಟ್ಟು ಅಫ್ಘಾನಿಸ್ತಾನದಲ್ಲಿ ಸಿಖ್ ಹಾಗೂ ಹಿಂದೂಗಳು ಸೇರಿ 2.50 ಲಕ್ಷ ಜನರಿದ್ದಾರೆ.ಸುಮಾರು ಒಂದು ತಿಂಗಳ ಹಿಂದೆ ಪೂರ್ವ ಅಫ್ಘಾನಿಸ್ತಾನದ ಪಾಕ್ಟಿಕಾ ಪ್ರಾಂತ್ಯದ ಗುರುದ್ವಾರದಲ್ಲಿ ತಾಲಿಬಾನ್ ಉಗ್ರರಿಂದ ಅಪಹರಿಸಲ್ಪಟ್ಟಿದ್ದ ಅಫ್ಘಾನ್ ಸಿಖ್ ನಿದಾನ್ ಸಿಂಗ್ ಸಚ್ ದೇವ್ ಅವರನ್ನು ರಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.

ನಿದಾನ್ ಸಿಂಗ್ ಅಫ್ಘಾನಿಸ್ತಾನದ ಚಮ್ಕಾನಿಯ ಥಾಲಾ ಶ್ರೀ ಗುರು ನಾನಕ್ ಸಾಹಿಬ್ ಗುರುದ್ವಾರದಲ್ಲಿ ಸೇವಾ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ನಾಲ್ವರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಿಂಗ್ ಅವರನ್ನು ಅಪಹರಿಸಿಕೊಂಡು ಹೋಗಿರುವುದಾಗಿ ವರದಿ ವಿವರಿಸಿದೆ.

ಅಫ್ಘಾನ್ ಪ್ರಜೆಯಾಗಿರುವ ನಿದಾನ್ ಸಿಂಗ್ (55ವರ್ಷ), ಕಳೆದ ಕೆಲವು ವರ್ಷಗಳಿಂದ ದೆಹಲಿಯಲ್ಲಿ ಪತ್ನಿ, ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳ ಜತೆ ವಾಸವಾಗಿದ್ದರು. 1992ರಲ್ಲಿ ಅಫ್ಘಾನಿಸ್ತಾನದಲ್ಲಿ ತಲೆದೋರಿದ್ದ ಸಾಮಾಜಿಕ ಅಶಾಂತಿ, ಗಲಭೆಯಿಂದಾಗಿ ದೆಹಲಿಗೆ ಆಗಮಿಸಿ ನಿರಾಶ್ರಿತ ಶಿಬಿರದಲ್ಲಿದ್ದರು.

ಪಾಕ್ಟಿಯಾ ಪ್ರಾಂತ್ಯ ತಾಲಿಬಾನ್ ಉಗ್ರರ ಸುರಕ್ಷಿತ ತಾಣವಾಗಿದ್ದು, ಹಕ್ಕಾನಿ ನೆಟ್ ವರ್ಕ್ ಕೂಡಾ ಕಾರ್ಯಾಚರಿಸುತ್ತಿದೆ ಎಂದು ವರದಿ ತಿಳಿಸಿದೆ. ನಿದಾನ್ ಸಿಂಗ್ ದೆಹಲಿಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂದು ವರದಿ ಹೇಳಿದೆ.

ನಿದಾನ್ ಸಿಂಗ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದ್ದು, ಸಿಂಗ್ ರಕ್ಷಣೆಗಾಗಿ ಭಾರತ ಸರ್ಕಾರ ಅಫ್ಘಾನ್ ಸರ್ಕಾರದ ಜತೆ ನಿರಂತರ ಸಂಪರ್ಕದಲ್ಲಿತ್ತು.

English summary
Eleven members of Sikh community from Afghanistan, who were granted short-term visas by Indian Embassy in Kabul, including Nidan Singh Sachdeva, who was kidnapped from a gurdwara in Paktia province last month, touched down in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X