ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವರ ಹೊಟ್ಟೆ ಕತ್ತರಿಸಿದಾಗ ಸಿಕ್ಕಿದ್ದು ಕೆಜಿ ಕೆಜಿ ಹೆರಾಯಿನ್!

|
Google Oneindia Kannada News

ನವದೆಹಲಿ, ಜನವರಿ.12: ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಅಫ್ಘಾನಿಸ್ತಾನ ಮೂಲದ 7 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ಪ್ಲಾನ್ ಕಂಡು ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ಅಚ್ಚರಿ ಎನಿಸಿದರೂ ಇದು ಸತ್ಯ ಘಟನೆ. ಅಫ್ಘಾನಿಸ್ತಾನದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಏಳು ಮಂದಿ ಮೇಲೆಯ ಹೊಟ್ಟೆಯಲ್ಲಿ ಅನುಮಾನಾಸ್ಪದ ವಸ್ತು ಇರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ವಶಕ್ಕೆ ಪಡೆಯಲಾಗಿತ್ತು.

ದೇವನಹಳ್ಳಿ ಟೋಲ್ ಗೇಟ್ ಬಳಿ ಸಿಕ್ತು ಬರೋಬ್ಬರಿ 233 ಕೆಜಿ ಗಾಂಜಾದೇವನಹಳ್ಳಿ ಟೋಲ್ ಗೇಟ್ ಬಳಿ ಸಿಕ್ತು ಬರೋಬ್ಬರಿ 233 ಕೆಜಿ ಗಾಂಜಾ

ಡಿಸೆಂಬರ್.28ರಂದು ಅಫ್ಘಾನಿಸ್ತಾನದಿಂದ ದೆಹಲಿಗೆ ಆಗಮಿಸಿದ್ದ ಏಳು ಮಂದಿಯನ್ನು ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಮಾದಕವಸ್ತುಗಳನ್ನು ಹೊಟ್ಟೆಯಲ್ಲಿಟ್ಟುಕೊಂಡು ಸಾಗಿಸುತ್ತಿದ್ದರು ಎಂಬ ವಿಚಾರ ಹೊರ ಬಿದ್ದಿದೆ.

1.623 Kgs Of Heroin Presence In 7 Afghan Nationals Stomach

ಹೊಟ್ಟೆಯಲ್ಲೇ 1.623 ಕೆಜಿ ಹೆರಾಯಿನ್:

ಏಳು ಮಂದಿ ಆರೋಪಿಗಳು ಹೊಟ್ಟೆಯಲ್ಲೇ 1.623 ಕೆಜಿ ಹೆರಾಯಿನ್ ಪತ್ತೆಯಾಗಿದೆ. ವೈದ್ಯಕೀಯ ಶಸ್ತ್ರಚಿಕಿತ್ಸೆ ಮೂಲಕ ಆರೋಪಿಗಳ ಹೊಟ್ಟೆಯಲ್ಲಿದ್ದ ಮಾದಕ ವಸ್ತುವನ್ನು ಹೊರ ತೆಗೆದಿದ್ದು, ದೆಹಲಿಯ ಮಾದಕ ವಸ್ತುಗಳ ನಿಯಂತ್ರಣ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಇನ್ನು, ಬಂಧಿತ ಆರೋಪಿಗಳನ್ನು ಯೂಸಫ್ ಜೈ ರಹಮತ್ ಉಲ್ಲಾ, ಫಯಾಜ್ ಮೊಹಮ್ಮದ್, ನಬೀಜದಾ ಹಬೀಬ್ ಉಲ್ಲಾ, ಅಹ್ಮದ್ ಅಬ್ದುಲ್ ವದೂದ್, ತುರ್ಕಮನ್ ಅಬ್ದುಲ್ ಹಮೀದ್, ಫಯಾಜ್ ಅಹ್ಮದ್, ನೂರ್ ಜೈ ಕಬೀರ್, ಹಯಾತ್ ಉಲ್ಲಾ, ಮತ್ತು ಮಸೂದ್ ಮಹ್ಮದ್ ಎಂದು ಗುರುತಿಸಲಾಗಿದೆ.

English summary
7 Afghan Nationals Arrested From Narcotics Control Bureau Officers. 1.623 Kgs Of Heroin Seized In Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X