ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್‌: ರಿಯಲ್ ಎಸ್ಟೇಟ್‌ ಉದ್ಯಮಿಗಳ ಮನೆಯಲ್ಲಿ ಐಟಿ ಶೋಧ; 11.88 ಕೋಟಿ ರೂ ಪತ್ತೆ

|
Google Oneindia Kannada News

ನವದೆಹಲಿ, ಮಾರ್ಚ್ 31: ಹೈದರಾಬಾದ್‌ನ ಇಬ್ಬರು ರಿಯಲ್ ಎಸ್ಟೇಟ್ ಉದ್ಯಮಿಗಳ ಮನೆಯಲ್ಲಿ ಬುಧವಾರ ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯ ನಡೆಸಿದ್ದು, ದಾಖಲೆಯಿಲ್ಲದ 11.88 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ.

ಹೈದರಾಬಾದ್‌ನ ಯಾದಗಿರಿಗುಟ್ಟವಿನಲ್ಲಿ ಇಲಾಖೆ ಶೋಧ ಕಾರ್ಯ ಕೈಗೊಂಡಿದ್ದು, ಈ ವೇಳೆ 11.88 ಕೋಟಿ ರೂಗಳೊಂದಿಗೆ 1.93 ಕೋಟಿ ಮೌಲ್ಯದ ಚಿನ್ನಾಭರಣಗಳು ದೊರೆತಿರುವುದಾಗಿ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ತಮಿಳುನಾಡು; ಎಐಎಡಿಎಂಕೆ ಶಾಸಕರ ಚಾಲಕನೂ ಕೋಟ್ಯಧಿಪತಿ!ತಮಿಳುನಾಡು; ಎಐಎಡಿಎಂಕೆ ಶಾಸಕರ ಚಾಲಕನೂ ಕೋಟ್ಯಧಿಪತಿ!

ಈ ರಿಯಲ್ ಎಸ್ಟೇಟ್ ಉದ್ಯಮಿಗಳು ಅಪಾರ್ಟ್‌ಮೆಂಟ್ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದರು ಎನ್ನಲಾಗಿದೆ. ಶೋಧ ಕಾರ್ಯಾಚರಣೆ ವೇಳೆ ಹಲವು ದಾಖಲೆಗಳು, ಕೈಬರಹದ ಪುಸ್ತಕಗಳು, ಒಪ್ಪಂದ ದಾಖಲೆಗಳು ಪತ್ತೆಯಾಗಿದ್ದು, ಅನಧಿಕೃತ ಹಣ ವ್ಯವಹಾರ ನಡೆದಿರುವುದನ್ನು ಇವೆಲ್ಲ ಸೂಚಿಸಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

11.88 Crore Cash Seized In IT Dept Search At Hyderabad

ವಿಶೇಷ ಸಾಫ್ಟ್‌ವೇರ್ ಅಪ್ಲಿಕೇಷನ್ ಹಾಗೂ ಇನ್ನಿತರೆ ವಿದ್ಯುನ್ಮಾನ ಗ್ಯಾಜೆಟ್‌ಗಳನ್ನು ಬಳಸಿ ಮಾಹಿತಿ ಸಂಗ್ರಹಿಸಿದ್ದು, ಭೂಮಿ ಖರೀದಿ ಹಾಗೂ ರಿಯಲ್ ಎಸ್ಟೇಟ್ ಸಂಬಂಧಿ ವ್ಯವಹಾರಕ್ಕೆ ನೋಂದಾಯಿತ ಮೌಲ್ಯಕ್ಕಿಂತ ಇವರು ಹೆಚ್ಚಿನ ಹಣ ಪಡೆಯುತ್ತಿದ್ದರು ಎಂದು ತಿಳಿಸಿದೆ.

English summary
11.88 crore and gold jewellary worth 1.93 crore seized in IT Dept search in hyderabad
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X