• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯೋಗ ಪ್ರದರ್ಶನ:ಮತ್ತೊಂದು ವಿಶ್ವ ದಾಖಲೆಗೆ ಸಿದ್ಧವಾಗುತ್ತಿದೆ ಮೈಸೂರು

|

ಮೈಸೂರು, ಮೇ 15 : ಮುಂದಿನ ತಿಂಗಳು ಜೂನ್ 21ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆಯಂದು ಮತ್ತೊಂದು ವಿಶ್ವದಾಖಲೆಗೆ ಮುನ್ನುಡಿಯಿಡಲು ಅನೇಕ ಸಂಘ- ಸಂಸ್ಥೆಗಳು ಮುಂದಾಗಿವೆ. ಇದಕ್ಕೆ ಪೂರಕವೆಂಬಂತೆ ಕಳೆದ ಕೆಲವು ದಿನಗಳಿಂದಲೂ ಮೈಸೂರು ಯೋಗ ಒಕ್ಕೂಟದ ವತಿಯಿಂದ ನಗರದಲ್ಲಿ ತಾಲೀಮು ಸಹ ನಡೆಯುತ್ತಿದೆ.

ಕಳೆದ ವರ್ಷ 55,506 ಮಂದಿ ಸೇರಿ ಒಟ್ಟಾಗಿ ಯೋಗ ಕಾರ್ಯಕ್ರಮವನ್ನು ನಡೆಸಿದ್ದರು. ಈ ವರ್ಷ ಅದೇ ರೇಸ್ ಕೋರ್ಸ್ ಆವರಣದಲ್ಲಿ ಒಂದೂವರೆ ಲಕ್ಷ ಮಂದಿಯನ್ನು ಸೇರಿಸಿ ಗಿನ್ನಿಸ್ ದಾಖಲೆ ನಿರ್ಮಿಸುವ ಉದ್ದೇಶವಿದೆ. ಜಿಲ್ಲಾಡಳಿತ ಹಾಗೂ ಸುತ್ತೂರು ಮಠ ಯೋಗ ದಿನದ ಉಸ್ತುವಾರಿ ವಹಿಸಿಕೊಳ್ಳಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಯೋಗವನ್ನು ರಾಜಕೀಯ ಲಾಭಕ್ಕೆ ಬಳಸುತ್ತಿದ್ದಾರೆ ಮೋದಿ: ಕಾಂಗ್ರೆಸ್

ಅಲ್ಲದೇ 1,100 ಯೋಗ ಶಿಕ್ಷಕರನ್ನು ನಿಯೋಜಿಸಲಾಗಿದ್ದು, ಮನೆಗಳು, ಖಾಸಗಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳಿಗೆ ಭೇಟಿ ಮಾಡಿ ಯೋಗಾಸಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರುವಂತೆ ಸಿದ್ಧತೆ ನಡೆಸಿದೆ.

ಮೈಸೂರಿನ ವಿವಿಧ ಕಡೆಗಳಲ್ಲಿಯೂ ಯೋಗ ಪಟುಗಳ ಪೂರ್ವಾಭ್ಯಾಸಗಳು ನಡೆಯುತ್ತಿದ್ದು, ಮುಂದಿನ ಐದು ಭಾನುವಾರಗಳೂ ಈ ಪೂರ್ವಾಭ್ಯಾಸಗಳು ನಡೆದು, ಅಂತಾರಾಷ್ಟ್ರೀಯ ಯೋಗ ದಿನಕ್ಕೂ ಮುನ್ನ ಮೈಸೂರು ಅರಮನೆ ಮತ್ತು ರೇಸ್ ಕೋರ್ಸ್ ಮೈದಾನದಲ್ಲಿ ಅಂತಿಮ ಪೂರ್ವಾಭ್ಯಾಸ ನಡೆಸಲು ಯೋಜನೆ ರೂಪಿಸಲಾಗಿದೆ.

ಯೋಗಾಸನದಲ್ಲಿ 3 ನೇ ಬಾರಿ ವಿಶ್ವದಾಖಲೆ ಬರೆದ ಉಡುಪಿಯ ತನುಶ್ರೀ ಪಿತ್ರೋಡಿ

ಈಗಾಗಲೇ 1, 100 ಯೋಗ ಶಿಕ್ಷಕರನ್ನು ನಿಯೋಜಿಸಲಾಗಿದ್ದು, ಅವರು ಶಾಲಾ-ಕಾಲೇಜು, ಸಂಘ ಸಂಸ್ಥೆಗಳು, ದೊಡ್ಡ ದೊಡ್ಡ ಕಂಪೆನಿಗಳಿಗೆ ಹೋಗಿ ಯೋಗ ದಿನದಂದು ಯೋಗ ಪ್ರದರ್ಶನದಲ್ಲಿ ಭಾಗವಹಿಸುವಂತೆ ಮಾಡಲಾಗುವುದು. ಈ ಬಾರಿ 1.50 ಲಕ್ಷದಷ್ಟು ಯೋಗಪಟುಗಳು ಭಾಗವಹಿಸಿ, ವಿಶ್ವ ದಾಖಲೆ ಮಾಡುವ ಪ್ರಯತ್ನ ನಡೆಯುತ್ತಿದೆ.

ದಸರೆ ರಂಗೇರಿಸಲು ಸಜ್ಜು: ಈ ಬಾರಿ 'ಮನೆ ಮನೆಗೆ ಯೋಗ'

ಈ ಬಾರಿ ವ್ಯಾಪಕ ಪ್ರಚಾರ ನೀಡಿ ಯೋಗಪಟುಗಳನ್ನು ಒಂದೆಡೆ ಕಲೆ ಹಾಕಿ ದಾಖಲೆ ನಿರ್ಮಿಸಲು ಪ್ರತಿ ಮನೆ, ಖಾಸಗಿ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳಿಗೆ ಭೇಟಿ ನೀಡಲು 1,100 ಯೋಗ ತರಬೇತುದಾರರನ್ನು ನಿಯೋಜಿಸಲಾಗಿದೆ.

2015 ಮತ್ತು 2016ರಲ್ಲಿ 10,000 ಯೋಗ ಪಟುಗಳು ಭಾಗವಹಿಸಿದ್ದರು. 2017ರಲ್ಲಿ 55,506 ಯೋಗಪಟುಗಳು ಭಾಗವಹಿಸಿ ವಿಶ್ವ ದಾಖಲೆ ಮಾಡಿದ್ದಾರೆ. ಜಿಲ್ಲಾಧಿಕಾರಿಯಾಗಿದ್ದ ಡಿ.ರಂದೀಪ್ ನೇತೃತ್ವದ ಜಿಲ್ಲಾಡಳಿತದ ಸಹಯೋಗದಿಂದ ಈ ಕಾರ್ಯ ಯಶಸ್ವಿಯಾಗಿ ನಡೆಸಲಾಗಿತ್ತು.

English summary
Yoga show:Mysuru is ready for another world record. The information is available that the district administration and Suttur Mutt will taken incharge of the yoga day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X