ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಸಂಖ್ಯೆ ಆಧಾರದಲ್ಲಿ ಐಸಿಎಂಆರ್ ಸಮೀಕ್ಷೆ: ಕೊರೊನಾ ಕುರಿತು ಅಚ್ಚರಿ ವರದಿ

|
Google Oneindia Kannada News

ದೆಹಲಿ, ಜೂನ್ 9: ಭಾರತದಲ್ಲಿ ಕೊರೊನಾ ವೈರಸ್ ಭೀಕರತೆಯ ಮುನ್ಸೂಚನೆ ನೀಡುತ್ತಿದೆ. ಪ್ರತಿದಿನ ಸುಮಾರು 10 ಸಾವಿರ ಹೊಸ ಕೇಸ್‌ಗಳು ವರದಿಯಾಗುತ್ತಿದೆ. ಜಗತ್ತಿನ ಅತಿ ದೊಡ್ಡ ಜನಸಂಖ್ಯೆ ರಾಷ್ಟ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತಕ್ಕೆ ಸಹಜವಾಗಿ ಆತಂಕ ಹೆಚ್ಚಿದೆ.

Recommended Video

DK Shivakumar finally gets good news from BS Yediyurappa | Oneindia Kannada

ಅಮೆರಿಕ, ರಷ್ಯಾ, ಬ್ರೆಜಿಲ್, ಯುಕೆ ಅಂತಹ ರಾಷ್ಟ್ರಗಳಲ್ಲಿನ ಪರಿಸ್ಥಿತಿ ನೋಡಿದ್ರೆ, 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕೊರೊನಾ ವೈರಸ್ ನಿಯಂತ್ರಣ ತಪ್ಪಿದರೆ ಏನಾಗಬಹುದು ಎಂದು ಊಹಿಸುವುದು ಕೂಡ ಅಸಾಧ್ಯ.

ಕೊರೊನಾ 'ಗಂಭೀರ' ಪ್ರಕರಣಗಳಲ್ಲಿ ಅಮೆರಿಕ ನಂತರದ ಸ್ಥಾನದಲ್ಲಿ ಭಾರತಕೊರೊನಾ 'ಗಂಭೀರ' ಪ್ರಕರಣಗಳಲ್ಲಿ ಅಮೆರಿಕ ನಂತರದ ಸ್ಥಾನದಲ್ಲಿ ಭಾರತ

ಇಂತಹ ಆತಂಕದ ಸಮಯದಲ್ಲಿ ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಜನಸಂಖ್ಯೆ ಆಧಾರದಲ್ಲಿ ಸಮೀಕ್ಷೆ (ಸೆರೋ ಸಮೀಕ್ಷೆ) ಮಾಡಿದೆ. ಈ ಸಮೀಕ್ಷೆಯಲ್ಲಿ ಅಚ್ಚರಿ ವಿಷಯ ಹೊರಬಿದ್ದಿದೆ. ಮುಂದೆ ಓದಿ....

15-30 ರಷ್ಟು ಜನರಿಗೆ ಸೋಂಕು

15-30 ರಷ್ಟು ಜನರಿಗೆ ಸೋಂಕು

ದೇಶದ ಪ್ರಮುಖ ಹಾಟ್‌ಸ್ಪಾಟ್‌ಗಳಲ್ಲಿನ ಕಂಟೈನ್‌ಮೆಂಟ್‌ ಜೋನ್‌ ಪ್ರದೇಶಗಳಲ್ಲಿ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಸೋಂಕಿಗೆ ಒಳಗಾಗಲಿದ್ದಾರೆ ಮತ್ತು ಬೆಳಕಿಗೆ ಬರದೆ ಗುಣುಮುಖರಾಗಲಿದ್ದಾರೆ ಎಂದು ಐಸಿಎಂಆರ್ ಹೇಳಿದೆ. ಮೂರನೇ ಒಂದು ಭಾಗ ಅಂದ್ರೆ ಶೇಕಡಾ 15-30 ರಷ್ಟು ಕೇಸ್‌ಗಳು ವರದಿಯಾಗಲಿದೆ ಎಂಬ ಅಚ್ಚರಿ ವಿಷಯವನ್ನು ಹೊರಹಾಕಿದೆ.

