ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರ್ಣಮಯ ಮೈಸೂರು ಯುವ ದಸರಾಗೆ ಭಾನುವಾರ ಚಾಲನೆ

|
Google Oneindia Kannada News

ಮೈಸೂರು,ಸೆಪ್ಟೆಂಬರ್ 29 : ನವ ನಿರ್ಮಿತ ಆಪತ್ತುಗಳ' ಮೇಲೆ ಈ ಸಾಲಿನ ದಸರಾ ಮಹೋತ್ಸವದ ಯುವ ಸಂಭ್ರಮ' ಗಮನಸೆಳೆಯಲಿದೆ. ಸೆ.30ರ (ಭಾನುವಾರ)ದಿಂದ ಅ.7ರವರೆಗೆ ನಡೆಯಲಿರುವ ಯುವ ಸಂಭ್ರಮದಲ್ಲಿ ವಿವಿಧ ಜಿಲ್ಲೆಗಳ 157 ಕಾಲೇಜುಗಳ ತಂಡಗಳು ಪಾಲ್ಗೊಳ್ಳುತ್ತಿವೆ.

ದಸರಾ ಕ್ರೀಡಾಕೂಟದಲ್ಲಿ ಅವಕಾಶ ವಂಚಿತರಾದ ಗ್ರಾಮೀಣ ಕ್ರೀಡಾಪಟುಗಳು ದಸರಾ ಕ್ರೀಡಾಕೂಟದಲ್ಲಿ ಅವಕಾಶ ವಂಚಿತರಾದ ಗ್ರಾಮೀಣ ಕ್ರೀಡಾಪಟುಗಳು

ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ನಡೆಯಲಿದ್ದು, ಈ ಬಾರಿ 8 ದಿನಗಳಿಗೆ ಹೆಚ್ಚಿಸಲಾಗಿದೆ. ದಿನವೊಂದಕ್ಕೆ 20 ತಂಡಗಳು ಪ್ರದರ್ಶನ ನೀಡಲಿವೆ. ಒಂದು ತಂಡದಲ್ಲಿ ಕನಿಷ್ಠ 30 ಮಂದಿ. ಗರಿಷ್ಠ 60 ಕಲಾವಿದರು ಪಾಲ್ಗೊಳ್ಳಲಿದ್ದಾರೆ.

ಮಂಗಳೂರು: ದಸರಾ ರಜೆ ಕಡಿತಗೊಳಿಸಿರುವುದಕ್ಕೆ ಬಜರಂಗದಳ ವಿರೋಧ ಮಂಗಳೂರು: ದಸರಾ ರಜೆ ಕಡಿತಗೊಳಿಸಿರುವುದಕ್ಕೆ ಬಜರಂಗದಳ ವಿರೋಧ

ಅಂದಾಜು 157 ತಂಡಗಳಿಂದ 7.5 ಸಾವಿರ ಯುವಕ, ಯುವತಿಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ದಕ್ಷಿಣ ಕನ್ನಡ, ಧಾರವಾಡ, ಬೆಂಗಳೂರು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳ ಕಾಲೇಜುಗಳು ಭಾಗವಹಿಸುತ್ತಿವೆ.

Yuva Dasara kicks off from Sunday

ಸೆ.30ರ ನಾಳೆ ಸಂಜೆ 6 ಗಂಟೆಗೆ ಯುವ ಸಂಭ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾ.ರಾ.ಮಹೇಶ್, ಜಯ ಮಾಲ, ನಟಿ ಹರ್ಷಿಕಾ ಪೂಣಚ್ಚ ಭಾಗವಹಿಸಲಿದ್ದು, ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.

ದಸರಾ ವಸ್ತು ಪ್ರದರ್ಶನ: ಈ ಬಾರಿ ಪ್ರಾಧಿಕಾರವೇ ನಿರ್ವಹಿಸಲಿದೆಯಾ? ದಸರಾ ವಸ್ತು ಪ್ರದರ್ಶನ: ಈ ಬಾರಿ ಪ್ರಾಧಿಕಾರವೇ ನಿರ್ವಹಿಸಲಿದೆಯಾ?

ಕೇರಳ ಹಾಗೂ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಬಗ್ಗೆಯೂ ಕಾರ್ಯಕ್ರಮಗಳನ್ನು ನೀಡುವಂತೆ ವಿವಿಧ ತಂಡಗಳಿಗೆ ಸೂಚಿಸಲಾಗಿದೆ. ಅದರ ಜತೆಯಲ್ಲಿ ಪರಿಸರ ಸಂರಕ್ಷಣೆ, ಜಾನಪದ ಕಲೆ, ರಾಷ್ಟ್ರೀಯ ಭಾವೈಕ್ಯತೆ, ಕನ್ನಡ ಮತ್ತು ಸಂಸ್ಕೃತಿ, ಸ್ವಾತಂತ್ರ್ಯ ಚಳವಳಿ ಹಾಗೂ ಮಹಿಳಾ ಸಬಲೀಕರಣ ಕುರಿತ ಕಾರ್ಯಕ್ರಮಗಳೂ ಇರಲಿವೆ.

English summary
Most colorful and joyful event in Mysuru Dasara festival, Yuva Dasara will kick off from September 30 in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X