ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ: ಕೊರೊನಾ ಲಸಿಕೆ ಪಡೆದ 51 ಮಂದಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ

|
Google Oneindia Kannada News

ದೆಹಲಿ, ಜನವರಿ 17: ಕೊರೊನಾ ಲಸಿಕೆ ವಿತರಣಾ ಅಭಿಯಾನದಲ್ಲಿ ಲಸಿಕೆ ಪಡೆದಿರುವ 51 ಮಂದಿಗೆ ದೇಹದಲ್ಲಿ ಅಲರ್ಜಿಯಂತಹ ಅಡ್ಡ ಪರಿಣಾಮಗಳು ಉಂಟಾಗಿದೆ.

ಓರ್ವನನ್ನು ಏಮ್ಸ್‌ ಆಸ್ಪತ್ರೆಯ ಐಸಿಯುನಲ್ಲಿರಿಸಲಾಗಿದೆ. ಚರಕ್ ಆಸ್ಪಯತ್ರೆಯಲ್ಲಿ ಎರಡು ಪ್ರಕರಣಗಳು, ರೈಲ್ವೆ ಆಸ್ಪತ್ರೆಯಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ. ದೆಹಲಿಯ ದಕ್ಷಿಣ, ನೈಋತ್ಯ ಭಾಗದಲ್ಲಿ 11ಮಂದಿಗೆ ಅಡ್ಡ ಪರಿಣಾಮ ಉಂಟಾಗಿದೆ.

ಕೊರೊನಾ ಲಸಿಕೆ ಅಭಿಯಾನ: ಕೊಡಗು ಶೇ 84, ರಾಜ್ಯದಲ್ಲಿ 62% ಪೂರ್ಣಕೊರೊನಾ ಲಸಿಕೆ ಅಭಿಯಾನ: ಕೊಡಗು ಶೇ 84, ರಾಜ್ಯದಲ್ಲಿ 62% ಪೂರ್ಣ

ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೊವಾಕ್ಸಿನ್ ಲಸಿಕೆ ಹಾಕಿಸಿಕೊಂಡ ಭದ್ರತಾ ಸಿಬ್ಬಂದಿಗೆ ಅಲರ್ಜಿ ಕಾಣಿಸಿಕೊಂಡು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.

 ಕೋಲ್ಕತ್ತಾದಲ್ಲಿ ನರ್ಸ್‌ ಆರೋಗ್ಯದಲ್ಲಿ ಏರುಪೇರು

ಕೋಲ್ಕತ್ತಾದಲ್ಲಿ ನರ್ಸ್‌ ಆರೋಗ್ಯದಲ್ಲಿ ಏರುಪೇರು

ಕೋಲ್ಕತ್ತಾದಲ್ಲಿ 35 ವರ್ಷದ ನರ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದು ಕೋವಿಡ್-19 ಲಸಿಕೆಯನ್ನು ನಿನ್ನೆ ಹಾಕಿಸಿಕೊಂಡ ಕೆಲವೇ ಹೊತ್ತಿನಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದರು. ಪಶ್ಚಿಮ ಬಂಗಾಳದಲ್ಲಿ ಕೋವಿಡ್-19 ಲಸಿಕೆ ಹಾಕಿಸಿಕೊಂಡ 15 ಸಾವಿರದ 707 ಮಂದಿಯಲ್ಲಿ ನರ್ಸ್ ಕೂಡ ಒಬ್ಬರು.

