ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯೋಗ ದಿನಕ್ಕೆ ಮೈಸೂರಿನಲ್ಲಿ ನಡೆದಿದೆ ಭಾರೀ ತಯಾರಿ

|
Google Oneindia Kannada News

ಮೈಸೂರು, ಜೂನ್ 3: ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದೆದೆ. ಇದನ್ನು ಸ್ಮರಣೀಯಗೊಳಿಸುವ ಸಲುವಾಗಿ ಮೈಸೂರಿನಲ್ಲಿ ಯೋಗಪಟುಗಳು ವಿಶ್ವ ದಾಖಲೆಗೈಯಲು ಪೂರ್ವ ತಾಲೀಮು ನಡೆಸುತ್ತಿದ್ದಾರೆ. ಯೋಗ ಫೆಡರೇಷನ್ ಆಫ್ ಟ್ರಸ್ಟ್‌ ಆಯೋಜಿಸಿದ್ದ ಈ ಪೂರ್ವಭಾವಿ ಪ್ರದರ್ಶನದಲ್ಲಿ 500ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ಸಾಂಸ್ಕೃತಿಕ ನಗರಿ ಮೈಸೂರಿಗೆ ಈ ಬಾರಿಯೂ 'ಯೋಗ' ಇಲ್ಲ! ಸಾಂಸ್ಕೃತಿಕ ನಗರಿ ಮೈಸೂರಿಗೆ ಈ ಬಾರಿಯೂ 'ಯೋಗ' ಇಲ್ಲ!

ಜಿಲ್ಲಾಡಳಿತ, ಯೋಗ ಸ್ಪೋರ್ಟ್ ಫೌಂಡೇಷನ್ (ವೈಎಸ್ ಎಫ್), ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್‌ಪಿವೈಎಸ್ ‌ಎಸ್‌), ಮೈಸೂರು ಯೋಗ ಒಕ್ಕೂಟ, ಬಾಬಾ ರಾಮದೇವ್ ಭಾರತ್ ಸ್ವಾಭಿಮಾನಿ ಟ್ರಸ್ಟ್‌ ಸೇರಿದಂತೆ ವಿವಿಧ ಸಂಘಟನೆಗಳು ಸಂಗಚಧ್ವಂ, ಸಂವದಧ್ವಂ ಸಂವೋ ಮನಾಂಸಿ ಜಾನತಾಮ್...ಎಂಬ ಪ್ರಾರ್ಥನೆಯೊಂದಿಗೆ ಯೋಗಾಭ್ಯಾಸವನ್ನು ಅರಮನೆ ಮುಂಭಾಗದಲ್ಲಿ 45 ನಿಮಿಷ ನಡೆಸುತ್ತಿವೆ.

Yoga rehearsal held ahead of International Yoga Day in Mysore

ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಒಟ್ಟು 19 ಬಗೆಯ ಆಸನಗಳು ಹಾಗೂ 4 ಬಗೆಯ ಪ್ರಾಣಾಯಾಮಗಳು ಇರಲಿವೆ. ತಾಡಾಸನ, ವೃಕ್ಷಾಸನ, ಪಾದಹಸ್ತಾಸನ-1, ಪಾದಹಸ್ತಾಸನ-2, ಅರ್ಧ ಚಕ್ರಾಸನ, ತ್ರಿಕೋನಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಶಶಾಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧ ಹಲಾಸನ, ಪವನಯುಕ್ತಾಸನ ಹಾಗೂ ಶವಾಸನಗಳು ಯೋಗದಿನದಂದು ಪ್ರದರ್ಶನಗೊಳ್ಳಲಿದೆ. ಪ್ರಾಣಾಯಾಮಗಳಲ್ಲಿ ಕಪಾಲಭಾತಿ, ನಾಡಿಶೋಧನ, ಶೀತಲೀ, ಭ್ರಾಮರಿ ಹಾಗೂ ಕೊನೆಯಲ್ಲಿ ಧ್ಯಾನ ಇರಲಿದೆ.

English summary
on behalf of preparation for the International Yoga Day on June 21, District Administration, in association with Yoga Federation of Mysore and other Yoga organisations, had organised a rehearsal. About 500 individuals participated in the yoga session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X