ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರುತ್ತಿದೆ 'ಅಚ್ಛೇ ದಿನ್' : ಈ ವರ್ಷ 10 ಲಕ್ಷ ಉದ್ಯೋಗ

By Kiran B Hegde
|
Google Oneindia Kannada News

ನವದೆಹಲಿ, ಜ. 2: ನರೇಂದ್ರ ಮೋದಿ ಪಠಿಸುತ್ತಿದ್ದ 'ಅಚ್ಛೇ ದಿನ್' ಮಂತ್ರ ಕಾರ್ಪೊರೇಟ್ ಉದ್ಯೋಗ ಆಕಾಂಕ್ಷಿಗಳ ಪಾಲಿಗೆ 2015ರಲ್ಲಿ ನಿಜವಾಗುವ ಸಂಭವನೀಯತೆ ಕಾಣುತ್ತಿದೆ.

ಭಾರತದ ಉದ್ಯಮವಲಯದಲ್ಲಿ ಈ ವರ್ಷ ಸುಮಾರು 10 ಲಕ್ಷ ಉದ್ಯೋಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ಜೊತೆಗೆ ವಿವಿಧ ಕಂಪನಿಗಳು ಅತ್ಯುತ್ತಮ ಕಾರ್ಯನಿರ್ವಹಣೆ ತೋರಿದ ಉದ್ಯೋಗಿಗಳಿಗೆ ಶೇ. 40ರಷ್ಟು ಸಂಬಳ ಏರಿಸುವ ಯೋಚನೆಯಲ್ಲಿವೆ.

2014ರಲ್ಲಿ ಒಟ್ಟೂ ಸಂಬಳ ಏರಿಕೆ ಸುಮಾರು ಶೇ. 10ರಿಂದ 12ರಷ್ಟಿತ್ತು. ಆದರೆ, ಈ ವರ್ಷ ಸುಮಾರು ಶೇ. 15ರಿಂದ 20ರಷ್ಟು ಸಿಗುವ ಅಂದಾಜಿದೆ. ಅದರಲ್ಲಿಯೂ ಇ ಕಾಮರ್ಸ್ ಕ್ಷೇತ್ರದಲ್ಲಿ ಅತ್ಯುತ್ತಮ ಸಂಬಳ ಏರಿಕೆ ನಿರೀಕ್ಷೆ ಕಂಡುಬಂದಿದೆ. [ಪ್ರತಿಭಾನ್ವಿತರ ಸೆಳೆಯಲು ಸಂಬಳ ಹೆಚ್ಚಳ]

job

ಕಾರಣವೇನು? : ಐಟಿ, ಇ ಕಾಮರ್ಸ್, ಬ್ಯಾಂಕಿಂಗ್, ರಿಟೇಲ್ ವಲಯದಲ್ಲಿನ ಅನೇಕ ಕಂಪನಿಗಳು ಭಾರೀ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮುಂದಾಗಿವೆ. ಈ ಯೋಚನೆಗೆ ಮಾನವ ಸಂಪನ್ಮೂಲ ತಜ್ಞರು ಕೂಡ ದನಿಗೂಡಿಸಿದ್ದಾರೆ.

ಇದಕ್ಕೆಲ್ಲ ಕಾರಣ ಉದ್ಯಮ ವಲಯದಲ್ಲಿ ಕಂಡುಬಂದಿರುವ ಹುರುಪು ಹಾಗೂ ಆತ್ಮವಿಶ್ವಾಸ. ದೇಶದ ಜಿಡಿಪಿ ಅಭಿವೃದ್ಧಿ ದರ ಶೇ. 5.5ರಷ್ಟು ಹೆಚ್ಚಳವಾಗಿರುವುದು, ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ 'ಮೇಕ್ ಇನ್ ಇಂಡಿಯಾ' ಯೋಜನೆ ಈ ಬೆಳವಣಿಗೆಗೆ ಕಾರಣ ಎಂದು ಮಾರುಕಟ್ಟೆ ತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. [ಟಿಸಿಎಸ್ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್]

ಸಮೀಕ್ಷೆ : ಬೇಡಿಕೆಯಿರುವ ಉದ್ಯೋಗಗಳ ಕುರಿತು MyHiringClub.com ವೆಬ್ ಸೈಟ್ ಸಮೀಕ್ಷೆ ನಡೆಸಿದೆ. "2015ನೇ ವರ್ಷ ಉದ್ಯೋಗಾಕಾಂಕ್ಷಿಗಳಿಗೆ ಧನಾತ್ಮಕವಾಗಿದೆ. ವಿವಿಧ ವಲಯಗಳಲ್ಲಿ ಸುಮಾರು 9.5 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗುವ ಅಂದಾಜಿದೆ" ಎಂದು ವೆಬ್ ಸೈಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ. [80 ಲಕ್ಷ ಉದ್ಯೋಗ ಅವಕಾಶ ಗುರಿ]

ಇದಕ್ಕೆ ದನಿಗೂಡಿಸಿರುವ ಜಾಗತಿಕ ನಿರ್ವಹಣೆ ಸಲಹೆಗಾರರರಾದ HayGroup ಮತ್ತು Aon Hewitt ವೆಬ್ ಸೈಟ್‌ಗಳು "ಭಾರತೀಯ ಕಂಪನಿಗಳು ಈ ವರ್ಷ ಸುಮಾರು ಶೇ. 10ರಿಂದ 18ರಷ್ಟು ಸಂಬಳ ಏರಿಕೆ ಮಾಡಲಿವೆ" ಎಂದು ಅಭಿಪ್ರಾಯಪಟ್ಟಿವೆ.

ಕೌಶಲ್ಯ, ವೃತ್ತಿ ನೈಪುಣ್ಯತೆ ಹಾಗೂ ಅನುಭವ ಇರುವ ಉದ್ಯೋಗಿಗಳಿಗೆ ಹೆಚ್ಚು ಮೌಲ್ಯ ಬರಲಿದೆ ಎಂದು ಹೇಳಿವೆ.

English summary
2015 may be a bumper year for the job market, with India Inc planning to create near 10 lakh new jobs and dole out pay hikes of up to 40 per cent for best performers. The average salary increments may be in the range of 15-20 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X