 20 ವರ್ಷದ ಸೆಕ್ಯುರಿಟಿ ಗಾರ್ಡ್‌ಗೆ ಅಲರ್ಜಿ

20 ವರ್ಷದ ಸೆಕ್ಯುರಿಟಿ ಗಾರ್ಡ್‌ಗೆ ಅಲರ್ಜಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿಯ ಏಮ್ಸ್ ನಿರ್ದೇಶಕ ರಂದೀಪ್ ಗುಲೆರಿಯಾ, ಸುಮಾರು 20 ವರ್ಷದ ಸೆಕ್ಯುರಿಟಿ ಗಾರ್ಡ್ ನಿನ್ನೆ ಸಾಯಂಕಾಲ 4 ಗಂಟೆಯ ಹೊತ್ತಿಗೆ ಲಸಿಕೆ ಹಾಕಿಸಿಕೊಂಡಿದ್ದು ನಂತರ 15ರಿಂದ 20 ನಿಮಿಷಗಳಲ್ಲಿ ಅಲರ್ಜಿ, ತುರಿಕೆ ಎಂದು ಹೇಳಲು ಆರಂಭಿಸಿದರು. ಕೂಡಲೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ನೀಡಿ ಈಗ ಗುಣಮುಖರಾಗುತ್ತಿದ್ದಾರೆ. ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿಪೂರ್ತಿ ಅವರ ಮೇಲೆ ನಿಗಾ ಇರಿಸಿ ಅವರ ಆರೋಗ್ಯವನ್ನು ನಿರಂತರ ತಪಾಸಣೆ ಮಾಡುತ್ತಾ ಬಂದಿದ್ದೇವೆ ಎಂದರು.

 51 ಮಂದಿಯಲ್ಲಿ ಸಣ್ಣಪುಟ್ಟ ಸಮಸ್ಯೆಗಳು

51 ಮಂದಿಯಲ್ಲಿ ಸಣ್ಣಪುಟ್ಟ ಸಮಸ್ಯೆಗಳು

ನಿನ್ನೆ ಲಸಿಕೆ ಹಾಕಿಸಿದ ಮೊದಲ ದಿನ ದೆಹಲಿಯಲ್ಲಿ ಒಬ್ಬ ತೀವ್ರ ಮತ್ತು 51 ಮಂದಿಯಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಂಡುಬಂದಿದೆ. ಕೋಲ್ಕತ್ತಾದಲ್ಲಿ ನಿಲ್ ರತನ್ ಸಿರ್ಕರ್ ವೈದ್ಯಕೀಯ ಕಾಲೇಜಿನಲ್ಲಿ ಲಸಿಕೆ ಹಾಕಿಸಿಕೊಂಡ ದಾದಿ ಸ್ವಲ್ಪ ಹೊತ್ತಿನಲ್ಲಿ ಪ್ರಜ್ಞೆತಪ್ಪಿ ಬಿದ್ದು ಐಸಿಯುನಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಹುಶಃ ಅವರಿಗೆ ಅಲರ್ಜಿಯಾಗಿರಬೇಕು, ಈ ತರದ ಅಲರ್ಜಿಯಾಗುವುದು ಲಸಿಕೆ ನೀಡಿದ ನಂತರ ಸಾಮಾನ್ಯವಾಗಿರುತ್ತದೆ, ಇದರಲ್ಲಿ ಗಾಬರಿಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.

 ನರ್ಸ್ ಅಸ್ತಿಮಾ ರೋಗಿ

ನರ್ಸ್ ಅಸ್ತಿಮಾ ರೋಗಿ

ಔಷಧಿ ತೆಗೆದುಕೊಂಡರೆ ಅಲರ್ಜಿಯಾಗುವ ಸಮಸ್ಯೆ ಈ ನರ್ಸ್ ಗೆ ಮೊದಲಿನಿಂದಲೂ ಇತ್ತಂತೆ. ಅವರು ಅಸ್ತಮಾ ರೋಗಿ ಕೂಡ ಹೌದು. ಆ ರೀತಿಯಲ್ಲಿ, ಇದು ತುಂಬಾ ಸಾಮಾನ್ಯವಾಗಿದೆ. ಇದು ವ್ಯಾಕ್ಸಿನೇಷನ್‌ಗೆ ಸಂಬಂಧಿಸಿವೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ. ಇದು ಇನಾಕ್ಯುಲೇಷನ್ ಕಾರಣವಾಗಿದ್ದರೂ ಸಹ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

English summary
One "severe" and 51 "minor" cases of AEFI (adverse events following immunisation) were reported among health workers who were administered the coronavirus vaccine in Delhi on the first day of the COVID-19 vaccination drive on Saturday, official figures showed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X