ಹಾಟ್‌ಸ್ಪಾಟ್‌ ನಗರಗಳಲ್ಲಿ ಹೆಚ್ಚು ಸೋಂಕು

ಹಾಟ್‌ಸ್ಪಾಟ್‌ ನಗರಗಳಲ್ಲಿ ಹೆಚ್ಚು ಸೋಂಕು

ರಾಜ್ಯ ಸರ್ಕಾರಗಳ ಸಹಾಯದಿಂದ ದೇಶದ 70 ಜಿಲ್ಲೆಗಳಿಂದ ಸುಮಾರು 24,000 ಮಾದರಿಗಳನ್ನು ಸಂಗ್ರಹಿಸಿದೆ. ಮುಂಬೈ, ಅಹಮದಬಾದ್, ಪುಣೆ, ದೆಹಲಿ, ಕೊಲ್ಕತ್ತಾ, ಇಂದೋರ್, ಥಾಣೆ, ಜೈಪುರ, ಚೆನ್ನೈ, ಮುಂಬೈ ಹಾಗೂ ಸೂರತ್‌ ನಗರಗಳು ಕೊರೊನಾ ಹಾಟ್‌ಸ್ಪಾಟ್‌ ಆಗಿದೆ. ಪ್ರಮುಖವಾಗಿ ಈ ನಗರಗಳ ಜನಸಂಖ್ಯೆ ಆಧಾರದ ಮೇಲೆ ಐಸಿಎಂಆರ್ ಸಂಶೋಧನೆ ನಡೆಸಿದೆ. ಇಲ್ಲಿನ ಶೇಕಡಾ 70 ರಷ್ಟು ಜನರನ್ನು ಪರೀಕ್ಷೆಗೆ ಒಳಪಡಿಲಾಗಿದೆ. ಪ್ರತಿ ಪ್ರದೇಶದಲ್ಲೂ 500 ಮಾದರಿ ಸಂಗ್ರಹಿಸಲಾಗಿದೆ. ಇನ್ನುಳಿದಂತೆ 21 ರಾಜ್ಯಗಳ 60 ಜಿಲ್ಲೆಗಳಲ್ಲಿ 400 ಸ್ಯಾಂಪಲ್ ಸಂಗ್ರಹಿಸಿದೆ.

ಕೊರೊನಾ ವೈರಸ್ ಹಾವಳಿ: ಚೀನಾ ಹಿಂದಿಕ್ಕಿದ ಮಹಾರಾಷ್ಟ್ರಕೊರೊನಾ ವೈರಸ್ ಹಾವಳಿ: ಚೀನಾ ಹಿಂದಿಕ್ಕಿದ ಮಹಾರಾಷ್ಟ್ರ

ಕಂಟೈನ್‌ಮೆಂಟ್‌ ಜೋನ್‌ನಿಂದಲೇ ಸೋಂಕು ಹರಡಿದೆ

ಕಂಟೈನ್‌ಮೆಂಟ್‌ ಜೋನ್‌ನಿಂದಲೇ ಸೋಂಕು ಹರಡಿದೆ

ಕಂಟೈನ್‌ಮೆಂಟ್ ಜೋನ್‌ ಪ್ರದೇಶಗಳಿಂದಲೇ ಉಳಿದ ಕಡೆ ಸೋಂಕು ಹರಡಿದೆ ಎಂದು ಐಸಿಎಂಆರ್ ತಿಳಿಸಿದೆ. ಕೊಲ್ಕತ್ತಾ, ಸೂರತ್ ಹಾಗೂ ಇನ್ನಿತರ 6 ಜಿಲ್ಲೆಗಳನ್ನು ಬಿಟ್ಟು ಉಳಿದ ಎಲ್ಲ ಕಂಟೈನ್‌ಮೆಂಟ್‌ ಜೋನ್‌ಗಳಲ್ಲಿರುವ ಜನರಿಂದ ಸೋಂಕು ಹರಡಿದೆ. ಮುಂಬೈ, ಪುಣೆ, ದೆಹಲಿ, ಅಹಮದಬಾಸ್, ಇಂದೋರ್‌ನಲ್ಲಿ ಹೆಚ್ಚು ಸೋಂಕು ಸ್ಫೋಟಗೊಂಡಿದೆ.

ಸಮುದಾಯಕ್ಕೆ ಹರಿಡಿದ್ರೆ ಕಥೆ ಏನು?

ಸಮುದಾಯಕ್ಕೆ ಹರಿಡಿದ್ರೆ ಕಥೆ ಏನು?

ಕೊರೊನಾ ವೈರಸ್ ಸಮುದಾಯ ಹಂತ ತಲುಪಿದರೆ ಸೋಂಕಿತರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಆದರೆ, ಇದುವರೆಗೂ ಯಾವ ರಾಜ್ಯದಲ್ಲೂ, ಯಾವ ಕಂಟೈನ್ ಮೆಂಟ್‌ ಜೋನ್‌ನಲ್ಲಿ ಸಮುದಾಯ ಹಂತಕ್ಕೆ ತಲುಪಿದ್ದೇವೆ ಎಂದು ಅಧಿಕೃತವಾಗಿ ಹೇಳಿಲ್ಲ. 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಒಂದು ವೇಳೆ ಸಮುದಾಯ ಹಂತಕ್ಕೆ ಕೊರೊನಾ ವೈರಸ್ ತಲುಪಿದರೆ ಪರಿಣಾಮ ಏನಾಗಬಹುದು ಎಂಬುದರ ಬಗ್ಗೆ ಹೆಚ್ಚು ಆತಂಕ ಕಾಡುತ್ತಿದೆ.

English summary
Almost 1/3 Indians may have been infected from Covid-19 says ICMR (Indian Council of Medical Research) Study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X