ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥನ ಮೇಲೆ 1 ಕೋಟಿ ರು ಮಾನಹಾನಿ ಪ್ರಕರಣ

|
Google Oneindia Kannada News

ನವದೆಹಲಿ, ಜನವರಿ 21: ಬಿಜೆಪಿ ಮಾಹಿತಿ ತಂತ್ರಜ್ಞಾನ ಘಟಕದ (ಐಟಿ ಸೆಲ್) ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ದೆಹಲಿಯ ಇಬ್ಬರು ಮಹಿಳೆಯರು ಮಾನಹಾನಿ ಪ್ರಕರಣ ಹೂಡಿದ್ದಾರೆ.

ಅಮಿತ್ ಮಾಳವೀಯಾ ಅವರು ''ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದಕ್ಷಿಣ ದೆಹಲಿಯ ಶಾಹಿನ್‌ಬಾಗ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಹಣ ಪಡೆದು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಆರೋಪಿಸಿ ತಿರುಚಿದ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು'' ಎಂದು ದೂರುದಾರರು ಆರೋಪಿಸಿದ್ದಾರೆ.

ಬಿಜೆಪಿ ಜೊತೆ ಮುನಿಸು ದೆಹಲಿ ಚುನಾವಣೆಯಿಂದ ದೂರ!ಬಿಜೆಪಿ ಜೊತೆ ಮುನಿಸು ದೆಹಲಿ ಚುನಾವಣೆಯಿಂದ ದೂರ!

ಅಮಿತ ಮಾಳವೀಯಾ ಕ್ರಮ ಖಂಡಿಸಿ ಮೆಹಮೂದ್ ಪ್ರಾಚಾ ಎನ್ನುವ ವಕೀಲರ ಮೂಲಕ ಹೆಸರು ಬಹಿರಂಗಪಡಿಸದ ಇಬ್ಬರು ಮಹಿಳೆಯರು 1 ಕೋಟಿ ರುಪಾಯಿ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದಾರೆ. ''ಭಾರತೀಯ ದಂಡ ಸಂಹಿತೆ, 1860 (ಮಾನಹಾನಿ) ಯ ಸೆಕ್ಷನ್ 500 ರ ಅಡಿಯಲ್ಲಿ ಮಾಳವಿಯಾ ಅವರು ಮಾಡಿರುವ ಅರೋಪಗಳು ನಿರಾಧಾರವಾಗಿದ್ದು, ಸಿಎಎ ಬಗ್ಗೆ ಪ್ರಶ್ನೆ ಮಾಡುವವರನ್ನು ಹತ್ತಿಕ್ಕಲು ಅಮಿತ್ ಮಾಳವಿಯಾ ಮಾಡಿರುವ ವ್ಯವಸ್ಥಿತ ಷ್ಯಡ್ಯಂತ್ರವಾಗಿದೆ'' ಎಂದು ದೆಹಲಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ.

 1 Crore Rupees Defamation Case Against BJP IT Cell Chief

ಮೂಲತಃ ಬ್ಯಾಂಕರ್ ಆಗಿರುವ ಅಮಿತ್ ಮಾಳವಿಯಾ ಅವರು ಸದ್ಯ ಕೇಂದ್ರ ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥರಾಗಿದ್ದು, ಟ್ವಿಟರ್‌ನಲ್ಲಿ 3.87 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ.

English summary
Rs. 1 crore defamation case against BJP IT cell chief Amit Malaviya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X